ಸಾವಿನಲ್ಲೂ ಸಾರ್ಥಕತೆ: 4 ಜನರ ಬಾಳಿಗೆ ಬೆಳಕಾದ ಮಹಿಳೆ..

hyderabad harita
Published on

ಹೈದರಾಬಾದ್​: ದೀಪ ತನ್ನ ಸುತ್ತಲಿನವರಿಗೆ ಹೇಗೆ ಬೆಳಕು ನೀಡುತ್ತದೆಯೋ ಹಾಗೆಯೇ ಇಲ್ಲೊಬ್ಬ ಯುವತಿ ಅನಿರೀಕ್ಷಿತವಾಗಿ ಪ್ರಾಣ ಕಳೆದುಕೊಂಡರೂ ನಾಲ್ವರ ಬಾಳಿಗೆ ಬೆಳಕಾಗಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

ಇದನ್ನೂ ಓದಿ: ಮಧ್ಯರಾತ್ರಿಯಲ್ಲಿ ಗೆಳತಿ ನೋಡಲು ಬಂದ ಪ್ರಿಯಕರ: ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಥಳಿತ..

ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರದ ಗುಂಡ್ರಾ ಹರಿತ (26) ಮತ್ತು ಯಶವಂತ ಪ್ರಸಾದ್ ರೆಡ್ಡಿ ದಂಪತಿಗಳಿಗೆ ದಂಪತಿಗೆ 10 ತಿಂಗಳ ಮಗು ಕೂಡ ಇದೆ. ಯಶವಂತ್ ಖಾಸಗಿ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದು, ಕಳೆದ ಮಂಗಳವಾರ ಮನೆಯಲ್ಲಿದ್ದಾಗ ಹರಿತಾ ಏಕಾಏಕಿ ತಲೆ ನೋವು ಬಂದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಕುಟುಂಬಸ್ಥರು ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಉತ್ತಮ ಚಿಕಿತ್ಸೆಗಾಗಿ ಸಿಕಂದರಾಬಾದ್​ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ವೇಳೆ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಆಕೆಯ ಬ್ರೈನ್ ಡೆಡ್ ಆಗಿರುವುದನ್ನು ಖಚಿತಪಡಿಸಿದ್ದಾರೆ. ವಿಷಯ ತಿಳಿದ ಜೀವನ್​ದಾನ ವೈದ್ಯಕೀಯ ತಂಡವು ಮೃತಳ ಪತಿ ಹಾಗೂ ಇತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸಿದೆ.

ಆಗ ಕುಟುಂಬದ ಸದಸ್ಯರು ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಕೊಂಡಿದ್ದು, ಆಕೆಯ ಎರಡು ಕಿಡ್ನಿ, ಯಕೃತ್ ಮತ್ತು ಶ್ವಾಸಕೋಶವನ್ನು ಸಂಗ್ರಹಿಸಿ ಶಸ್ತ್ರ ಚಿಕಿತ್ಸೆ ಮೂಲಕ ಚಿಂತಾಜನಕ ಸ್ಥಿತಿಯಲ್ಲಿದ್ದವರಿಗೆ ಕಸಿ ಮಾಡಲಾಗಿದೆ. ಈ ಮೂಲಕ ಸಾವಿನಲ್ಲಿಯೂ ಆಕೆ ನಾಲ್ವರ ಬಾಳಿನಲ್ಲಿ ಬೆಳಕು ನೀಡಿದ್ದಾಳೆ.(ಏಜೆನ್ಸೀಸ್)

app

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net