ರಸ್ತೆ ತಡೆಗೋಡೆಗೆ ಬುಲೆರೋ ಡಿಕ್ಕಿ; ನಾಲ್ವರು ದುರ್ಮರಣ | Bulero Collides

dk - 2025-04-18T093415.215
Published on

Bulero Collides : ರಾಯಚೂರು: ಬುಲೆರೋ ಮ್ಯಾಕ್ಸ್ ಗೂಡ್ಸ್ ವಾಹನವೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ದೇವದುರ್ಗದ ತಾಲೂಕಿನ ಅಮರಪುರ ಕ್ರಾಸ್ ಬಳಿ ಶುಕ್ರವಾರ ಬೆಳ್ಳಂಬೆಳಗ್ಗೆ ಜರುಗಿದೆ.

ಆಂಧ್ರಪ್ರದೇಶದ ಹಿಂದೂಪುರ ಮೂಲದ ನಾಗರಾಜ್(28), ಸೋಮ(38), ನಾಗಭೂಷಣ(36) ಮತ್ತು ಮುರಳಿ(38) ಮೃತರು ಎಂದು ಗುರತಿಸಲಾಗಿದೆ.

ಬೊಲೆರೋ ಮ್ಯಾಕ್ಸ್ ಪಿಕಪ್ ಗೂಡ್ಸ್ ವಾಹನದಲ್ಲಿ ಹಿಂದೂಪುರ ಕಡೆಯಿಂದ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆಯುವ ಸಂತೆಗೆ ಕುರಿ ಕೊಂಡುಕೊಳ್ಳಲು ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಬ್ರಿಡ್ಜ್(ತಡೆಗೋಡೆಗೆ) ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ. ಈ ಕುರಿತು ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net