More

    ಚೆಲಿಯಾ ಮುಸ್ಲಿಮರ ಹೋಟೆಲ್‌, ರೆಸ್ಟೋರಂಟ್​ಗಳಿಗೆ ಹಿಂದು ಹೆಸರುಗಳೇಕೆ?

    ಮುಂಬೈಯಿಂದ ರಾಜಸ್ಥಾನದ ಮೌಂಟ್‌ಅಬುವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಅಂದಾಜು 8೦೦ ಕಿ.ಮೀ. ಗಿಂತಲೂ ಹೆಚ್ಚು ದೂರಕ್ಕೆ ಚಾಚಿಕೊಂಡಿದೆ. ಈ ಹೆದ್ದಾರಿಯುದ್ದಕ್ಕೂ ಸಾಲುಸಾಲು ಹೋಟೆಲ್‌ಗಳಿವೆ. ಈ ಪೈಕಿ ಪ್ರತಿ ಎರಡು ಕಿ.ಮೀ.ಗೆ ಒಂದರಂತಿರುವ ಅಂದರೆ, ಅಂದಾಜು 4೦೦ಕ್ಕೂ ಅಧಿಕ ಹೋಟೇಲ್‌ಗಳಲ್ಲಿ ಒಂದು ಸಾಮ್ಯತೆಯಿದೆ. ಅಹಮದಾಬಾದ್‌ನಲ್ಲಿರುವ ನೂರಾರು ರೆಸ್ಟೋರಂಟ್‌ಗಳು, ಸೂರತ್‌ನಲ್ಲೂ ಹತ್ತಾರು ಹೋಟೆಲ್‌ಗಳನ್ನೂ ಇವಕ್ಕೆ ಹೋಲಿಸಬಹುದು.
    ಮಾಮೂಲಿ ಹೆದ್ದಾರಿ ಪಕ್ಕದ ಡಾಬಾ ಇರಬಹುದು ಅಥವಾ ಸ್ಟಾರ್ ಹೋಟೇಲ್‌ಗಳ ಒಳಾಂಗಣವನ್ನು ಮೀರಿಸುವ ಇಂಟೀರಿಯರ್ ಹೊಂದಿರುವ ರೆಸ್ಟೋರಂಟ್‌ಗಳು ಒಂದು ಸಮುದಾಯದವರ ಒಡೆತನದಲ್ಲಿವೆ.
    ಇನ್ನೊಂದು ಸಾಮ್ಯತೆ ಎಂದರೆ, ಇವುಗಳ ಹೆಸರು ಭಾಗ್ಯೋದಯ, ಸರ್ವೋದಯ, ಸರ್ವೋತ್ತಮ, ನವಜೀವನ್, ಗೋಪಿ, ತುಳಸಿ ಹೀಗೆ ಪಕ್ಕಾ ಹಿಂದು ಹೆಸರುಗಳನ್ನೇ ಇಡಲಾಗಿರುತ್ತದೆ. ಇದಷ್ಟೇ ಅಲ್ಲ, ಕೆಲ ಹೋಟೇಲ್‌ಗಳು ಸಂಪೂರ್ಣ ಸಸ್ಯಾಹಾರಿ ಊಟವನ್ನಷ್ಟೇ ಬಡಿಸುತ್ತವೆ.
    ದೇಶದ ತುಂಬೆಲ್ಲ, ಎಲ್ಲ ರಾಜ್ಯಗಳಲ್ಲೂ ಇಂಥ ಸಾವಿರಾರು ಹೋಟೆಲ್‌ಗಳಿರಬಹುದು. ಅದರಲ್ಲೇನೂ ವಿಶೇಷ ಅಂತೀರಾ? ಇವೆಲ್ಲ ಒಂದೇ ಸಮುದಾಯದವರಿಗೆ ಸೇರಿದ್ದು, ಎಂದೇವಲ್ಲ, ಅದು ಚೆಲಿಯಾ ಮುಸ್ಲಿಮ್​ ಸಮುದಾಯ !

