Budget 2025 | ಪ್ರಧಾನಿ ಮೋದಿ 3.0 ಸರ್ಕಾರದ ಮೊದಲ ಪೂರ್ಣ ಬಜೆಟ್; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​​ Budget ಕುರಿತು ಹೇಳಿದಿಷ್ಟು..

Untitled design (94)
Published on

ನವದೆಹಲಿ: ಪ್ರಧಾನಿ ಮೋದಿ ಸರ್ಕಾರದ 3.0ರ ಮೊದಲ ಪೂರ್ಣಾವಧಿಯ ಬಜೆಟ್(Budget 2025) ಅನ್ನು ಸಂಸತ್ತಿನಲ್ಲಿ ಶನಿವಾರ (ಫೆಬ್ರವರಿ 1) ಮಂಡಿಸಲಾಗಿದೆ. ವೈಯಕ್ತಿಕ ಆದಾಯ ತೆರಿಗೆದಾರರಿಗೆ ಅತಿದೊಡ್ಡ ತೆರಿಗೆ ವಿನಾಯಿತಿ ನೀಡಿದ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಮ ವರ್ಗದ ಜನರ ಧ್ವನಿಯನ್ನು ನಾವು ಕೇಳಿದ್ದೇವೆ. 2025-26ರ ಕೇಂದ್ರ ಬಜೆಟ್ ಅಬ್ರಹಾಂ ಲಿಂಕನ್ ಹೇಳಿರುವಂತೆ 'ಜನರಿಂದ, ಜನರಿಗಾಗಿ' ಘೋಷಿಸಿರುವ ಬಜೆಟ್​​ ಎಂದು ಭಾನುವಾರ(ಫೆಬ್ರವರಿ 2) ಹೇಳಿದ್ದಾರೆ.

ತೆರಿಗೆ ಕಡಿತದ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ಆದರೆ ಅಧಿಕಾರಿಗಳಿಗೆ ಮನವರಿಕೆ ಮಾಡಲು ಸಮಯ ಹಿಡಿಯಿತು ಎಂದು ಅವರು ಹೇಳಿದರು. ಪ್ರಾಮಾಣಿಕ ತೆರಿಗೆದಾರರಾಗಿದ್ದರೂ ತಮ್ಮ ಆಕಾಂಕ್ಷೆಗಳು ಈಡೇರುತ್ತಿಲ್ಲ ಎಂದು ದೂರುವ ಮಧ್ಯಮ ವರ್ಗದವರ ಧ್ವನಿಯನ್ನು ನಾವು ಕೇಳಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ಸರ್ಕಾರದ 3.0 ಮೊದಲ ಪೂರ್ಣ ಬಜೆಟ್ ಅನ್ನು ಶನಿವಾರ(ಫೆಬ್ರವರಿ 1)ಮಂಡಿಸಿದರು. ತೆರಿಗೆ ಮತ್ತು ಅಭಿವೃದ್ಧಿ ಅಗತ್ಯಗಳ ನಡುವಿನ ಸಮತೋಲನವನ್ನು ಖಾತ್ರಿಪಡಿಸಿಕೊಳ್ಳುವಾಗ ಸಾಮಾನ್ಯ ವರ್ಗದ ಅಭಿವೃದ್ಧಿಗೆ ಗಮನ ಹರಿಸಿದರು. ಅಂತರ್ಗತ ಬೆಳವಣಿಗೆಯನ್ನು ಸುರಕ್ಷಿತಗೊಳಿಸಲು ಮತ್ತು ಮಧ್ಯಮ ವರ್ಗಕ್ಕೆ ಅನುಕೂಲಕರವಾಗಿರುವುದು ಇದರ ಉದ್ದೇಶ. 2026ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇ.6.3-6.8 ದರದಲ್ಲಿ ಹೆಚ್ಚಾಗುವುದು ಎಂದು ಅಂದಾಜಿಸಲಾಗಿದೆ. ಬಜೆಟ್ ಅಧಿವೇಶನವು ಬಡವರು, ರೈತರು, ಯುವಕರು ಮತ್ತು ಮಹಿಳಾ ಸಬಲೀಕರಣದ ಪ್ರಮುಖ ವರ್ಗಗಳ ಮೇಲೆ ಕೇಂದ್ರೀಕರಿಸಿದೆ. ಈ ಬಾರಿ ಪ್ರಸಕ್ತ ಹಣಕಾಸು ವರ್ಷಕ್ಕಿಂತ 50,65,345 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಲಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net