

ಮುಂಬೈ: ನಟಿ ಕರೀನಾ ಕಪೂರ್ ಖಾನ್ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡುತ್ತಾರೆ. ಅವರನ್ನು ಹೆಚ್ಚಾಗಿ ಕುಟುಂಬದೊಂದಿಗೆ ಊಟ ಅಥವಾ ಭೋಜನ ಮಾಡುವಾಗ ಕಾಣಬಹುದು. ಅಂದಹಾಗೆ ಕರೀನಾ ವಾರಾಂತ್ಯದಲ್ಲಿ ತನ್ನ ಪತಿ ಸೈಫ್ ಅಲಿ ಖಾನ್ ಅವರೊಂದಿಗೆ ವಿಹಾರಕ್ಕೆ ತೆರಳಿ, ರಾತ್ರಿ ಹೊರಗೆ ಹೋಗಿ ಭೋಜನ ಸವಿದರು.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕರೀನಾ ಕಪೂರ್ ಖಾನ್ ಅವರ ವಿಡಿಯೋ ಕಾಣಿಸಿಕೊಂಡಿದ್ದು, ಇದರಲ್ಲಿ ಅವರು ತಮ್ಮ ಪತಿ ಸೈಫ್ ಅಲಿ ಖಾನ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ವಿಡಿಯೋ ಕ್ಲಿಪ್ನಲ್ಲಿ, ಸೈಫ್ ತನ್ನ ಹೆಂಡತಿಯ ಕೈ ಹಿಡಿದು ರೆಸ್ಟೋರೆಂಟ್ನಿಂದ ಹೊರಬರುತ್ತಿರುವುದನ್ನು ಕಾಣಬಹುದು. ನಂತರ ಕರೀನಾರನ್ನು ಸುರಕ್ಷಿತವಾಗಿ ಕಾರಿನಲ್ಲಿ ಕೂರಿಸಿಕೊಂಡು ನಂತರ ಅಲ್ಲಿಂದ ಹೊರಟರು.
ಸೈಫ್ ಅವರ ಈ ಪ್ರೀತಿಯ ಗೆಸ್ಚರ್ ಅನೇಕ ಅಭಿಮಾನಿಗಳಿಗೆ ಇಷ್ಟವಾಗಿದೆ. ಜನರು ಅವರ ಸುಂದರವಾದ ಕೆಮಿಸ್ಟ್ರಿ ಕಂಡು ಪ್ರೀತಿಯ ಸುರಿಮಳೆ ಹರಿಸಿದ್ದಾರೆ. ಆದರೆ ಅನೇಕ ಜನರು ಕರೀನಾ ಅವರನ್ನು ಗಮನಿಸಿ ಟ್ರೋಲ್ ಮಾಡುತ್ತಿದ್ದಾರೆ. ಕರೀನಾ ಅವರನ್ನು ನೋಡಿದ ನೆಟ್ಟಿಗರು ಫ್ಯಾಷನಿಸ್ಟ್ ಆಲ್ಕೋಹಾಲ್ ಸೇವಿಸಿದ್ದಾರೆ ಎಂದು ಭಾವಿಸುತ್ತಿದ್ದಾರೆ. ಅಂದಹಾಗೆ ವಿಡಿಯೋದಲ್ಲಿ ಸೈಫ್ ಕರೀನಾ ಅವರ ಕೈ ಹಿಡಿದಿದ್ದಾರೆ. ಸೈಫ್ ಪಾಪರಜ್ಜಿಗಳಿಗೆ ಹಾಯ್ ಹೇಳಿದರೂ ಕರೀನಾ ಏನೂ ಮಾತನಾಡದೆ ಅಲ್ಲಿಂದ ಹೊರಟು ಹೋದರು.
ಬಳಕೆದಾರರು 'ಕರೀನಾ ತುಂಬಾ ಕುಡಿದಿದ್ದಾರೆ' ಎಂದರೆ, ಮತ್ತೆ ಕೆಲವರು ' ಕರೀನಾ ಕುಡಿದ ನಂತರವೂ ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ’ ಎಂದು ಹೇಳಿರುವುದನ್ನು ನೀವು ಕಾಮೆಂಟ್ ಸೆಕ್ಷನ್ನಲ್ಲಿ ನೋಡಬಹುದು.
ಕರೀನಾ ಅವರ ಇತ್ತೀಚೆಗೆ ಬಿಡುಗಡೆಯಾದ ಚಿತ್ರ ' ಜಾನೆ ಜಾನ್ ' ನೆಟ್ಫ್ಲಿಕ್ಸ್ನಲ್ಲಿ ಸಂಚಲನ ಮೂಡಿಸುತ್ತಿದೆ. ಈ ಚಿತ್ರ ಟಾಪ್ 10ರಲ್ಲಿ ಟ್ರೆಂಡಿಂಗ್ನಲ್ಲಿದೆ. ಚಿತ್ರದಲ್ಲಿ ಕರೀನಾ, ವಿಜಯ್ ವರ್ಮಾ ಮತ್ತು ಜೈದೀಪ್ ಅಹ್ಲಾವತ್ ಅವರ ನಟನೆಯು ಹೆಚ್ಚು ಮೆಚ್ಚುಗೆ ಪಡೆದಿದೆ. ಶೀಘ್ರದಲ್ಲೇ ಕರೀನಾ ಟಬು ಮತ್ತು ಕೃತಿ ಸನೋನ್ ಅವರೊಂದಿಗೆ 'ದಿ ಕ್ರ್ಯೂ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.