    ಉತ್ತರ ಗುಜರಾತ್‌ನ ಅಲ್ಪಸಂಖ್ಯಾತ ಸಮುದಾಯವಿದು. ಹೋಟೆಲ್ ಉದ್ಯಮವೇ ತಮ್ಮ ರಕ್ತದಲ್ಲಿ ಹರಿಯುತ್ತಿದೆ ಎನ್ನುವಂತೆ ಕುಟುಂಬದ ಒಬ್ಬರಾದರೂ ಸದಸ್ಯರು ಇದರಲ್ಲಿ ತೊಡಗಿಸಿಕೊಂಡಿರುತ್ತಾರೆ. ಒಂದೊಂದು ಹೋಟೆಲ್‌ಗೆ ಹಲವರು ಪಾಲುದಾರರು.

    ಇದನ್ನೂ ಓದಿ; ಕೊನೆಯ ಬಾರಿಯೂ ಮಗನನ್ನು ಕಣ್ತುಂಬಿಕೊಳ್ಳಲಾಗಲಿಲ್ಲ… ಮನೆಯಲ್ಲಿದ್ದರೂ ಪತ್ನಿಯನ್ನು ಸಂತೈಸಲಿಲ್ಲ ಕರೊನಾ ಸೇನಾನಿ

    ಈ ಸಮುದಾಯದ ಹಿನ್ನೆಲೆಯನ್ನೊಮ್ಮೆ ಅರಿಯೋಣ: ಸ್ವಾತಂತ್ರ್ಯಪೂರ್ವದಲ್ಲಿ ಉತ್ತರ ಗುಜರಾತ್​ನ ಸಿದ್ದಾಪುರ- ಪಾಲನ್‌ಪುರ- ಪಠಾಣ್‌ಬೆಲ್ಟ್ ಪ್ರದೇಶದ ಅಂದಾಜು 135 ಗ್ರಾಮಗಳು ಉಳಿದೆಲ್ಲ ಗ್ರಾಮಗಳಂತೆ ಸಾಮಾನ್ಯವಾಗಿಯೇ ಇದ್ದವು. ಈ ಪ್ರದೇಶದಲ್ಲಿ ವಾಸಿಸುತ್ತಿದ್ದವರು ಚೆಲಿಯಾ ಮುಸ್ಲಿಮ್​ ಸಮುದಾಯಕ್ಕೆ ಸೇರಿದವರು. 17ನೇ ಶತಮಾನಕ್ಕೂ ಮುಂಚೆ ಇವರೆಲ್ಲ ಹಿಂದು ಧರ್ಮಕ್ಕೆ ಸೇರಿದ್ದವರು ಹಾಗೂ ಕೃಷಿ ಕುಟುಂಬಗಳ ಹಿನ್ನೆಲೆ ಹೊಂದಿದ್ದವರು. ಕಡುಬಡತನದಲ್ಲಿ ಜೀವಿಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ.
    1947 ರ ನಂತರ ಇಲ್ಲಿನ ಯುವಕರು ಮುಂಬೈನತ್ತ ಮುಖ ಮಾಡಿದರು. ಸಾಂಪ್ರದಾಯಿಕ ಕೃಷಿಯನ್ನು ತೊರೆದು ಟ್ಯಾಕ್ಸಿ ಓಡಿಸುವುದನ್ನು ಉದ್ಯೋಗವಾಗಿಸಿಕೊಂಡರು. ಸದ್ಯ ಮುಂಬೈನಲ್ಲಿ 4೦,೦೦೦ಕ್ಕೂ ಅಧಿಕ ಕ್ಯಾಬ್‌ಗಳನ್ನು ಈ ಸಮುದಾಯದ ಜನರೇ ಓಡಿಸುತ್ತಿದ್ದಾರೆ. 1950ರ ದಶಕದಲ್ಲಿ ತಾವು ಗಳಿಸಿದ ಹಣವನ್ನು ಹೋಟೆಲ್ ಆರಂಭಿಸಲು ತೊಡಗಿಸಿದರು. ಕೆಲವರು ಇರಾನಿ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಲೇ ಬಳಿಕ ಅವುಗಳ ಮಾಲೀಕರಾಗುವ ಮಟ್ಟಕ್ಕೆ ಬೆಳೆದರು. ಸದ್ಯ ಮುಂಬೈನಲ್ಲಿ ಕನಿಷ್ಠ 600-700 ಹೋಟೆಲ್‌ಗಳು ಈ ಸಮುದಾಯದವರ ಒಡೆತನದಲ್ಲಿವೆ. ನಮ್ಮಲ್ಲಿನ ಉಡುಪಿ- ದಕ್ಷಿಣಕನ್ನಡದ ಹೋಟೇಲ್‌ಗಳನ್ನು ಇದರೊಂದಿಗೆ ಹೋಲಿಸಬಹುದೇನೋ?

