More

    ಕಾಂಗ್ರೆಸ್​ನ ಗುಂಡಿಯೊಳಗೆ ನೀರಿಲ್ಲ! ಡಿಕೆಶಿ ಟೀಕೆಗೆ ಟಾಂಗ್ ನೀಡಿದ ಸಿಎಂ

    ಬೆಂಗಳೂರು: ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಗಿಸಿದವರು ಯಾರೆಂಬುದು ಗೊತ್ತಿಲ್ಲವೇ? ಈ ಬಾರಿ ಚುನಾವಣೆಗೆ ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನು ಮುಗಿಸಲು ಹೇಗೆಲ್ಲ ತಯಾರಿ ಮಾಡಿಕೊಂಡಿದ್ದಾರೆ ಎನ್ನುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ‌ ಗೊತ್ತಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿರುಗೇಟು ನೀಡಿದ್ದಾರೆ.

    ಆರ್​ಟಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಚುನಾವಣೆ ಬಳಿಕ ಯಡಿಯೂರಪ್ಪ ಅವರನ್ನು ಮುಗಿಸುತ್ತಾರೆ ಎಂಬ ಡಿ.ಕೆ.ಶಿವಕುಮಾರ್​ ಹೇಳಿಕೆಗೆ ಪ್ರತ್ಯುತ್ತರಿಸಿದರು.

    ಇದನ್ನೂ ಓದಿ: ಗಾಂಧಿನಗರದಲ್ಲಿ ಸಪ್ತಗಿರಿಗೌಡ ರೋಡ್ ಶೋ: ದತ್ತಾತ್ರೇಯ ವಾರ್ಡ್​ನಲ್ಲಿ ಭರ್ಜರಿ ಪ್ರಚಾರ, ಅಶ್ವತ್ಥನಾರಾಯಣ ಸಾಥ್

    ವೃಥಾ ಆರೋಪ ಮಾಡುವುದು ಸರಿಯಲ್ಲ

    ಚುನಾವಣಾ ಆಯೋಗ ನಾಮಪತ್ರಗಳನ್ನು ಪರಿಶೀಲಿಸುತ್ತದೆ. ಅಂಗೀಕಾರ ಅಥವಾ ತಿರಸ್ಕಾರ ಮಾಡುವುದು ಚುನಾವಣಾಧಿಕಾರಿಗೆ ಬಿಟ್ಟದ್ದು. ಇದರಲ್ಲಿ ಸರ್ಕಾರ ಅಥವಾ ಬಿಜೆಪಿಯ ಪಾತ್ರವೇನಿಲ್ಲ. ಡಿ.ಕೆ.ಶಿವಕುಮಾರ್ ನಾಮಪತ್ರ ಅಂಗೀಕಾರವಾಗಿದೆ. ಆದರೂ ಷಡ್ಯಂತ್ರ ನಡೆದಿದೆ ಎಂದು ವೃಥಾ ಆರೋಪ ಮಾಡುವುದು ಸರಿಯಲ್ಲ ಎಂದು ಚಾಟಿ ಬೀಸಿದರು.

    ಕಾಂಗ್ರೆಸ್ ಗುಂಡಿಯೊಳಗೆ ನೀರಿಲ್ಲ!

    ಲಿಂಗಾಯತರ ಡ್ಯಾಮ್ ಹೊಡೆದಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ ನಂತರ ಸಮುದಾಯದ ಜನರು ಜಾಗೃತರಾಗಿದ್ದಾರೆ. ವೀರಶೈವ-ಲಿಂಗಾಯತ ಸಮುದಾಯದ ಜನರು ಯಾವಾಗಲೂ ಪ್ರಬುದ್ಧರು. ಡ್ಯಾಮ್ ಹೊಡೆಯುವ ಪ್ರಯತ್ನ ಫಲಿಸುವುದಿಲ್ಲ. ಕಾಂಗ್ರೆಸ್ ಗುಂಡಿಯೊಳಗೆ ನೀರಿಲ್ಲ. ಮೊದಲು ಅದನ್ನು ನೋಡಿಕೊಳ್ಳಲಿ ಎಂದು ಕುಟುಕಿದರು.

    ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ, ಚಿತ್ತಾಪುರ ಬಿಜೆಪಿ ಟಿಕೆಟ್ ಆಕಾಂಕ್ಷಿ ಅರವಿಂದ ಚವ್ಹಾಣ

    ರಣನೀತಿ ಸಿದ್ಧ

    ಅಮಿತ್ ಷಾ‌ ನೇತೃತ್ವದ ಸಭೆಯಲ್ಲಿ ರಣನೀತಿ ಸಿದ್ಧವಾಗಿದ್ದು, ಅದನ್ನೆಲ್ಲ ಬಹಿರಂಗವಾಗಿ ಹೇಳಲಾಗದು. ಎಲ್ಲೆಲ್ಲಿ ಪ್ರಚಾರ, ಯಾವ್ಯಾವ ಕ್ಷೇತ್ರಗಳಿಗೆ ಒತ್ತು ನೀಡಬೇಕೆಂದು ಚರ್ಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸವನ್ನು ಪಕ್ಷ ತೀರ್ಮಾನಿಸಲಿದೆ. ಚಿತ್ರನಟ ಸುದೀಪ್ ಪ್ರಚಾರ ಕಾರ್ಯಕ್ರಮ ಇಂದು ಅಂತಿಮಗೊಳಿಸಲಾಗುವುದು. ನಾನು ಕೂಡ ಯಲಹಂಕ, ದೊಡ್ಡಬಳ್ಳಾಪುರ, ದೇವನಹಳ್ಳಿ ಕಡೆ ಪ್ರಚಾರ ಮಾಡಲಿರುವೆ. ಬೆಳಗಾವಿ, ಚಿಕ್ಕಮಗಳೂರು, ಮೈಸೂರು ಕಡೆಯೂ ಪ್ರವಾಸ ಮಾಡಲು ನಿರ್ಧರಿಸಿರುವೆ ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts