ತಾಳಿ ಕಟ್ಟುವ ಮುನ್ನವೇ ವರನ ಬಂಧನ; ವಧು ಮಾಡಿದ್ದೇನು?

Untitled design - 2023-09-13T181942.956
Published on

ಉತ್ತರ ಪ್ರದೇಶ: ವಿವಾಹಕ್ಕೂ ಮುನ್ನ ವರ ಕಳ್ಳತನದ ಆರೋಪದಲ್ಲಿ ಸಿಕಿಬಿದ್ದ ಕಾರಣವನ್ನು ತಿಳಿದ ವಧು, ಅದೇ ಮಂಟಪದಲ್ಲಿ ಆತನ ಸಹೋದರನನ್ನು ಮದುವೆಯಾದ ಘಟನೆ ಉತ್ತರಪ್ರದೇಶದ ಅಲಿಗಢದಲ್ಲಿ ವರದಿಯಾಗಿದೆ.

ನಿಶ್ಚಯಿಸಿದ್ದ ವಧುವಿಗೆ ತಾಳಿ ಕಟ್ಟಲು ಸಿದ್ಧನಾಗಿದ್ದ ವರ, ಕಳ್ಳತನ ಪ್ರಕರಣದಲ್ಲಿ ಶಂಕಿತನಾಗಿದ್ದ ಕಾರಣ ತಿಳಿದ ಪೊಲೀಸರು ಮದುವೆ ಮಂಟಪಕ್ಕೆ ಆಗಮಿಸಿ, ಆತನನ್ನು ಬಂಧಿಸಿದ್ದಾರೆ.

ಪೊಲೀಸರು ಮದುವೆ ಮಂಟಪಕ್ಕೆ ಆಗಮಿಸಿ, ವರನನ್ನು ಬಂಧಿಸಿದ ಘಟನೆ ಸ್ಥಳದಲ್ಲಿ ಭಾರೀ ಗದ್ದಲವನ್ನು ಸೃಷ್ಟಿ ಮಾಡಿತು. ಯುವಕನನ್ನು ಪೊಲೀಸರು ಕರೆದೊಯ್ದ ಬೆನ್ನಲ್ಲೇ ಕುಟುಂಬದ ಸದಸ್ಯರು ಮತ್ತು ಮದುವೆಗೆ ಆಗಮಿಸಿದ್ದ ಅತಿಥಿಗಳು ಪೊಲೀಸ್ ಠಾಣೆಯ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಈ ವೇಳೆ ಮದುವೆಗೆ ಎಂದು ಸಿದ್ಧಗೊಂಡಿದ್ದ ವಧು, ಮಂಟಪ್ಪದಲ್ಲೇ ಕಾಯುತ್ತಿದ್ದನ್ನು ತಿಳಿದ ವರನ ಅಣ್ಣ, ಆಕೆಯನ್ನು ವಿವಾಹವಾಗಲು ನಿರ್ಧರಿಸಿದ್ದಾರೆ. ತದನಂತರ ಕುಟುಂಬದವರು ಇಬ್ಬರಿಗೂ ಮದುವೆ ಮಾಡಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net