    ಇದನ್ನೂ ಓದಿ; 35 ವರ್ಷದ ಹಣಕಾಸು ಸಚಿವೆ ಕರೊನಾ ಸಂಕಷ್ಟದಲ್ಲಿ ದೇಶದ ಆರ್ಥಿಕ ಶಿಸ್ತು ರೂಪಿಸಿದ್ದು ಹೇಗೆ?

    ಹೋಟೆಲ್‌ನ ಯಶಸ್ಸು ಒಬ್ಬ ವ್ಯಕ್ತಿಯ ಬೆಳವಣಿಗೆಯನ್ನು ಸೂಚಿಸುತ್ತದೆ. ಆದರೆ, ಇಲ್ಲಿ ಒಂದಿಡೀ ಸಮುದಾಯವೇ ಈ ಉದ್ಯಮದೊಂದಿಗೆ ಬೆಳೆಯುತ್ತಿರುವುದು ಅಚ್ಚರಿ ಮೂಡಿಸುತ್ತಿರುವ ಸಂಗತಿಗಳಲ್ಲಿ ಒಂದು. ಕೇವಲ ನಾಲ್ಕು ದಶಕಗಳ ಅವಧಿಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಜನಸಂಖ್ಯೆಯ ಚೆಲಿಯಾ ಸಮುದಾಯದವರು ಹೋಟೆಲ್ ಉದ್ಯಮಿಗಳಾಗಿ ಬೆಳೆದಿದ್ದಾರೆ.

    ಹೋಟೆಲ್ ಉದ್ಯಮ ಎನ್ನುವುದೀಗ ನಮಗೆ ರಕ್ತಗತವಾಗಿ ಹೋಗಿದೆ ಎನ್ನುತ್ತಾರೆ ಹೋಟೆಲ್ ಭಾಗ್ಯೋದಯದ ಮಾಲೀಕ ಇಸ್ಮಾಯಿಲ್ ಅಗ್ಲೋಡಿಯಾ. ನಾವು ಅನಕ್ಷರಸ್ಥರಾದ ಕಾರಣದಿಂದಾಗಿಯೇ ಇದರ ಬಗ್ಗೆಯೇ ಹೆಚ್ಚು ಆಸ್ಥೆ ವಹಿಸುವಂತಾಯಿತು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತಾರೆ. ಏಕೆಂದರೆ, ಅಗ್ಲೋಡಿಯಾ ಪ್ರಾಥಮಿಕ ಶಾಲೆ ಬಳಿಕ ಶಿಕ್ಷಣವನ್ನು ಮುಂದುವರಿಸಲಿಲ್ಲ. 10 ವರ್ಷ ಅಹಮದಾಬಾದ್‌ನ ಹೋಟೆಲ್‌ನಲ್ಲಿ ಕೆಲಸ ಮಾಡಿ, ಒಂದಷ್ಟು ಹಣ ಉಳಿಸಿ ಹೋಟೇಲ್‌ವೊಂದರ ಶೇ.30 ಪಾಲು ಖರೀದಿಸಿದರು. 1985ರಲ್ಲಿ ಭಾಗ್ಯೋದಯ ಹೋಟೆಲ್ ಆರಂಭಿಸಿದರು.

