ಕ್ರೇಜಿ ಫಾಲೋಯಿಂಗ್​ 'ಬ್ರೆಟ್‌ಮ್ಯಾನ್ ರಾಕ್' ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾಷನ್​ ವೀಡಿಯೋಗಳೊಂದಿಗೆ ಸಂಚಲನ

Bretman Rock
ಬ್ರೆಟ್​ ಮ್ಯಾನ್​ ರಾಕ್​
Published on

ನವದೆಹಲಿ: ಬ್ರೆಟ್‌ಮ್ಯಾನ್…ಸೌಂದರ್ಯಲೋಕದ ರಾಜ. ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಠಿಸುತ್ತಿರುವ ಪ್ರಭಾವಿ. ಫ್ಯಾಷನ್​ ಜಗತ್ತಿಗೆ ವೀಡಿಯೋಗಳ ಮೂಲಕ ಮಾರ್ಗದರ್ಶಕನಾಗಿರುವ ಈತ ಫಿಲಿಪೈನ್ಸ್​ ನಲ್ಲಿ ಹುಟ್ಟಿ ಅಮೇರಿಕಾ ವಾಸಿಯಾಗಿದ್ದು, ಪ್ರಸ್ತುತ ಫ್ಯಾಷನ್ ಐಕಾನ್ ಆಗಿದ್ದಾನೆ.
ಈತ ಸೆಕ್ಸಿಯಾಗಿ ತೊಡುವ ಉಡುಗೆ, ತೊಡುಗೆ, ಈತನ ಮೈಮಾಟದಿಂದ ಆಕರ್ಷಿತನಾಗಿದ್ದಾನೆ. ತುಂಡು ಉಡುಗೆ ತೊಟ್ಟು, ಹೆಣ್ಣಿನಂತೆ ಕಾಣಿಸಿಕೊಳ್ಳುವುದಕ್ಕೆ ನೆಟ್ಟಿಗರಿಂದ ಹಲವು ಬಾರಿ ಟೀಕೆಗಳಿಗೂ ಒಳಗಾಗಿದ್ದಾನೆ.

ಹೊಗಳಿಕೆ, ತೆಗಳಿಕೆ ಏನೇ ಇದ್ದರೂ 9ಮಿಲಿಯನ್​ ಯೂಟ್ಯೂಬ್​ ಸಬ್ ಸ್ಕ್ರೈಬರ್ಸ್​, 15.5ಮಿಲಿಯನ್​ ಇನ್ ಸ್ಟ್ರಾಗ್ರಾಮ್​ ಫಾಲೋವರ್ಸ್ ಮತ್ತು 15.1ಮಿಲಿಯನ್​ ಟಿಕ್​ಟಾಕ್​ ಫಾಲೋವರ್ಸ್ ಹೊಂದುವ ಮೂಲಕ ಜನಪ್ರಿಯತೆ ಗಳಿಸಿದ್ದಾನೆ.

ಯೂಟೂಬ್​ನಲ್ಲಿ ಫ್ಯಾಷನ್​ ಅಂಡ್​ ಬ್ಯೂಟಿ ಮಾರ್ಗದರ್ಶಕ ಬ್ರೆಟ್​ಮ್ಯಾನ್​ ಫಿಲಿಪೈನ್ಸ್​ ನಲ್ಲಿ ಹುಟ್ಟಿದ್ದು, ಆತನ ಅಸಲಿ ಹೆಸರು ಸಕಾಯನನ್​ ಲಫೋರ್ಗಾ. ಅವರ ತಂದೆಗೆ ರೆಜ್ಲರ್ಸ್ ಬ್ರೆಟ್ 'ದ ಹಿಟ್​ ಮ್ಯಾನ್​', ಹಾರ್ಟ್​. ಡ್ವೇನ್​ 'ದ ರಾಕ್​ ' ಜಾನ್ಸನ್​ ಎಂದರೆ ತುಂಬಾ ಇಷ್ಟವಂತೆ. ಹೀಗಾಗಿಯೇ ಪುತ್ರನನ್ನು ಆ ಇಬ್ಬರ ಹೆಸರು ಬರುವಂತೆ ಬ್ರೆಟ್​ ಮ್ಯಾನ್​ ರಾಕ್​ ಎಂದು ಕರೆಯಲು ಮುಂದಾದರು.

