More

    ವಿಷಾನಿಲ ದುರಂತ ಸಂಭವಿಸಿದ ಬಹುರಾಷ್ಟ್ರೀಯ ಕಂಪನಿ ಎಲ್​ಜಿ ಪಾಲಿಮರ್ಸ್​ ಕಾರ್ಖಾನೆ ಇತಿಹಾಸ ಗೊತ್ತಾ?

    ವಿಶಾಖಪಟ್ಟಣ: ಭಾರತಕ್ಕೆ ಈ ಬಹುರಾಷ್ಟ್ರೀಯ ಕಂಪನಿಗಳಿಂದ ಗಂಡಾಂತರ ತಪ್ಪಿದ್ದೇ ಇಲ್ಲ ಎನ್ನುವಂತಾಗಿದೆ.

    ದಶಕಗಳ ಹಿಂದಿನ ಭೋಪಾಲ್​ ಅನಿಲ ದುರಂತದ ದುಷ್ಪರಿಣಾಮಗಳನ್ನು ಇಂದಿಗೂ ಅಲ್ಲಿನ ಜನ ಅನುಭವಿಸುತ್ತಲೇ ಇದ್ದಾರೆ. ಇದೀಗ ವಿಶಾಖಪಟ್ಟಣದಲ್ಲಿ ಘೋರ ವಿಷಾನಿಲ ದುರಂತ ಸಂಭವಿಸಿದೆ.

    ಇಷ್ಟಕ್ಕೂ ಈ ವಿಷಾನಿಲ ದುರಂತ ಸಂಭವಿಸಿರುವುದು ಎಲ್​​ಜಿ ಪಾಲಿಮರ್ಸ್​ ಕಾರ್ಖಾನೆಯಲ್ಲಿ ಸದ್ಯ ಇದು ದಕ್ಷಿಣ ಕೊರಿಯಾದ ಎಲ್​ಜಿ ಕೆಮಿಕಲ್ಸ್​ ಕಂಪನಿ ಒಡೆತನದಲ್ಲಿದೆ. ಎಲ್​ಜಿ ಗೃಹೋಪಯೋಗಿ ಉತ್ಪನ್ನಗಳ ಮೂಲ ಕಂಪನಿ ಇದು. ಇಲ್ಲಿ ಪಾಲಿಸ್ಟರ್​ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಎಲೆಕ್ಟ್ರಿಕ್​ ಫ್ಯಾನ್​ಗಳ ಬ್ಲೇಡ್​, ಕಪ್​ಗಳು ಹಾಗೂ ಗೃಹೋಪಯೋಗಿ ಪಾತ್ರೆಗಳು, ಸೌಂದರ್ಯವರ್ಧಕ ಉತ್ಪನ್ನಗಳು ಇಲ್ಲಿ ತಯಾರಾಗುತ್ತವೆ, ಇದಕ್ಕೆ ಸ್ಟೀರೀನ್​ ಅನಿಲವನ್ನು ಬಳಸಲಾಗುತ್ತದೆ. ಸದ್ಯ ಸ್ಟೀರಿನ್​ ತುಂಬಿದ್ದ ಅನಿಲದ ಟ್ಯಾಂಕ್​ ಸ್ಫೋಟಗೊಂಡು ದುರಂತ ಸಂಭವಿಸಿದೆ. ಇದು ಅತ್ಯಂತ ದಹನಶೀಲ ಹಾಗೂ ಇದನ್ನು ದಹಿಸಿದರೆ ಅತ್ಯಂತ ವಿಷಕಾರಿ ಅನಿಲ ಹೊರಸೂಸುತ್ತದೆ.

    ಅಷ್ಟಕ್ಕೂ ಇದನ್ನು ಆರಂಭಿಸಿದ್ದು ಎಲ್​ಜಿ ಕಂಪನಿಯೇನಲ್ಲ. 1961ರಲ್ಲಿಯೇ ಹಿಂದುಸ್ತಾನ್​ ಪಾಲಿಮರ್ಸ್​ ಹೆಸರಿನಲ್ಲಿ ಈ ಕಾರ್ಖಾನೆ ಆರಂಭವಾಯಿತು. 1978ರಲ್ಲಿ ವಿಜಯ್​ ಮಲ್ಯ ಒಡೆತನದ ಯುಬಿ ಗ್ರೂಪ್​ನ ಮ್ಯಾಕ್​ಡೊವೆಲ್​ ಆ್ಯಂಡ್​ ಕಂಪನಿ ಲಿಮಿಟೆಡ್​ ಜತೆಗೆ ಈ ಕಂಪನಿ ವಿಲೀನವಾಯಿತು. 1997ರಲ್ಲಿ ಇದನ್ನು ಎಲ್​ಜಿ ಕೆಮಿಕಲ್ಸ್​ ಕಂಪನಿ ವಶಕ್ಕೆ ಪಡೆಯಿತು. ಎಲ್​ಜಿ ಪಾಲಿಮರ್ಸ್​ ಇಂಡಿಯಾ ಎಂದು ನಾಮಕರಣ ಮಾಡಲಾಯಿತು.

    ಎಲ್​ಜಿ ಕೆಮಿಕಲ್ಸ್​ ಜಗತ್ತಿನಲ್ಲಿಯೇ ಎಂಟನೇ ಅತಿದೊಡ್ಡ ರಾಸಾಯನಿಕ ವಸ್ತುಗಳ ಕಂಪನಿಯಾಗಿದೆ. ದಕ್ಷಿಣ ಕೊರಿಯಾದಲ್ಲಿ ಅತಿ ದೊಡ್ಡ ಕಂಪನಿ ಎನಿಸಿದೆ. ಪಾಲಿಸ್ಟರ್​ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ.

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಾರ್ಖಾನೆಯನ್ನು ಮರುಆರಂಭಕ್ಕೆ ಸಜ್ಜುಗೊಳಿಸುತ್ತಿದ್ದಾಗ ದುರಂತ ಸಂಭವಿಸಿದೆ. 10 ಜನರು ಮೃತಪಟ್ಟಿದ್ದು, 1000ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿದ್ದಾರೆ. ಮೃತರ ಸಂಖ್ಯೆಯಲ್ಲಿ ಇನ್ನೂ ಹೆಚ್ಚಳವಾಗುವ ಸಾಧ್ಯತೆಯಿದೆ.

    ಚೆಲಿಯಾ ಮುಸ್ಲಿಮರ ಹೋಟೆಲ್‌, ರೆಸ್ಟೋರಂಟ್​ಗಳಿಗೆ ಹಿಂದು ಹೆಸರುಗಳೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts