ಮೂತ್ರ ಮಾಡಿದಂತೆ ಕಾಣುವ ಜೀನ್ಸ್ ಮಾರಾಟಕ್ಕಿದೆ; ಬೆಲೆ ತಿಳಿದರೆ ಶಾಕ್ ಆಗುತ್ತೀರಿ....

Jeans
Published on

ನವದೆಹಲಿ: ಪೆನ್ಸಿಲ್​​ ಕಟ್​, ಬೂಟ್ ಕಟ್ ಪ್ಯಾಂಟ್ ನೋಡಿದ್ದೇವೆ. ಮೊಣಕಾಲಿನವರೆಗೆ ಹರಿದ ಪ್ಯಾಂಟ್ ಧರಿಸುವುದನ್ನು ಫ್ಯಾಷನ್ ಎನ್ನುತ್ತಾರೆ. ಹರಿದ ಪ್ಯಾಂಟ್ ಧರಿಸಿದ್ದೀರಾ? ಅಥವಾ ಹರಿದಿದೆಯೇ? ಎಂದು ಡೌಟ್ ಬರೋದು ಖಂಡಿತಾ.. ಈ ಹರಿದ ಪ್ಯಾಂಟ್ ಟ್ರೆಂಡಿಂಗ್ ಆಗಿದೆ. ಇವುಗಳ ಮಧ್ಯೆ ಹೊಸ ಮಾದರಿಯ ಜೀನ್ಸ್ ಕೂಡ ಬಂದಿವೆ..

ಇದೊಂದು ಹೊಸ ಫ್ಯಾಶನ್ ಎಂದು ಕಲರ್ ಕೊಡುತ್ತಿದ್ದಾರೆ.. ಆದರೆ ಆ ಪ್ಯಾಂಟ್ ಹೇಗಿದೆ ಅಂತ ನೋಡಿದರೆ ಖಂಡಿತಾ ನಿಮಗೆ ಆಶ್ಚರ್ಯವಾಗುತ್ತದೆ. ಈ ಜೀನ್ಸ್ ಮೇಲೆ ಮೂತ್ರ ಸುರಿದಂತೆ ಕಾಣುತ್ತೆ. ಜೀನ್ಸ್ ಮೂತ್ರದ ಕಲೆಗಳಂತೆ ಕಾಣುತ್ತದೆ. ಸೊಂಟದ ಕೆಳಗಿನ ಭಾಗವು ಮುಂಭಾಗದ ಎರಡೂ ಬದಿಗಳಲ್ಲಿ ಇರುವ ಬಣ್ಣವು ನೀರು ಹಾಕಿ ಒದ್ದೆ ಮಾಡಿರುವಂತೆ ಕಾಣುತ್ತದೆ. ಈ ಜೀನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ಈ ಜೀನ್ಸ್ ನೋಡಿದ ನೆಟಿಜನ್‌ಗಳು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಈ ಜೀನ್ಸ್‌ಗಳ ಬೆಲೆ ತಿಳಿದರೆ ಶಾಕ್ ಆಗುತ್ತೀರಿ. ಈ ಮೂತ್ರ ಮಾಡಿದಂತೆ ಕಾಣುವ ಬಣ್ಣದ ಪ್ಯಾಂಟ್‌ಗಳ ಬೆಲೆ ಅಕ್ಷರಶಃ 811 ಡಾಲರ್‌ಗಳು, ಇದು ಭಾರತೀಯ ಕರೆನ್ಸಿಯಲ್ಲಿ 67,600 ರೂ. ಆಗುತ್ತದೆ.

ನಿರಂತರವಾಗಿ ವಿಕಸನಗೊಳ್ಳುತ್ತಿರುವ ಫ್ಯಾಷನ್ ಜಗತ್ತಿನಲ್ಲಿ ಸೃಜನಶೀಲತೆಗೆ ಯಾವುದೇ ಮಿತಿಯಿಲ್ಲ. ಬ್ರಿಟಿಷ್ ಇಟಾಲಿಯನ್ ಬ್ರಾಂಡ್ ಡಿಸೈನರ್‌ಗಳಾದ ಜೋರ್ಡಾನ್ ಬೋವೆನ್ ಮತ್ತು ಲುಕಾ ಮಾರ್ಚೆಟ್ಟೊ ಈ ಹೊಚ್ಚ ಹೊಸ ಡಿಸೈನರ್​ ಜೀನ್ಸ್‌ಗೆ ರೂಪ ಕೊಟ್ಟಿದ್ದಾರೆ. ಈ ಜೀನ್ಸ್‌ಗಳನ್ನು 2023 ರ ಚಳಿಗಾಲದ ರನ್‌ವೇಯಲ್ಲಿ ವಿನ್ಯಾಸಗೊಳಿಸಲಾಗಿದೆ. ಪ್ಯಾಂಟ್​​ನ ಜಿಪ್‌ನ ಮಧ್ಯದಲ್ಲಿ ಮೂತ್ರದ ಕಲೆಯೊಂದಿಗೆ ಜೀನ್ಸ್ ಗಾಢ ಬಣ್ಣದಲ್ಲಿದೆ. ಪ್ಯಾಂಟ್​​ನಲ್ಲಿ ಮೂತ್ರ ವಿಸರ್ಜಿಸಿದಂತೆ ತೋರುತ್ತಿದೆ.

ಇದೀಗ ನೆಟಿಜನ್‌ಗಳು ಈ ಜೀನ್ಸ್ ಬಗ್ಗೆ ತಮಾಷೆಯ ಕಾಮೆಂಟ್‌ಗಳ ಮೂಲಕ ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ. ಮೂತ್ರದ ಕಲೆ ಇರುವ ಜೀನ್ಸ್ ಎಂದರೇನು.. ಇದು ಹೊಸ ರೀತಿಯ ಫ್ಯಾಷನ್. ಹರಿದದ್ದು ಮಾತ್ರ ಪ್ಯಾಂಟ್ ಅಲ್ಲ...ಮೂತ್ರದಿಂದ ಪ್ಯಾಂಟ್ ಹಸಿಯಾದ್ರೂ ಹೊಸ ಫ್ಯಾಷನ್​ . ಇಷ್ಟು ಬೆಲೆ ಕೊಟ್ಟು ಮೂತ್ರ ವಿಸರ್ಜನೆ ಮಾಡಿದ ಪ್ಯಾಂಟ್ ಖರೀದಿಸುವ ಬದಲು ಹಾಗೆ ಇರಬಹುದು ಎಂದು   ನೆಟಿಜನ್ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net