    ಅಹ್ಮದಾಬಾದ್‌ನಲ್ಲಿ ಆಮಿರಸ್ ಹೆಸರಿನ ಹೋಟೇಲ್ ನಡೆಸುವ ಕಸಮ್‌ಬಾಯ್ ಚಾರೋಲಿಯಾ 15 ವರ್ಷಗಳ ಹಿಂದೆ ಮುಂಬೈನಲ್ಲಿ ವೇಟರ್ ಆಗಿದ್ದರು. ನಾಲ್ಕು ಸ್ನೇಹಿತರು ಹಾಗೂ ಗುಜರಾತ್ ಸರ್ಕಾರದಿಂದ ಸಾಲ ಪಡೆದು ಹೋಟೆಲ್ ಶುರು ಮಾಡಿದರು.

    ಇದನ್ನೂ ಓದಿ;ರಡು ಲಕ್ಷಕ್ಕೂ ಅಧಿಕ ಭಾರತೀಯರ ಮಹಾ ಮರುವಲಸೆ; ಅಮೆರಿಕದಿಂದ ಭಾರತಕ್ಕೆ ಬರಲು ನೀಡಬೇಕು ಒಂದು ಲಕ್ಷ ರೂ…!

    ತಮ್ಮವರನ್ನೇ ಬೆಳೆಸುತ್ತಾರೆ: ಚೆಲಿಯಾ ಸಮುದಾಯದವರ ವಿಶೇಷತೆ ಎಂದರೆ, ವ್ಯಕ್ತಿಯೊಬ್ಬ ರೆಸ್ಟೋರಂಟ್ ಬಿಜಿನೆಸ್‌ನಲ್ಲಿ ಏಳ್ಗೆ ಕಂಡ ಎಂದರೆ, ಆತ ತನ್ನೂರಿನ, ತನ್ನ ಸಮುದಾಯದವರನ್ನೇ ಹೋಟೆಲ್ ಕೆಲಸಕ್ಕೆ ಕರೆತರುತ್ತಾನೆ. ಇಲ್ಲಿ ವೇಟರ್‌ಗಳಾಗಿ, ಮ್ಯಾನೇಜರ್‌ಗಳಾಗಿ ಹಾಗೂ ಪಾಲುದಾರರಾಗಿ ಸೇರಿಸಿಕೊಂಡು ಸಮುದಾಯದವರ ಪ್ರಗತಿಗೆ ಕಾರಣವಾಗುತ್ತಾನೆ. ಸಾಮಾನ್ಯವಾಗಿ ಗುಜರಾತಿ ಮಾರವಾಡಿ ಜನಾಂಗದಲ್ಲೂ ಇಂಥದ್ದೇ ಗುಣವನ್ನು ಕಾಣಬಹುದು. ಗುಜರಾತಿಗಳಾಗಿರುವುದರಿಂದ ಸಹಜವಾಗಿ ಇವರಲ್ಲೂ ಇದೇ ಗುಣ ಕಂಡಬರುವುದು ವಿಶೇಷವೇನಲ್ಲ.

    ನಮ್ಮ ಬಾಂಧವರನ್ನು ಈ ಉದ್ಯಮಕ್ಕೆ ಕರೆತರುತ್ತೇವೆ. ಹೀಗಾಗಿಯೇ ಈ ಉದ್ಯಮದಲ್ಲಿ ನಾವು ಹಿಡಿತ ಹೊಂದಿದ್ದೇವೆ ಎಂದು ನಂದಸಾನ್‌ನಲ್ಲಿ ಸಾಗರ್ ಹೋಟೆಲ್ ನಡೆಸುವ ಉಸ್ಮಾನ್ ಭಾಯ್ ದರ್ಜಿ ಹೇಳುತ್ತಾರೆ. ಪಿರೋಜ್‌ಪುರ ಗ್ರಾಮದಲ್ಲಿ ಚೆಲಿಯಾ ಮುಸ್ಲಿಮರ 300 ಕುಟುಂಬಗಳಿದ್ದು, ಪ್ರತಿ ಕುಟುಂಬದ ಒಬ್ಬರಲ್ಲ ಒಬ್ಬರು ಹೋಟೆಲ್ ಉದ್ಯಮದೊಂದಿಗೆ ನಂಟು ಹೊಂದಿದ್ದಾರೆ. ಇನ್ನು, ಬಗದ್ ಹಳ್ಳಿಯ 250 ಕುಟುಂಬಗಳು ಕೂಡ ಇದಕ್ಕೆ ಉದಾಹರಣೆಯಾಗಿವೆ.

    ಇದನ್ನೂ ಓದಿ; ಖಾಸಗಿ ಶಾಲೆಗಳಿಲ್ಲಿ ಪ್ರವೇಶ ಶುಲ್ಕದ ಶೇ.50 ಕಡಿತಕ್ಕೆ ಸಮ್ಮತಿಸಿವೆ

    ಇನ್ನು ಮುಖ್ಯ ವಿಷಯಕ್ಕೆ ಬರುವುದಾದರೆ ಮುಸ್ಲಿಮರಾಗಿದ್ದರೂ, ಹೋಟೆಲ್‌ಗಳಿಗೇಕೆ ಹಿಂದು ಹೆಸರಿಡುತ್ತಾರೆ ಗೊತ್ತಾ? ಇದಕ್ಕಿರುವುದು ಪಕ್ಕಾ ವ್ಯವಹಾರದ ಉದ್ದೇಶವಷ್ಟೇ. ಮುಸ್ಲಿಂ ಸಮುದಾಯ, ಅದರಲ್ಲೂ ಚೆಲಿಯಾ ಮುಸ್ಲಿಮರು ಇಲ್ಲಿ ಅಲ್ಪಸಂಖ್ಯಾತರು. ಮುಸ್ಲಿಂ ಹೆಸರಿಟ್ಟರೆ ಯಾರು ಬರುತ್ತಾರೆ ಹೇಳಿ? ಸ್ಯಾಹಾರಕ್ಕೆ ಹೆಚ್ಚು ಬೇಡಿಕೆಯಿರುವಾಗ ಮಾಂಸಾಹಾರ ಕಟ್ಟಿಕೊಂಡು ನಾವೇನು ಮಾಡಬೇಕಿದೆ ಎಂಬ ವ್ಯಾಪಾರಿ ಬುದ್ಧಿ ಇವರದ್ದು. ಗ್ರಾಹಕರಿಗೆ ಏನು ಬೇಕೋ ಅದನ್ನು ಪೂರೈಸುವುದಷ್ಟೇ ನಮ್ಮ ಗುರಿಯಾಗಿರಬೇಕು. ಹೆಚ್ಚಿನ ಗ್ರಾಹಕರು ಸಸ್ಯಾಹಾರವನ್ನೇ ಬಯಸುವ ಸ್ಥಳಗಳಲ್ಲಿ ಸಂಪೂರ್ಣ ಸಸ್ಯಾಹಾರದ ಮೆನು ರೂಪಿಸುತ್ತಾರೆ ಇವರು.

    ಯಾವ ಕುದುರೆ ಓಡುತ್ತೋ ಅದರ ಮೇಲೆ ಬಾಜಿ ಕಟ್ಟುವುದರಲ್ಲಿ ಜಾಣತನವಿದೆಯೇ ಹೊರತು, ಇನ್ಯಾವುದೇ ಕೆಲಸಕ್ಕೆ ಬಾರದ ವಿಷಯಗಳಲ್ಲ ಎನ್ನುವುದು ಇವರ ಅಭಿಪ್ರಾಯ. ಈ ಚೆಲಿಯಾ ಮುಸ್ಲಿಮರ ಅಂತರಾಳ ಬಗೆದಷ್ಟು ಹೋಟೆಲ್​ ವ್ಯವಹಾರದ ಯಶಸ್ಸಿನ ಗುಟ್ಟುಗಳೇ ಹೊರಬರುತ್ತವೆ.

    ಜಮ್ಮು ಕಾಶ್ಮೀರದಲ್ಲಿ 148 ವರ್ಷಗಳ ‘ದರ್ಬಾರ್​’ಗೆ ಬೀಳುತ್ತಾ ಬ್ರೇಕ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts