More

    ಶೃಂಗೇರಿಯಲ್ಲಿ ಬಾಲಕಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಅತ್ಯಾಚಾರ: ಸರ್ಕಲ್​ ಇನ್​ಸ್ಪೆಕ್ಟರ್​ ಅಮಾನತು

    ಚಿಕ್ಕಮಗಳೂರು: ಶೃಂಗೇರಿಯ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಶೃಂಗೇರಿ ಪೊಲೀಸ್​ ವೃತ್ತ ನಿರೀಕ್ಷಕ ಬಿ.ಎಂ. ಸಿದ್ದರಾಮಯ್ಯ ಅವರನ್ನ ಅಮಾನತು ಮಾಡಲಾಗಿದೆ.

    ತಾಯಿ ನಿಧನದ ಬಳಿಕ ತನ್ನ ಚಿಕ್ಕಮ್ಮನ ಮನೆಯಲ್ಲಿ ಆಶ್ರಯ ಪಡೆದಿದ್ದ 15 ವರ್ಷದ ಬಾಲಕಿ ಮೇಲೆ 30ಕ್ಕೂ ಹೆಚ್ಚು ಮಂದಿ ನಾಲ್ಕೈದು ತಿಂಗಳಿಂದ ಸಾಮೂಹಿಕ ಅತ್ಯಾಚಾರವೆಸಗಿದ್ದು, 15ಕ್ಕೂ ಅಧಿಕ ಆರೋಪಿಗಳ ಗುರುತೇ ಆಕೆಗಿಲ್ಲ. ಇನ್ನು ಸಂತ್ರಸ್ತೆಯ ಚಿಕ್ಕಮ್ಮನೇ ಈ ಕೃತ್ಯಕ್ಕೆ ಸಹಕಾರ ನೀಡಿದ್ದಾಳೆ ಎಂಬ ಆಘಾತಕಾರಿ ಅಂಶ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದನ್ನೂ ಓದಿರಿ ವಿದ್ಯಾರ್ಥಿನಿ ಜತೆ ಲೆಕ್ಚರರ್​ ಮಗನ ಕಾಮಪುರಾಣ! 3 ವರ್ಷದಿಂದ ಲವ್​-ಸೆಕ್ಸ್​-ಅಬಾರ್ಷನ್​​: ಮುಂದೇನಾಯ್ತು?

    ಗೋಚವಳ್ಳಿ ಗ್ರಾಮದಲ್ಲಿ ನಡೆದ ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದ್ದು, ಸಂತ್ರಸ್ತ ಬಾಲಕಿ ಹೇಳಿಕೆ ಆಧಾರಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶೃಂಗೇರಿ ಸಿಡಿಪಿಒ ಎನ್.ಜಿ.ರಾಘವೇಂದ್ರ ಅವರ ಮೂಲಕ ಜ.30 ದೂರು ನಿಡಿದ್ದು, ಒಟ್ಟು 17 ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

    15 ವರ್ಷದ ಬಾಲಕಿ ಮೇಲೆ ಕಿಕ್ರೆ ಸ್ಮಾಲ್​ ಅಭಿ ಮತ್ತು ಆತನ ಸ್ನೇಹಿತರಾದ ಗಿರೀಶ್​ ಆನೆಗುಂದ, ಹೊಳೆಕೊಪ್ಪದ ವಿಕಾಶ್​, ಮಣಿಕಂಠ, ಸಂಪತ್​ ನೆಮ್ಮಾರ್, ಶೃಂಗೇರಿಯ ಅಶ್ವತ್​ ಗೌಡ, ಆನೆಗುಂದದ ರಾಜೇಶ್​, ಅಮಿತ್​, ಕುರುಬಗೆರೆಯ ಸಂತೋಷ, ಹೆಗ್ಗದ್ದೆಯ ದೀಕ್ಷಿತ್​, ಹೆರೂರಿನ ಸಂತೋಷ್​, ನಿರಂಜನ್​ ಕಿಗ್ಗ, ಶೃಂಗೇರಿಯ ನಯನಗೌಡ, ಅಭಿಗೌಡ, ಖಾಂಡ್ಯದ ಯೋಗೀಶ್​ ಸೇರಿ 30ಕ್ಕೂ ಹೆಚ್ಚು ಮಂದಿ ನಿರಂತರ ಅತ್ಯಾಚಾರ ನಡೆಸಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಈ ದುಷ್ಕೃತ್ಯಕ್ಕೆ ಸಂತ್ರಸ್ತ ಬಾಲಕಿಯ ಚಿಕ್ಕಮ್ಮ ಗೀತಾಳ ಸಹಕಾರವೂ ಇದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಗೋಚವಳ್ಳಿ ಎಂ.ಜಿ.ಆರ್ ಕ್ರಷರ್ ಮಾಲೀಕನ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. 2020ರ ಸೆಪ್ಟೆಂಬರ್​ 1ರಿಂದ 2021ರ ಜನವರಿ 27ರವರೆಗೆ ಬಾಲಕಿ ಮೇಲೆ ಕಾಮುಕರು ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಲೈಂಗಿಕ ದೌರ್ಜನ್ಯವೆಸಗಿದ 15ಕ್ಕೂ ಅಧಿಕ ಜನರ ಗುರುತು ಸಂತ್ರಸ್ತೆಗಿಲ್ಲ ಇಲ್ಲ. ಅವರನ್ನೂ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ. ಇದನ್ನೂ ಓದಿರಿ  ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

    ಕೇಸ್​ ದಾಖಲಾಗುತ್ತಿದ್ದಂತೆ ಕಾಮುಕರಿಗೆ ಗಲ್ಲು ಶಿಕ್ಷೆ ಕೊಡಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲೂ ದಟ್ಟವಾಗಿ ಕೇಳಿಬಂತು. ಸದನಲ್ಲೂ ಪ್ರತಿಧ್ವಿನಿಸಿದ ಈ ಪ್ರಕರಣ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ ಎಂದು ವಿಪಕ್ಷದ ಸದಸ್ಯರು ರಾಜ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದರು. ಶೃಂಗೇರಿ ಪೊಲೀಸ್​ ಠಾಣೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

    ಇದರ ಬೆನ್ನಲ್ಲೇ ಎಚ್ಚೆತ್ತ ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಅವರು ಶೃಂಗೇರಿ ಅಪ್ರಾಪ್ತೆ ಅತ್ಯಾಚಾರ ಪ್ರಕರಣದ ತನಿಖೆ ವಿಳಂಬ ಆರೋಪದಡಿ ಸಿಪಿಐ ಸಿದ್ದರಾಮಯ್ಯ ಅವರನ್ನ ಅಮಾನತು ಮಾಡಿದ್ದಾರೆ.

    ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

    ಬೆಂಗ್ಳೂರಲ್ಲಿ ನಿವೃತ್ತ ಉಪ ತಹಸೀಲ್ದಾರ್ ಕೊಂದು ಬಿಡದಿಯಲ್ಲಿ ಸುಟ್ಟುಹಾಕಿದ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ

    ವಿದ್ಯಾರ್ಥಿನಿ ಜತೆ ಲೆಕ್ಚರರ್​ ಮಗನ ಕಾಮಪುರಾಣ! 3 ವರ್ಷದಿಂದ ಲವ್​-ಸೆಕ್ಸ್​-ಅಬಾರ್ಷನ್​​: ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts