ಬ್ರೂಕ್ಲಿನ್ ಸೇತುವೆ

ವಿಜಯವಾಣಿ
Published on

ಕಾರ್ಯಸಿದ್ಧಿಯಾಗುವವರೆಗೂ ಧೀರನು ಪ್ರಯತ್ನವನ್ನು ಬಿಡುವುದಿಲ್ಲ. ಎಷ್ಟೇ ಕಷ್ಟಗಳು ಬಂದರೂ ಎದೆಗುಂದುವುದಿಲ್ಲ. ಎಷ್ಟೇ ಮಾನ-ಅಪಮಾನಗಳು ಬಂದರೂ ಹತಾಶನಾಗುವುದಿಲ್ಲ. ಗುರಿಯನ್ನು ಮುಟ್ಟುವವರೆಗೂ ಸುಖ-ದುಃಖ, ನಿದ್ರೆಗಳನ್ನು ಲೆಕ್ಕಿಸುವುದಿಲ್ಲ. ಇದಕ್ಕೆ ಕಾರಣ ಮನೋದಾರ್ಢ್ಯ. ನೆಪೋಲಿಯನ್ ಸೈನ್ಯಕ್ಕೆ ಸೇರಬೇಕು ಎಂಬ ಗುರಿಯೊಂದಿಗೆ ಪ್ರಯತ್ನಿಸುತ್ತಾನೆ. ಆದರೆ ಅವನು ಆಯ್ಕೆ ಆಗುವುದಿಲ್ಲ. ಪುನಃ ಪ್ರಯತ್ನಿಸುತ್ತಾನೆ. ಆಯ್ಕೆ ಆಗುವುದಿಲ್ಲ್ಲ ಮತ್ತೆ, ಮತ್ತೆ ಹನ್ನೊಂದು ಬಾರಿ ಸೈನ್ಯ ಸೇರಬೇಕೆಂದು ಪ್ರಯತ್ನಿಸಿದ ಮೇಲೆ ಆಯ್ಕೆಯಾಗುತ್ತಾನೆ. ಹೀಗೆ ಅವನು ಗುರಿ ಮುಟ್ಟುವವರೆಗೂ ತನ್ನ ಪ್ರಯತ್ನವನ್ನು ಕೈಬಿಡುವುದಿಲ್ಲ.

ಅಲ್ಲದೆ ಹಣೆಬರಹ, ವಿಧಿಯ ಆಟ, ಭಗವಂತನ ಇಚ್ಛೆ ಎಂದು ಕೈಚೆಲ್ಲಿ ಕುಳಿತುಕೊಳ್ಳುವುದಿಲ್ಲ. ಬ್ರೂಕ್ಲಿನ್ ಸೇತುವೆ ಅಮೆರಿಕದ ಅತ್ಯಂತ ಹಳೆಯ ತೂಗು ಸೇತುವೆಗಳಲ್ಲಿ ಒಂದಾಗಿದೆ. ಈ ಸೇತುವೆಯನ್ನು 1883ರಲ್ಲಿ ನಿರ್ವಿುಸಲಾಯಿತು. ಜಾನ್ ಅಗಸ್ಟಸ್ ರಾಬ್ಲಿಂಗ್ ಎಂಬುವವರು ಈ ಸೇತುವೆ ಹೇಗಿರಬೇಕೆಂದು ವಿನ್ಯಾಸಗೊಳಿಸಿದರು. ಪ್ರಾರಂಭದಲ್ಲಿ ಇದಕ್ಕೆ ತಗುಲಬಹುದಾದ ವೆಚ್ಚದಿಂದಾಗಿ ಅಲ್ಲಿಯ ಸರ್ಕಾರ ಈ ಸೇತುವೆ ನಿರ್ವಣಕ್ಕೆ ಆಸಕ್ತಿಯನ್ನು ತೋರಲಿಲ್ಲ. ಆದರೆ ಇದರ ನಿರ್ವಣದಿಂದ ಜನರಿಗೆ ತುಂಬ ಉಪಯೋಗವಾಗುತ್ತದೆ ಎಂದು ಅಗಸ್ಟಸ್ ಮತ್ತೆ ಮತ್ತೆ ಸರ್ಕಾರಕ್ಕೆ ತಿಳಿಸುವ ಪ್ರಯತ್ನ ಮಾಡಿ ಕೊನೆಗೂ ಯಶಸ್ವಿಯಾದರು.

ಅವರೇ ಅದರ ನಿರ್ವಣದ ಜವಾಬ್ದಾರಿಯನ್ನೂ ತಗೆದುಕೊಂಡರು. ಆದರೆ ಸೇತುವೆಯ ನಿರ್ವಣದ ಮೊದಲನೇ ಹಂತದಲ್ಲೇ, ಅವರ ಕಾಲ್ಬೆರಳುಗಳಿಗೆ ಪೆಟ್ಟಾಯಿತು. ಮಾತ್ರವಲ್ಲ ಕಾಲ್ಬೆರಳುಗಳನ್ನು ಶಾಶ್ವತವಾಗಿ ತೆಗೆಯಬೇಕಾಯಿತು. ಅದರಿಂದ ಅವರಿಗೆ ಧನುರ್ವಾಯು ತಗುಲಿ, ಹಾಸಿಗೆ ಹಿಡಿದರು. ಇನ್ನೇನು ತನ್ನ ಸಾವು ಸಮೀಪಿಸುತ್ತಿದೆ ಎಂದರ್ಥ ಮಾಡಿಕೊಂಡ ಅಗಸ್ಟಸ್, ತಮ್ಮ 32 ವರ್ಷದ ಪುತ್ರ ವಾಷಿಂಗ್ಟನ್ ರಾಬ್ಲಿಂಗ್​ನನ್ನು ಕರೆದು ತಮ್ಮ ಜೀವನದ ಮಹದಾಸೆಯನ್ನು ತಿಳಿಸಿದರು. ಅಲ್ಲದೆ, ಪ್ರಾಣಬಿಡುವ ಮುನ್ನ ತನ್ನ ಆ ಆಸೆಯನ್ನು ನೇರವೇರಿಸಬೇಕೆಂದು ಮಗನಿಂದ ಮಾತನ್ನೂ ತಗೆದುಕೊಂಡರು. ಮುಂದೇನಾಯಿತು?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net