

ಬೆಂಗಳೂರು: ಶಿವಮೊಗ್ಗಕ್ಕೆ ತೆರಳಿ, ಹಿಂತಿರುಗುತ್ತಿದ್ದಂತೆ ಚುನಾವಣೆಯ ದೃಷ್ಟಿಯಿಂದ ಪ್ರವಾಸ ಆರಂಭಿಸುತ್ತೇನೆ. ಈಗಾಗಲೇ ಚುನಾವಣೆ ಸಂಬಂಧ ಅಮಿತ್ ಷಾ ಅವರೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದೇವೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂಗೆ ಬಿಎಸ್ವೈ ಮಾತನಾಡುತ್ತಾ, ರಾಜ್ಯದಲ್ಲಿ ಚುನಾವಣೆಯನ್ನು ಎದುರಿಸುವುದರ ಬಗ್ಗೆ ಅಮಿತ್ ಷಾ ಅವರು ಸಾಕಷ್ಟು ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ಪ್ರಚಾರಕ್ಕಾಗಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬರಲಿದ್ದಾರೆ. ಈ ಬಾರಿ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಖಂಡಿತವಾಗಿಯೂ 130 ಸ್ಥಾನ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.
ಅಧಿಕೃತ ಅಭ್ಯರ್ಥಿಗಳ ಹೆಸರು ಘೋಷಣಿ ಬಳಿಕ ಕ್ಷೇತ್ರ ವಿಸ್ತಾರಕರು ಆಯಾ ವಿಧಾನಸಭೆ ಕ್ಷೇತ್ರದ 'ಗ್ರೌಂಡ್ ರಿಪೋರ್ಟ್' ಅಮಿತ್ ಷಾ ಮುಂದಿಟ್ಟಿದ್ದಾರೆ. ಪ್ರಮುಖ ನಾಯಕರೊಂದಿಗೆ ವಿಚಾರ ವಿನಿಮಯ ನಡೆಸಿದ ಬಳಿಕ ಕ್ಷೇತ್ರ ವಿಸ್ತಾರಕರ ಸಭೆ ನಡೆಸಿದ ಷಾ, ಪ್ರತಿಯೊಂದು ಕ್ಷೇತ್ರದ ವಸ್ತುಸ್ಥಿತಿ ವರದಿ ಪಡೆದು ಪರಿಶೀಲಿಸಿದ್ದಾರೆ. ಬೇರೆ ರಾಜ್ಯಗಳಿಂದ ನಿಯುಕ್ತರಾಗಿರುವ 54 ಜನ ವಿಸ್ತಾರಕರು 'ಗ್ರೌಂಡ್ ರಿಪೋರ್ಟ್' ಸಲ್ಲಿಸುವ ಜತೆಗೆ ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಹಲವರ ಬದಲಾವಣಿ, ಹೊಸ ಪ್ರಯೋಗ, ಹೊಸಮುಖಗಳಿಗೆ ಅವಕಾಶ ಲಭಿಸಿದ್ದರ ಬಗ್ಗೆ ಪಕ್ಷಕ್ಕೆ ಪ್ಲಸ್, ಮೈನಸ್ ಪಾಯಿಂಟ್‌ಗಳನ್ನು ಕ್ಷೇತ್ರ ವಿಸ್ತಾರಕರು ಈ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.