2,362 ಕೋಟಿ ರೂ. ಮೌಲ್ಯದ ಮಾದಕ ವಸ್ತು ದಹನ; ಎಲ್ಲಿ, ಏಕೆ?

Police
Published on

ನವದೆಹಲಿ: ಕೆಟ್ಟದ್ದನ್ನು ಸುಟ್ಟು ಹಾಕಬೇಕು ಎಂಬ ಮಾತಿನಂತೆ ಇಲ್ಲೊಂದು ಕಡೆ ಪೊಲೀಸರು ಅದನ್ನು ಅಕ್ಷರಶಃ ಜಾರಿಗೆ ತಂದಿದ್ದಾರೆ. ಅಂದರೆ 2,362 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಪೊಲೀಸರು ಸುಟ್ಟು ನಾಶ ಮಾಡಿದ್ದಾರೆ.

18.24 ಕೆಜಿ ಹೆರಾಯ್ನ್, 753.04 ಕೆಜಿ ಮಾದಕ ಮಾತ್ರೆ ಸೇರಿ ಒಟ್ಟು 934 ಕೆ.ಜಿ. ತೂಕದ ಮಾದಕ ವಸ್ತುಗಳನ್ನು ಈ ಪೊಲೀಸರು ಸುಟ್ಟು ಹಾಕಿದ್ದಾರೆ. ಜೂ.26ರಂದು ವಿಶ್ವ ಮಾದಕ ವಸ್ತು ದಿನದ ಆಚರಣೆ ಹಿನ್ನೆಲೆಯಲ್ಲಿ ಮುಂಚಿತವಾಗಿ ಇಂಥದ್ದೊಂದು ಕೆಲಸವನ್ನು ಮಾಡಿದ್ದಾರೆ.

ಅಂದಹಾಗೆ ಇದು ಮಿಜೋರಾಂ ರಾಜ್ಯದಲ್ಲಿ ನಡೆದಿರುವುದು. ಇಲ್ಲಿ ಗೃಹಸಚಿವ ಹಾಗೂ ಡಿಜಿಪಿ ಅವರ ಸಮ್ಮುಖದಲ್ಲಿ ಪೊಲೀಸ್ ಅಧಿಕಾರಿಗಳು ಇಲ್ಲಿನ ಐಜ್ವಾಲ್​ನ ಖಾಸಗಿ ಆಸ್ಪತ್ರೆಯೊಂದರಲ್ಲಿನ ಇನ್​ಸಿನೆರೇಟರ್​ನಲ್ಲಿ (ತ್ಯಾಜ್ಯವನ್ನು ಸುಟ್ಟುಹಾಕುವ ಫರ್ನೇಸ್​ನಲ್ಲಿ) ಹಾಕಿ ಸುಟ್ಟುಹಾಕಿದ್ದಾರೆ. ಹೀಗೆ ಸುಟ್ಟುಹಾಕಲಾಗಿರುವ ಮಾದಕವಸ್ತುಗಳ ಒಟ್ಟು ಮೌಲ್ಯ ಅಂತಾರಾಷ್ಟ್ರೀಯ ಮಾರ್ಕೆಟ್​ನಲ್ಲಿ 2,362 ಕೋಟಿ ರೂ. ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net