More

    ಬಸ್​ ಚಾಲಕನ ರಕ್ತದೊತ್ತಡ ತಗ್ಗಿ ಅಪಘಾತ; ಕ್ಯಾಂಟರ್​ಗೆ ಡಿಕ್ಕಿ ಹೊಡೆದ ಕೆಎಸ್​ಆರ್​ಟಿಸಿ ಬಸ್​

    ಶ್ರೀರಂಗಪಟ್ಟಣ: ಚಾಲಕನ ನಿಯಂತ್ರಣ ಕಳೆದುಕೊಂಡ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸೊಂದು ರಸ್ತೆ ಬದಿಯ ಅಂಗಡಿ ಮಳಿಗೆಗಳಿಗೆ ನುಗ್ಗಿ ಡಿಕ್ಕಿಯಾಗಿ ನಿಂತಿದೆ. ತಾಲೂಕಿನ ಬಾಬುರಾಯನಕೊಪ್ಪಲಿನಲ್ಲಿ ಶನಿವಾರ ರಾತ್ರಿ 8ರ ವೇಳೆ ಘಟನೆ ನಡೆದಿದ್ದು, ಬಸ್ಸಿನೊಳಗಿದ್ದ ಎಲ್ಲ 36 ಪ್ರಯಾಣಿಕರು ಸಣ್ಣ-ಪುಟ್ಟ ಏಟುಗಳಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಡಿಪೋಗೆ ಸೇರಿದ ಈ ಸರ್ಕಾರಿ ಬಸ್ಸು ಮೈಸೂರಿನಿಂದ ಬೆಂಗಳೂರಿಗೆ ರಾತ್ರಿ ಹೊರಟಿದೆ. ಈ ವೇಳೆ ಮಾರ್ಗ ಮಧ್ಯೆ ತಾಲೂಕಿನ ಬಾಬುರಾಯನಕೊಪ್ಪಲು ಬಳಿ ಚಾಲಕ ಮಂಜುನಾಥ್ ಎಂಬುವರು ಏಕಾಏಕಿ ರಕ್ತದೊತ್ತಡಕ್ಕೆ ಸಿಲುಕಿದ ಕಾರಣ ಮೂರ್ಛೆ ಹೋಗಿದ್ದು, ಚಾಲಕ ಬಸ್ಸನ್ನು ನಿಲ್ಲಿಸಲು ಪ್ರಯತ್ನಿಸಿದ್ದರೂ ನಿಯಂತ್ರಣ ತಪ್ಪಿದೆ.

    ಈ ವೇಳೆ ಬಸ್ಸು ಸೀದಾ ಹೆದ್ದಾರಿ ಬದಿಯ ಪುಟ್​ಪಾತ್​ನ ಅಂಗಡಿ ಮಳಿಗೆಗಳ ಮುಂಭಾಕ್ಕೆ ನುಗ್ಗಿದ್ದು, ಅದೃಷ್ಟವಶಾತ್ ಅಂಗಡಿ‌ ಮುಂಭಾಗ ನಿಂತಿದ್ದ ಒಂದಷ್ಟು ಜನರು ಸ್ಥಳದಿಂದ ತಕ್ಷಣ ಕಾಲ್ಕಿತ್ತು ಎದ್ದುಬಿದ್ದು ಓಡಿದ್ದಾರೆ. ಈ ವೇಳೆ ರಸ್ತೆ ಬದಿ ನಿಂತಿದ್ದ ಬೈಕ್ ಮೇಲೆ ಹರಿದ ಬಸ್ಸು ಮುಂಭಾಗದಲ್ಲಿದ್ದ ಕ್ಯಾಂಟರ್ ವಾಹನ ಹಾಗೂ ಮರವೊಂದಕ್ಕೆ ಡಿಕ್ಕಿಯಾಗಿ ನಿಂತಿದೆ.

    ಬಸ್ಸಿನಲ್ಲಿದ್ದ ಜನರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದು, ಬಸ್ಸಿನ ನಿರ್ವಾಹಕ ಅರುಣ್ ಕುಮಾರ್ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಮತ್ತೊಂದು ಬಸ್ಸುಗಳಿಗೆ ಹತ್ತಿಸಿ ಅವರವರ ಸ್ಥಳಕ್ಕೆ ಕಳುಹಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಹೆದ್ದಾರಿ ಪೊಲೀಸರು ಚಾಲಕ ಮಂಜುನಾಥ್ ಅವರನ್ನು ತಕ್ಷಣ ತಮ್ಮ ವಾಹನದಲ್ಲೇ ತಾಲೂಕು ಸಾರ್ವಜನಿಕ ಆಸ್ಪತ್ರೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಆಗಮಿಸಿದ ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲುಸಿಕೊಂಡಿದ್ದಾರೆ.

    ಬಸ್​ ಚಾಲಕನ ರಕ್ತದೊತ್ತಡ ತಗ್ಗಿ ಅಪಘಾತ; ಕ್ಯಾಂಟರ್​ಗೆ ಡಿಕ್ಕಿ ಹೊಡೆದ ಕೆಎಸ್​ಆರ್​ಟಿಸಿ ಬಸ್​
    ಬಸ್ ಡಿಕ್ಕಿ ಹೊಡೆದಿದ್ದ ಕ್ಯಾಂಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts