3 ಬಾರಿ ಡಿವೋರ್ಸ್​ ಆಗಿದ್ದೇ ಸಾಕೆಂದು ತನ್ನನ್ನು ತಾನೇ ಮದ್ವೆಯಾದ ನಟಿ Britney Spears

Britney Spears
Published on

ನವದೆಹಲಿ: ಇದಾಗಲೇ ಮದುವೆಯಾಗಿ ಮೂರು ಬಾರಿ ಡಿವೋರ್ಸ್​ ಕೊಟ್ಟು. ಈಗ ಗಂಡಸರ ಸಹವಾಸ ಸಾಕು ಎನ್ನಿಸಿ ಅಮೆರಿಕದ ಖ್ಯಾತ ಗಾಯಕಿ ಹಾಗೂ ಹಾಲಿವುಡ್​ ನಟಿಯೊಬ್ಬಳು ತನ್ನನ್ನು ತಾನೇ ಮದುವೆಯಾಗಿದ್ದಾಳೆ.

ಈಕೆ ಹೆಸರು ಬ್ರಿಟ್ನಿ ಸ್ಪಿಯರ್ಸ್. ಈಕೆ ಅಮೆರಿಕದ ಖ್ಯಾತ ಗಾಯಕಿ ಹಾಗೂ ಹಾಲಿವುಡ್​ ಸ್ಟಾರ್​. ಬ್ರಿಟ್ನಿ ಸ್ಪಿಯರ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್​ನಲ್ಲಿ, ವಿಡಿಯೋ ಮೂಲಕ ತಾನು ಮತ್ತೆ ಮದುವೆಯಾಗಿದ್ದೇನೆ ಎಂದು ಬಹಿರಂಗಪಡಿಸಿದ್ದಾಳೆ.

'ನನ್ನನ್ನೇ ನಾನು ಮದುವೆಯಾಗಲು ನಿಶ್ಚಯಿಸಿದ್ದೇನೆ. ಇದು ಮೂರ್ಖತನದಂತೆ ನಿಮಗೆಲ್ಲಾ ಕಾಣಿಸಬಹುದು. ಆದರೆ ಇದು ನಾನು ಮಾಡಿದ ಅತ್ಯಂತ ಬುದ್ಧಿವಂತ ಕೆಲಸ ಎಂದು ನಾನು ಭಾವಿಸುತ್ತೇನೆ' ಎಂದು ಬ್ರಿಟ್ನಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾಳೆ. ನಟಿ ಮದುಮಗಳಂತೆ, ಸ್ಯಾಟಿನ್ ವೆಡ್ಡಿಂಗ್ ಗೌನ್ ಮತ್ತು ಮುಸುಕು ಧರಿಸಿ ತನ್ನ ಅಭಿಮಾನಿಗಳಿಗೆ ತನ್ನ ಮದುವೆಯ ಸುದ್ದಿಯನ್ನು ಘೋಷಿಸಿದಳು. ಇಷ್ಟೇ ಅಲ್ಲದೇ ಹನಿಮೂನ್​ ಕೂಡ ಮಾಡ್ತಾ ಇದ್ದೇನೆ. ಒಬ್ಬಳೇ ಹೋಗ್ತಾ ಇದ್ದೇನೆ. ಟರ್ಕ್ಸ್ ಮತ್ತು ಕೈಕೋಸ್ ದ್ವೀಪದಲ್ಲಿ ಹನಿಮೂನ್​ ಪ್ಲ್ಯಾನ್​ ಮಾಡಿದ್ದೇನೆ. ಅಲ್ಲಿ ಏನೇನು ಮಾಡ್ತೇನೆ ಎಂದು ಶೀಘ್ರದಲ್ಲಿಯೇ ಅಪ್​ಡೇಟ್​ ಕೊಡ್ತೇನೆ ಎಂದಿದ್ದಾಳೆ.

 ಮುರಿದು ಬಿದ್ದ ಮೂರು ಮದುವೆಗಳು:

ಬ್ರಿಟ್ನಿ ಸ್ಪಿಯರ್ಸ್ ಮೊದಲ ಬಾರಿಗೆ 2004 ರಲ್ಲಿ ಜೇಸನ್ ಅಲೆಕ್ಸಾಂಡರ್ ಅವರನ್ನು ವಿವಾಹವಾದಳು. ಆದರೆ ಮೊದಲ ಮದುವೆ ಕೇವಲ 55 ಗಂಟೆಗೇ ಮುರಿದು ಬಿತ್ತು. ಅದೇ ವರ್ಷ, ಗಾಯಕ ಕೆವಿನ್ ಫೆಡರಲ್ ಅವರನ್ನು ವಿವಾಹವಾದಳು. ಈ ಸಂಬಂಧ ಇಬ್ಬರು ಮಕ್ಕಳಿದ್ದಾರೆ. ಮೂರು ವರ್ಷಗಳ ನಂತರ 2007 ರಲ್ಲಿ ಇಬ್ಬರೂ ಬೇರ್ಪಟ್ಟರು. ಇದರ ನಂತರ, ಬ್ರಿಟ್ನಿ ನಟ ಮತ್ತು ರೂಪದರ್ಶಿ ಸ್ಯಾಮ್ ಅಸ್ಕರಿ ಅವರನ್ನು ವಿವಾಹವಾದಳು. ಸ್ಯಾಮ್, ಬ್ರಿಟ್ನಿಗಿಂತ 12 ವರ್ಷ ಚಿಕ್ಕವಳು. ಆದರೆ ಕಳೆದ ವರ್ಷ ಇಬ್ಬರೂ ಬೇರೆಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net