More

    4 ದಿನ ಜಿ-20 ಹಣಕಾಸು ಸಂಬಂಧಿತ ಸಭೆ ನಿಗದಿ: 72 ನಿಯೋಗ, 500ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು ಭಾಗಿ

    ಬೆಂಗಳೂರು: ಜಿ 20 ರಾಷ್ಟ್ರಗಳ ಕೂಟಕ್ಕೆ ಭಾರತ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ಹಣಕಾಸು ಸಚಿವರ ಹಾಗೂ ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ  ಮೊದಲ ಸಭೆ ಬೆಂಗಳೂರಿನಲ್ಲಿ ಫೆ.24 ಹಾಗೂ 25ರಂದು ನಿಗದಿಯಾಗಿದ್ದು, ಅದಕ್ಕೂ ಮುನ್ನ ಬುಧವಾರ ಹಾಗೂ ಗುರುವಾರ ಹಣಕಾಸು ಹಾಗೂ ಕೇಂದ್ರೀಯ ಬ್ಯಾಂಕ್ ಪ್ರತಿನಿಧಿಗಳ ಎರಡನೇ ಸಭೆ ನಡೆಯಲಿದೆ.

    ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಬಳಿಯಿರುವ ನಂದಿ ಬೆಟ್ಟದ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿರುವ ಎ್ಸಿಬಿಡಿ ಸಭೆಯನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬುಧವಾರ ಉದ್ಘಾಟಿಸಲಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ಹಾಗೂ ಆರ್‌ಬಿಐ ಉಪ ಗವರ್ನರ್ ಡಾ.ಮೈಕೆಲ್ ಡಿ ಪಾತ್ರ ಅವರು ಸಹ ಅಧ್ಯಕ್ಷತೆ ವಹಿಸಲಿದ್ದಾರೆ.

    ಇದನ್ನೂ ಓದಿ: ಹೃದಯಾಘಾತದಿಂದ ಮೃತಪಟ್ಟ ಹೈಕೋರ್ಟ್​ ವಕೀಲ ವಿ.ಶ್ರೀನಿಧಿ

    ಈ ಸಂಬಂಧ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಜಯ್ ಸೇಠ್, ಬೆಂಗಳೂರಿನ ಸಭೆಗೆ 72 ನಿಯೋಗಗಳು ಹಾಗೂ 500ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಜಾಗತಿಕ ಆರ್ಥಿಕ ಸಮಸ್ಯೆ, ಹವಾಮಾನ ಬದಲಾವಣೆ ಹಾಗೂ ಭವಿಷ್ಯದ ನಗರಗಳ ಸುಸ್ಥಿರ ಅಭಿವೃದ್ಧಿಗೆ ವಿತ್ತ ಸಹಕಾರ ಒದಗಿಸುವ ಕುರಿತು ವಿಚಾರ ವಿನಿಮಯ ನಡೆಯಲಿದೆ. ಕೆಲ ದೇಶಗಳ ಪ್ರತಿನಿಧಿಗಳ ಮಧ್ಯೆ ದ್ವಿಪಕ್ಷೀಯ ಚರ್ಚೆ ನಡೆದು ತಮ್ಮ ಅಗತ್ಯತೆಗಳ ಬಗ್ಗೆ ನಿಲುವು ವ್ಯಕ್ತವಾಗಲಿದೆ. ಈ ನಿಟ್ಟಿನಲ್ಲಿ ಕೂಟದ ಅಧ್ಯಕ್ಷತೆ ವಹಿಸಿರುವ ಭಾರತವು ಕಾರ್ಯಸೂಚಿಯನ್ನು ವಿನ್ಯಾಸಗೊಳಿಸಿದೆ ಎಂದು ತಿಳಿಸಿದರು.

