

ಚಿಕ್ಕಮಗಳೂರು: ತಂಗಿಯ ರಕ್ಷಣೆಗೆ ಬೆಂಗಾವಲಿನಂತಿರಬೇಕಿದ್ದ ಅಣ್ಣನೇ ಕಾಮುಕ ಆದ್ರೆ? ಪಾಪ, ಆಕೆಗಿನ್ನು 13 ವರ್ಷ. ಅಪ್ರಾಪ್ತ ವಯಸ್ಸಿನ ತಂಗಿ ಮೇಲೆ ನಿರಂತರವಾಗಿ ಅಣ್ಣನೇ ಅತ್ಯಾಚಾರವೆಸಗಿದ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರು ಅತ್ಯಾಚಾರವೆಸಗಿದ್ದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಹೇಯ ಕೃತ್ಯ ಬಯಲಾಗಿ ಇನ್ನೂ ಒಂದು ತಿಂಗಳು ಕಳೆದೇ ಇಲ್ಲ. ಇದೀಗ ಮೂಡಿಗೆರೆ ತಾಲೂಕಿನಲ್ಲಿ ಅಣ್ಣನ ಕಾಮಕ್ಕೆ ಮತ್ತೊಬ್ಬ ಬಾಲಕಿ ನಲುಗಿರುವ ಆತಂಕಕಾರಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿರಿ ಮಂಗಳೂರಿನಲ್ಲಿ ರ್ಯಾಗಿಂಗ್: ಒಂದೇ ಕಾಲೇಜಿನ 11 ವಿದ್ಯಾರ್ಥಿಗಳು ಅರೆಸ್ಟ್
ಮೂಡಿಗೆರೆ ತಾಲೂಕಿನ ಅರೆಕುಡಿಗೆ ಮಕ್ಕಿಮನೆ ಗ್ರಾಮದಲ್ಲಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಸಂತ್ರಸ್ತೆಯ ಸಹೋದರನ್ನು ಬಾಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೂಡ ಅಪ್ರಾಪ್ತ ಎಂದು ತಿಳಿದುಬಂದಿದೆ. ಆತನಿಗಿನ್ನೂ 18 ವರ್ಷ ತುಂಬಿಲ್ಲ.
ಬಾಲಕಿ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆಗ ಪಾಲಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಗರ್ಭಿಣಿ ಆಗಿರುವುದು ಬೆಳಕಿಗೆ ಬಂದಿದೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.