ಮನೆಗಳ ಬಾಗಿಲು ಒಡೆದು ಪ್ರಜ್ಞಾಶೂನ್ಯರಾಗಿದ್ದ ಸಂತ್ರಸ್ತರ ರಕ್ಷಣೆ

andhra
Published on

ವಿಶಾಖಪಟ್ಟಣ: ಎಲ್​ಜಿ ಪಾಲಿಮರ್ಸ್​ ಇಂಡಿಯಾ ಪ್ರೈವೇಟ್​ ಲಿಮಿಟೆಡ್​ನಲ್ಲಿ ಉಂಟಾದ ಅನಿಲ ಸೋರಿಕೆಯಿಂದ ಮನೆಯೊಳಗೆ ನೂರಾರು ಮಂದಿ ಪ್ರಜ್ಞಾಶೂನ್ಯರಾಗಿದ್ದರು. ಹಾಗಾಗಿ, ಮನೆಗಳ ಬಾಗಿಲು ಒಡೆದು ಅವರೆಲ್ಲರನ್ನೂ ರಕ್ಷಿಸಬೇಕಾಯಿತು ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಆಂಧ್ರಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಆಂಧ್ರ ಪ್ರದೇಶದ ಡಿಜಿಪಿ ಗೌತಮ್​ ಸ್ವಾಂಗ್​, ವಿಷಾನಿಲ ಸೇವನೆಯಿಂದ ಇದುರವರೆಗೆ 10 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಇಬ್ಬರು ವಿಷಾನಿಲ ಸೇವಿಸಿ ಪ್ರಜ್ಞಾಹೀನರಾಗಿ ಬಾವಿಯೊಳಗೆ ಬಿದ್ದು ಮೃತಪಟ್ಟಿದ್ದಾಗಿ ಹೇಳಿದ್ದಾರೆ.

ನಸುಕಿನ ಜಾವ 2.30ರಲ್ಲಿ ವಿಷಾನಿಲ ಸೋರಿಕೆಯಾಯಿತು. ತಕ್ಷಣವೇ ಹೊರಬಂದ ನೂರಾರು ಮಂದಿ ರಸ್ತೆಗಳಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅಲ್ಲದೆ ಇನ್ನೂ ನೂರಾರು ಮಂದಿ ನಿದ್ದೆಯಲ್ಲಿಯೇ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net