ಮಗಳಿಗೆ ತೊಂದರೆ ಕೊಡುತ್ತಿದ್ದ ಯುವಕರನ್ನು ಹೊಡೆದು ಮೂಟೆ ಕಟ್ಟಿದ ತಂದೆ..!

burlap sack
ಸಾಂದರ್ಭಿಕ ಚಿತ್ರ
Published on

ಅಗರ್​ಮಾಲ್ವಾ: ತನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದ ಯುವಕರಿಬ್ಬರನ್ನು ತಂದೆಯೊಬ್ಬ ಹತ್ಯೆಗೈದು ಗೋಣಿ ಚೀಲದಲ್ಲಿ ತುಂಬಿರುವ ಘಟನೆ ಮಧ್ಯಪ್ರದೇಶದ ಅಗರ್​ಮಾಲ್ವಾ ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ಆ್ಯಪ್​ ಮೂಲಕ ಕಾರ್​ ಬುಕ್: ಬಾಡಿಗೆ ನೆಪದಲ್ಲಿ ಕೊಂಡೊಯ್ದು ಜಿಪಿಎಸ್​ ಕಿತ್ತು ಹಾಕಿ ಆರೋಪಿಗಳು ಎಸ್ಕೇಪ್..

ಮೃತರನ್ನು ನಂದ್ರಾಂ ಗುರ್ಜರ್ ಮತ್ತು ಗೋವಿಂದ್ ಗುರ್ಜಾರ್ ಎಂದು ಗುರುತಿಸಲಾಗಿದ್ದು, ಇಬ್ಬರ ಯುವಕ ಮೃತದೇಹಗಳು ತೋಟದ ಮನೆಯೊಂದರಲ್ಲಿ ಪತ್ತೆಯಾಗಿವೆ. ಈ ಕುರಿತು ಮೆಹರ್ಬಾನ್ ಸಿಂಗ್ ಮತ್ತು ಈಶ್ವರ್ ಎಂಬ ಮತ್ತೊಬ್ಬ ಶಂಕಿತನ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಬಳಿಕ ತನಿಖೆ ವೇಳೆ ಮೆಹರ್ಬಾನ್ ಸಿಂಗ್​ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಕೃತ್ಯವೆಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಶನಿವಾರದಂದು ಆತ ಇಬ್ಬರು ಯುವಕರು ಹೋಗುತ್ತಿದ್ದ ಮೋಟಾರ್ ಸೈಕಲ್‌ಗೆ ತನ್ನ ವಾಹನದಿಂದ ಡಿಕ್ಕಿ ಹೊಡೆದಿದ್ದಾನೆ. ಆ ಬಳಿಕ ಇಬ್ಬರು ನೆಲಕ್ಕೆ ಬಿದ್ದಿದ್ದು, ಅವನು ಅವರನ್ನು ತನ್ನ ತೋಟಕ್ಕೆ ಎಳೆದುಕೊಂಡು ಹೋಗಿ ಇಬ್ಬರಿಗೆ ಮನಬಂದಂತೆ ದೊಣ್ಣೆಯಿಂದ ಥಳಿಸಿದ್ದಾನೆ.

ಇದನ್ನೂ ಓದಿ: ಬೆಳಿಗ್ಗೆ ಕಸ ಗುಡಿಸುವ ವೇಳೆ ದುರಂತ: ಮಹಿಳೆಯ ಪ್ರಾಣ ತೆಗೆದ ಮಂಗಗಳ ಗುಂಪು..?

ಪರಿಣಾಮವಾಗಿ ಯುವಕರು ಮೃತಪಟ್ಟಿದ್ದು, ಆ ಬಳಿಕ ಅವರ ಮೃತದೇಹಗಳನ್ನು ಗೋಣಿ ಚೀಲದಲ್ಲಿ ಅಡಗಿಸಿಟ್ಟಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಈತನ ಮಾಹಿತಿ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದ್ದು, ಘಟನಾ ಸ್ಥಳದಲ್ಲಿ ಮೋಟಾರ್‌ ಸೈಕಲ್, ಆರೋಪಿಯ ನಾಲ್ಕು ಚಕ್ರದ ವಾಹನ ಹಾಗೂ ಅಪರಾಧ ನಡೆದ ಸ್ಥಳದಲ್ಲಿ ಚೀಲಗಳು ಕಂಡು ಬಂದಿವೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net