More

    ಮಾತೃಭಾಷೆ ನಾಮಫಲಕ ಕಡ್ಡಾಯಕ್ಕೆ ಖಡಕ್ ಕಟ್ಟಾಜ್ಞೆ!

    ದೇವದುರ್ಗ: ವ್ಯಾಪಾರ ಮಳಿಗೆಗಳ ನಾಮಫಲಕದಲ್ಲಿ ಶೇ.60 ಕನ್ನಡ ಕಡ್ಡಾಯವಾಗಿ ಬಳಕೆ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ ತಾಲೂಕಿನಲ್ಲಿ ಸ್ಪಂದನೆ ದೊರೆತಿಲ್ಲ. ಈಗ ಕನ್ನಡ ನಾಮಫಲಕ ಅಳವಡಿಕೆಗೆ ಪುರಸಭೆ ಖಡಕ್ ಕಟ್ಟಾಜ್ಞೆ ಹೊರಡಿಸಿದ್ದು ಮೂರು ದಿನ ಗಡುವು ವಿಧಿಸಿದೆ.

    ಅಂಗಡಿ ಮುಂಗಟ್ಟು, ಹೋಟೆಲ್, ಬಾರ್, ರೆಸ್ಟೋರೆಂಟ್, ಆಸ್ಪತ್ರೆಗಳು, ಮೆಡಿಕಲ್, ಇಂಡಸ್ಟ್ರೀಸ್, ಲ್ಯಾಬರೇರೋಟರಿಸ್ ಸೇರಿ ವಿವಿಧ ವ್ಯಾಪಾರಿ ಮಳಿಗೆಗಳ ಮುಂದೆ ಕನ್ನಡಕ್ಕಿಂತ ಪರಭಾಷೆಯ ನಾಮಫಲಕಗಳೇ ರಾರಾಜಿಸುತ್ತಿವೆ. ಸಣ್ಣಪುಟ್ಟ ಅಂಗಡಿ, ವ್ಯಾಪಾರಿ ಮಳಿಗೆ ವ್ಯಾಪಾರಿಗಳು ಮಾತ್ರ ಕನ್ನಡ ನಾಮಫಲಕ ಅಳವಡಿಸಿದ್ದರೆ ದೊಡ್ಡ ವ್ಯಾಪಾರಿಗಳು ಕ್ಯಾರೆ ಎನ್ನುತ್ತಿಲ್ಲ.

    ಸರ್ಕಾರ ಆದೇಶ ಹೊರಡಿಸಿದ್ದರೂ ಸ್ಥಳೀಯ ಅಧಿಕಾರಿಗಳ ನಿರಾಸಕ್ತಿಯಿಂದ ಅದು ಜಾರಿಗೆ ಬಂದಿರಲಿಲ್ಲ. ಕನ್ನಡಪರ ಸಂಘಟನೆಗಳು ಮನವಿ ಮಾಡಿದರೂ ಸರ್ಕಾರದ ಆದೇಶ ಕೇವಲ ಸಭೆಗೆ ಮಾತ್ರ ಸೀಮಿತವಾಗಿತ್ತು. ಪುರಸಭೆ ಮುಖ್ಯಾಧಿಕಾರಿ ವಿ.ಆರ್.ಬಳ್ಳಾರಿ ಕನ್ನಡ ನಾಮಫಲಕ ಕಡ್ಡಾಯ ಬಳಕೆಗೆ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಪುರಸಭೆ ಕಸವಿಲೇವಾರಿ ವಾಹನದಲ್ಲಿ ಧ್ವನಿವರ್ಧಕ ಮೂಲಕ ಎಚ್ಚರಿಕೆ ನೀಡುತ್ತಿದ್ದು, ಆದೇಶ ಉಲ್ಲಂಘಿಸಿದರೆ ನಾಮಫಲಕ ತೆರವುಗೊಳಿಸಿ ಜಪ್ತಿಮಾಡುವ ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts