More

    35 ವರ್ಷದ ಹಣಕಾಸು ಸಚಿವೆ ಕರೊನಾ ಸಂಕಷ್ಟದಲ್ಲಿ ದೇಶದ ಆರ್ಥಿಕ ಶಿಸ್ತು ರೂಪಿಸಿದ್ದು ಹೇಗೆ?

    ಎಲ್ಲರೂ ಆಕೆಯನ್ನು ಟೋನಿ ಎಂದೇ ಕರೆಯುತ್ತಾರೆ. ತಾಯಂದಿರು ಮಕ್ಕಳೊಂದಿಗೆ ಆಕೆಯ ಜತೆ ಸೆಲ್ಫಿಗೆ ಮುಗಿಬೀಳುತ್ತಾರೆ. ಸಣ್ಣಪುಟ್ಟ ವ್ಯಾಪಾರಿಗಳು, ತಳ್ಳುಗಾಡಿಯವರು ತಮ್ಮ ಬಳಿ ಇರುವುದನ್ನೇ ಆಕೆಗೆ ಉಡುಗೊರೆಯಾಗಿ ನೀಡಿ ಶುಭ ಹಾರೈಸುತ್ತಾರೆ.

    ಆಕೆಯ ಹೆಸರು ಮಾರಿಯಾ ಅಂಟೋನಿಯೇಟಾ ಆಳ್ವ. ದಕ್ಷಿಣ ಅಮೆರಿಕದ ಪಶ್ಚಿಮಭಾಗಕ್ಕಿರುವ ಒಂದು ಪುಟ್ಟ ರಾಷ್ಟ್ರ ಪೆರುವಿನ ಹಣಕಾಸು ಸಚಿವೆ. ಇಲ್ಲಿನ ಜನಸಂಖ್ಯೆ ಅಂದಾಜು 3.2 ಕೋಟಿ. ಭಾರತದಲ್ಲಿರುವಷ್ಟೇ ಕರೊನಾ ಸೋಂಕಿತರು ಇಲ್ಲಿದ್ದಾರೆ. ಆದರೆ, ಚೇತರಿಕೆ ಕಂಡವರು ಇಲ್ಲಿಗಿಂತಲೂ ಹೆಚ್ಚು. ನಮ್ಮಲ್ಲಿ 1,700 ಜನ ಮೃತಪಟ್ಟಿದ್ದರೆ, ಅಲ್ಲಿ ಸಾವಿನ ಸಂಖ್ಯೆ 1,400.

    ಇದನ್ನೂ ಓದಿ; ಜೂನ್​ 1ರ ಹೊತ್ತಿಗೆ ದಿನಕ್ಕೆ 3,000 ಸಾವು, 2 ಲಕ್ಷ ಹೊಸ ಪ್ರಕರಣ….!

    52 ಬಿಲಿಯನ್​ ಡಾಲರ್​ ಗಾತ್ರದ (ಅಂದಾಜು 39 ಲಕ್ಷ ಕೋಟಿ ರೂ.) ಆಯವ್ಯಯ ಹೊಂದಿರುವ ರಾಷ್ಟ್ರ ಪೆರು. ಕರೊನಾ ಸಂಕಷ್ಟ ಎದುರಾದ ಬಳಿಕ ಅಲ್ಲಿನ ಆರ್ಥಿಕ ವ್ಯವಸ್ಥೆಯನ್ನು ಟೋನಿ ನಿರ್ವಹಿಸಿದ ಪರಿ ಅಂತಾರಾಷ್ಟ್ರೀಯವಾಗಿ ಗಮನ ಸೆಳೆದಿದೆ.

    ಕರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಲಾಕ್​ಡೌನ್​ ವಿಧಿಸಬೇಕೆ ಎಂಬ ಬಗ್ಗೆ ಗೊಂದಲ ಉಂಟಾಯಿತು. ಆರ್ಥಿಕ ತಜ್ಞರು, ಅಂತಾರಾಷ್ಟ್ರೀಯ ಪರಿಣತರೊಂದಿಗೆ ಚರ್ಚಿಸಿ ಲಾಕ್​ಡೌನ್​ ವಿಧಿಸುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದರು. ಆದರೆ, ಆದಾಯವಿಲ್ಲದ ವರ್ಗಗಳಿಗೆ ಆರ್ಥಿಕ ನೆರವು ಕಲ್ಪಿಸಲೇಬೇಕು. ಇದಕ್ಕಾಗಿ ಇದೇ ಮೊದಲ ಬಾರಿಗೆ ಬಡವರಿಗೆ ನಗದು ಸಹಾಯ ಯೋಜನೆ ಘೋಷಿಸಲಾಯಿತು. ಕಾರ್ಮಿಕರಿಗೆ ಸಂಬಳ ಸಂಬಳ ವಿನಾಯ್ತಿ, ಕೈಗಾರಿಕೆಗಳಿಗೆ ಸರ್ಕಾರದಿಂದಲೇ ವಹಿವಾಟು ಸಾಲ ಮೊದಲಾವುಗಳನ್ನು ಘೋಷಿಸಲಾಯಿತು. ಇವೆಲ್ಲ ಇದೇ ಮೊದಲ ಬಾರಿಗೆ ಪೆರುವಿನಲ್ಲಿ ಘೋಷಿಸಲಾಗಿತ್ತು.

    ಇದನ್ನೂ ಓದಿ; ಖಾಸಗಿ ಶಾಲೆಗಳಿಲ್ಲಿ ಪ್ರವೇಶ ಶುಲ್ಕದ ಶೇ.50 ಕಡಿತಕ್ಕೆ ಸಮ್ಮತಿಸಿವೆ

    ಇಷ್ಟೆಲ್ಲ ಜವಾಬ್ದಾರಿ ನಿರ್ವಹಿಸುತ್ತಿರುವ ಟೋನಿಗೆ ಈಗ 35 ವರ್ಷ. ಕಳೆದ ಅಕ್ಟೋಬರ್​ನಲ್ಲಷ್ಟೇ ಹಣಕಾಸು ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಧ್ಯಕ್ಷ ಮಾರ್ಟಿನ್​ ವಿಸ್ಕಾರಾ ಸಂಪುಟದಲ್ಲಿ ಭಾರಿ ಪ್ರಭಾವಿ ಸ್ಥಾನ ಅಲಂಕರಿಸಿದ್ದಾರೆ. ಹಾರ್ವರ್ಡ್​ನಲ್ಲಿ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದಾರೆ. ಇದರ ಅಂಗವಾಗಿಯೇ ಭಾರತದಲ್ಲೂ ಎರಡು ತಿಂಗಳು ಹೆಣ್ಣುಮಕ್ಕಳ ಶಿಕ್ಷಣದ ಸ್ಥಿತಿಗತಿಯನ್ನು ಅಧ್ಯಯನ ಮಾಡಿದ್ದಾರೆ.

    ಕೇವಲ ಎರಡು ವಾರಗಳ ಹಿಂದಷ್ಟೇ ವಿದೇಶಗಳಿಂದ ಬಾಂಡ್​ಗಳ ಮೂಲಕ 3 ಬಿಲಿಯನ್​ ಡಾಲರ್​ ( ಅಂದಾಜು 22 ಸಾವಿರ ಕೋಟಿ ರೂ.) ಆರ್ಥಿಕ ನೆರವು ಪಡೆದಿರುವುದು ಇವರ ಹೆಗ್ಗಳಿಕೆಯಾಗಿದೆ.

    ಜಮ್ಮು ಕಾಶ್ಮೀರದಲ್ಲಿ 148 ವರ್ಷಗಳ ‘ದರ್ಬಾರ್​’ಗೆ ಬೀಳುತ್ತಾ ಬ್ರೇಕ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts