ಇಂಡಿಗೋ ವಿಮಾನಗಳೇ ಟಾರ್ಗೆಟ್​! 10 ಫ್ಲೈಟ್​ಗಳಿಗೆ ಹುಸಿ ಬಾಂಬ್ ಬೆದರಿಕೆ | Indigo Flights

indigo
Published on

ನವದೆಹಲಿ: ಕಳೆದ ಎರಡು ದಿನಗಳಿಂದ ವಿಮಾನಗಳಿಗೆ ಬಾಂಬ್​ ಬೆದರಿಕೆಗಳು ಹೆಚ್ಚಾಗಿದ್ದು, ಈ ಸಾಲಿನಲ್ಲಿ ಇಂಡಿಗೋ ಏರ್‌ಲೈನ್ಸ್ (Indigo Flights) ಮೊದಲಿಗಿದೆ ಎಂಬುದೇ ಇದೀಗ ಸಿಬ್ಬಂದಿ ಹಾಗೂ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ. ಕಾರ್ಯನಿರ್ವಹಿಸುವ 10 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಇಂದು (ಅ.22) ಸಹ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಇವುಗಳಲ್ಲಿ ಏಳು ವಿಮಾನಗಳು ಅಂತರಾಷ್ಟ್ರೀಯ ಮಾರ್ಗಗಳಲ್ಲಿದ್ದರೆ, ಮೂರು ದೇಶೀಯವಾಗಿವೆ. ಕಳೆದ ಕೆಲವು ದಿನಗಳಿಂದ ವಿವಿಧ ವಿಮಾನಯಾನ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿರುವ ಕಿಡಿಗೇಡಿಗಳು, ವಿಮಾನ ಸ್ಫೋಟಿಸುವ ಹುಸಿ ಕರೆಗಳನ್ನು ಮಾಡುತ್ತಿದ್ದಾರೆ. ಸದ್ಯ ಈ ವಿಷಯ ಪ್ರಯಾಣಿಕರನ್ನು ತೀವ್ರ ಆತಂಕಕ್ಕೆ ದೂಡಿದೆ.

ಹೈದರಾಬಾದ್‌ನಿಂದ ಜೆಡ್ಡಾಕ್ಕೆ ವಿಮಾನ 6E 67, ಇಸ್ತಾನ್‌ಬುಲ್‌ನಿಂದ ಮುಂಬೈಗೆ 6E 18, ದೆಹಲಿಯಿಂದ ದಮಾಮ್‌ಗೆ 6E 83, ಬೆಂಗಳೂರಿನಿಂದ ಜೆಡ್ಡಾಕ್ಕೆ 6E 77, ಇಸ್ತಾನ್‌ಬುಲ್‌ನಿಂದ ದೆಹಲಿಗೆ 6E 12, ಫ್ಲೈಟ್ 6E ಸೇರಿವೆ. 65 ಕೋಝಿಕ್ಕೋಡ್‌ನಿಂದ ಜೆಡ್ಡಾಕ್ಕೆ, ಮತ್ತು ಫ್ಲೈಟ್ 6E 63 ದೆಹಲಿಯಿಂದ ಜೆಡ್ಡಾಕ್ಕೆ ತೆರಳುವ ಅಂತಾರಾಷ್ಟ್ರೀಯ ವಿಮಾನಗಳು ಈ ಹುಸಿ ಬೆದರಿಕೆಗಳಿಗೆ ಗುರಿಯಾಗಿವೆ.

ಇನ್ನು ದೇಶೀಯ ವಿಮಾನಗಳ ಪೈಕಿ ಮಂಗಳೂರಿನಿಂದ ಮುಂಬೈ ವಿಮಾನ 6E 164, ಅಹಮದಾಬಾದ್‌ನಿಂದ ಜೆಡ್ಡಾಕ್ಕೆ 6E 75 ಮತ್ತು ಲಕ್ನೋದಿಂದ ಪುಣೆಗೆ 6E 118 ಫ್ಲೈಟ್​ಗಳು ಬಾಂಬ್ ಬೆದರಿಕೆಯಿಂದಾಗಿ ಭಾರೀ ವಿಳಂಬವನ್ನು ಎದುರಿಸುತ್ತಿವೆ. ಇಂಡಿಗೋ, ವಿಸ್ತಾರ ಮತ್ತು ಏರ್ ಇಂಡಿಯಾ ಸೇರಿದಂತೆ ವಿವಿಧ ಭಾರತೀಯ ವಿಮಾನಯಾನ ಸಂಸ್ಥೆಗಳು ಸುಮಾರು 100ಕ್ಕೂ ಹೆಚ್ಚು ಬೆದರಿಕೆ ಕರೆಗಳನ್ನು ಸ್ವೀಕರಿಸಿವೆ.

ಈ ಬೆದರಿಕೆಗಳು ವಂಚನೆ ಎಂದು ದೃಢಪಟ್ಟಿದ್ದರೂ ಸಹ ಪ್ರಯಾಣಿಕರ ಹಿತದೃಷ್ಟಿಯಿಂದ ಅಧಿಕಾರಿಗಳು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿರುವುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net