ಮೂಲ ಹೆಸರಿಗಿಂತ ತಂದೆ ಕರೆದ ಬ್ರೆಟ್​ ಮ್ಯಾನ್​ ರಾಕ್​ ಹೆಸರೇ ಆಕರ್ಷಕವಾಗಿದೆಯೆಂದು ಪುತ್ರನೂ ಅದೇ ಹೆಸರನ್ನು ಬಳಕೆ ಮಾಡುತ್ತ ಬಂದಿದ್ದಾನೆ.
2015ರಲ್ಲಿ ಮೇಕಪ್​ ಟಿಪ್ಸ್​ ವೀಡಿಯೋಗಳೊಂದಿಗೆ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟ ಬ್ರೆಟ್​ ಮ್ಯಾನ್​ ರಾಕ್​, ಕಾಂಡಿಡ್​ ಹ್ಯೂಮರ್​ ಕಾಮೆಂಟ್ರಿಯೊಂದಿಗೆ ಪ್ರಸಿದ್ಧಿಗೆ ಬಂದಿದ್ದಾನೆ. ಇನ್ನೋವೇಟಿಕ್​ ಫ್ಯಾಷನ್​ ಸೆನ್ಸ್​ಗೆ ಖ್ಯಾತಿಗಳಿಸಿದ್ದಾನೆ.

ಇವೆಲ್ಲ ಸೇರಿ ಬ್ರೆಟ್​ ಮ್ಯಾನ್​ ರಾಕ್​ ನನ್ನು ಯೂಟೂಬ್​ ಇನ್ಪ್ಲೂಯೆನ್ಸ್​ನನ್ನಾಗಿಸಿವೆ. ಈತನನ್ನು "ಡಾ ಬ್ಯಾಡೆಸ್ಟ್ ರಾಕ್" ಎಂದು ಕರೆಯಲಾಗುತ್ತದೆ. ಆದರೆ ಈತ ತನೊಬ್ಬ "ಗಾಯಕ, ಗೀತರಚನೆಕಾರ, ನಟ, ನಟಿ, ಕ್ರೀಡಾಪಟು, ಮದರ್‌ ಆಫ್ ಕಿಂಗ್, ವಿಜ್ಞಾನಿ ಎಂದು ಹೇಳಿಕೊಳ್ಳುತ್ತಾನೆ.

ಬ್ರೆಟ್‌ಮ್ಯಾನ್ ರಾಕ್ ಸೌಂದರ್ಯ ಸಲಹೆಗಳ ವೀಡಿಯೊಗಳು ಮೇಕಪ್ ಕೌಶಲ್ಯಗಳನ್ನು ಪ್ರದರ್ಶಿಸುತ್ತವೆ. ಆತನನ್ನು ಫ್ಯಾಷನ್​ ಉದ್ಯಮದ ಉನ್ನತ ಸೌಂದರ್ಯ ವ್ಲಾಗರ್‌ಗಳಲ್ಲಿ ಒಬ್ಬರನ್ನಾಗಿ ಗುರುತಿಸಲಾಗುತ್ತಿದೆ. ಆತನ ವೈಯಕ್ತಿಕ ಆಯ್ಕೆಯ ಉಡುಪುಗಳಿಂದಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾನೆ. ಆದರೆ ಹೊಸ ಟ್ರೆಂಡ್‌ನೊಂದಿಗೆ ಪ್ರಯೋಗವನ್ನು ಮುಂದುವರೆಸಿದ್ದಾನೆ. ಸ್ಕರ್ಟ್‌, ಪ್ಯಾಂಟ್‌ಗಳು, ಕ್ರಾಪ್ ಟಾಪ್‌ಗಳು ಮತ್ತು ಶಾರ್ಟ್‌ಗಳಂತಹ ವಿಭಿನ್ನ ಬಟ್ಟೆಗಳನ್ನು ಆತ ಉಪಯೋಗಿಸುತ್ತಾನೆ.

2021 ರ ಎಂಟಿವಿ ಚಲನಚಿತ್ರ ಮತ್ತು ಟಿವಿ ಪ್ರಶಸ್ತಿಗಳಲ್ಲಿ "ಬ್ಯೂಟಿ ಇನ್‌ಫ್ಲುಯೆನ್ಸರ್" ಗಾಗಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿ, "ಬ್ರೇಕ್‌ಥ್ರೂ ಸೋಶಿಯಲ್ ಸ್ಟಾರ್" ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ಅವರು ತಮ್ಮ ರಿಯಾಲಿಟಿ ಟಿವಿ ಶೋ, ಎಂಟಿವಿಯ ಫಾಲೋಯಿಂಗ್: ಬ್ರೆಟ್‌ಮ್ಯಾನ್ ರಾಕ್ (2021), ಮತ್ತು 30 ಡೇಸ್ ವಿತ್ ಬ್ರೆಟ್‌ಮ್ಯಾನ್ ರಾಕ್ (2022) ನಲ್ಲಿ ನಟಿಸಿದ್ದಾರೆ. ಅಕ್ಟೋಬರ್ 2021 ರಲ್ಲಿ ಪ್ಲೇಬಾಯ್ ಮುಖಪುಟದಲ್ಲಿ ಸ್ತ್ರೀ ವೇಷದಲ್ಲಿ ಕಾಣಿಸಿಕೊಂಡು ಎಲ್ಲರ ಕಣ್ಣು ಹುಬ್ಬೇರುವಂತೆ ಮಾಡಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net