    3 ವಿಚಾರಸಂಕಿರಣ ಆಯೋಜನೆ:
    ಫೆ.24 ಹಾಗೂ 25ರಂದು ಎಫ್​ಎಂಸಿಬಿಜಿ ಸಭೆ ನಡೆಯಲಿದ್ದು, ಪ್ರಧಾನಿ ಮೋದಿ ಅವರ ಧ್ವನಿ ಮುದ್ರಿತ ಸಂದೇಶದೊಂದಿಗೆ ಚಾಲನೆ ನೀಡಲಾಗುತ್ತದೆ. ಬಳಿಕ ಮೂರು ಅಧಿವೇಶನಗಳು ನಡೆಯಲಿವೆ. 21ನೇ ಶತಮಾನದಲ್ಲಿ ಜಾಗತಿಕ ಸವಾಲು ಎದುರಿಸಲು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಬಲವರ್ಧನೆ, ನಾಳೆಯ ನಗರಗಳ ಸುಸ್ಥಿರ ಬೆಳವಣಿಗೆಗೆ ನೆರವು, ಆರ್ಥಿಕ ಒಗ್ಗೂಡಿಸುವಿಕೆ ಹಾಗೂ ಉತ್ಪಾದಕತೆಯ ಲಾಭ ಹೆಚ್ಚಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮೇಲೆ ಪ್ರಭಾವ ಬೀರುವ ವಿಷಯಗಳು ಚರ್ಚೆಯಾಗಲಿವೆ.

    ಹಣಕಾಸು ಸಚಿವರು, ಗವರ್ನರ್‌ಗಳು, ಪ್ರತಿನಿಧಿಗಳು ಹಾಗೂ ಇತರ ನಿಯೋಗಗಳಿಗೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ), ಕ್ರಿಪ್ಟೋ ಸ್ವತ್ತು ಹಾಗೂ ಗಡಿಯಾಚೆಯ ಪಾವತಿಗಳಲ್ಲಿ ಆಯಾ ದೇಶಗಳಲ್ಲಿರುವ ಪಾವತಿ ವ್ಯವಸ್ಥೆ ಬಗ್ಗೆ ಕಾರ್ಯನೀತಿ, ದೃಷ್ಟಿಕೋನದ ಕುರಿತು ಚರ್ಚೆ ನಡೆಯಲಿದೆ. ಪ್ರತಿದಿನ ಸಂಜೆ ಬಳಿಕ ಪ್ರತಿನಿಧಿಗಳಿಗೆ ಭಾರತೀಯ ಸಾಂಸ್ಕೃತಿಕ ಹಾಗೂ ಕರ್ನಾಟಕದ ಕಲಾ ವೈಭವ, ಪರಂಪರೆ ಬಿಂಬಿಸುವ ಪ್ರದರ್ಶನವನ್ನು ಆಯೋಜಿಸಲಾಗಿದೆ.

    ಇದನ್ನೂ ಓದಿ: ಶಿವಮೊಗ್ಗಕ್ಕೆ ಪರೀಕ್ಷಾರ್ಥ ಬಂದಿಳಿದ ಭಾರತೀಯ ವಾಯು ಸೇನೆ ವಿಮಾನ

    ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಆರ್ಥಿಕ ಸಲಹೆಗಾರ ವಿ. ಅನಂತ್ ನಾಗೇಶ್ವರನ್ ಹಾಜರಿದ್ದರು.

    ಐಐಎಸ್ಸಿಯಲ್ಲಿ ತಂತ್ರಜ್ಞರೊಂದಿಗೆ ಸಂವಾದ:
    ಫೆ.25ರಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಜಿ20 ಪ್ರತಿನಿಧಿಗಳು, ಸಚಿವರು ಹಾಗೂ ಗವರ್ನರ್‌ಗಳು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ‘ವಾಕ್ ದ ಟಾಕ್: ಪಾಲಿಸಿ ಇನ್ ಆ್ಯಕ್ಷನ್’ ಶೀರ್ಷಿಕೆಯಡಿ ತಂತ್ರಜ್ಞ ಪರಿಣಿತರು, ಆವಿಷ್ಕಾರ ಕ್ಷೇತ್ರದ ನಿಪುಣರು ಹಾಗೂ ಯಶಸ್ವಿ ಉದ್ದಿಮೆದಾರರೊಂದಿಗೆ ಸದಸ್ಯ ರಾಷ್ಟ್ರಗಳಲ್ಲಿರುವ ಸವಾಲು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವೇದಿಕೆ ಕಲ್ಪಿಸಲಾಗಿದೆ.

    ಡಬ್ಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದ ಪ್ರತಿಪಕ್ಷಗಳಿಗೆ ಟಕ್ಕರ್ ನೀಡಿದ ಸಚಿವ ಮಾಧುಸ್ವಾಮಿ!

    ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಆಯ್ಕೆಪಟ್ಟಿ ಒಂದು ವಾರದಲ್ಲಿ ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts