ಸದೃಢ ದೇಶ ನಿರ್ಮಿಸಿ

revana sidehwara
ತರೀಕೆರೆ ಶ್ರೀ ರೇವಣಸಿದ್ದೇಶ್ವರ ಪಿಎಸಿಎಸ್‌ನಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸಿ ಭಾವಚಿತ್ರಕ್ಕೆ ಎಂ.ನರೇಂದ್ರ ಪುಷ್ಪ ನಮನ ಸಲ್ಲಿಸಿದರು. ರಮೇಶ್, ಪ್ರನತ್ ಇತರರಿದ್ದರು.
Published on

ತರೀಕೆರೆ: ಗಾಂಧೀಜಿ ಸೇರಿ ಇತರ ಮಹನೀಯರ ಹೋರಾಟದಿಂದಲೇ ಭಾರತ ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾಗಿದೆ ಎಂದು ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ನರೇಂದ್ರ ಹೇಳಿದರು.
ಸೋಮವಾರ ಪಟ್ಟಣದ ಶ್ರೀ ರೇವಣಸಿದ್ದೇಶ್ವರ ಪಿಎಸಿಎಸ್‌ನಲ್ಲಿ ಏರ್ಪಡಿಸಿದ್ದ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ದೇಶದ ಪ್ರಜೆಗಳು ಸ್ವಾತಂತ್ರೃವನ್ನು ಸಮರ್ಪಕವಾಗಿ ಬಳಸಿಕೊಂಡು ಸದೃಢ ದೇಶ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಬೇಕು ಎಂದರು. ನಿರ್ದೇಶಕ ರಮೇಶ್, ಸಹಾಯಕ ವ್ಯವಸ್ಥಾಪಕ ಪ್ರನತ್, ಸಿದ್ದರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net