ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ

22 nrp 1 glass
ಎನ್.ಆರ್.ಪುರದ ಅಗ್ರಹಾರದಲ್ಲಿ ಬ್ರಾಹ್ಮಣ ಮಹಾಸಭಾದಿಂದ ಉಚಿತ ಕನ್ನಡಕ ವಿತರಿಸಲಾಯಿತು. ಎಂ.ಆರ್.ರವಿಶಂಕರ್, ಕೊನೋಡಿ ಗಣೇಶ್, ರಮೇಶ್, ಅನ್ನಪೂರ್ಣಾ, ರಮೇಶ್ಚಂದ್ರ, ಎಸ್.ಎನ್.ಸುರೇಶ್ ಇದ್ದರು.
Published on

ಎನ್.ಆರ್.ಪುರ: ತಾಲೂಕು ಬ್ರಾಹ್ಮಣ ಮಹಾಸಭಾ ನೇತೃತ್ವದಲ್ಲಿ ನಡೆಸಲಾದ ವೈದ್ಯಕೀಯ ಶಿಬಿರ ಸಾರ್ಥಕ್ಯ ಕಂಡಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ರವಿಶಂಕರ್ ತಿಳಿಸಿದರು.
ಭಾನುವಾರ ಅಗ್ರಹಾರದ ಬ್ರಾಹ್ಮಣ ಮಹಾಸಭಾ ಕಚೇರಿ ಆವರಣದಲ್ಲಿ ಹಿಂದೆ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡಿದ್ದ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಚೆನ್ನೈನ ಅಭಿನವ ಐ ಕ್ಯಾಂಪ್ ಮುಖ್ಯಸ್ಥ ಡಾ. ರಮೇಶ್ ನೇತೃತ್ವದಲ್ಲಿ ತಜ್ಞ ವೈದ್ಯರ ತಂಡ ಎನ್.ಆರ್.ಪುರದಲ್ಲಿ ತಪಾಸಣೆ ನಡೆಸಿದಾಗ ಫಲಾನುಭವಿಗಳಿಗೆ ನೀಡಿದ ಭರವಸೆಯಂತೆ ಇಂದು ಉಚಿತ ಕನ್ನಡಕ ವಿತರಿಸಲಾಗುತ್ತಿದೆ ಎಂದರು.
ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೊನೋಡಿ ಗಣೇಶ್, ಉಪಾಧ್ಯಕ್ಷೆ ಅನ್ನಪೂರ್ಣಾ, ಕಾರ್ಯದರ್ಶಿ ಎಸ್.ಎನ್.ಸುರೇಶ್, ಸದಸ್ಯ ಪ್ರಕಾಶ್, ಶಂಕರ ಭಾರತಿ ಟ್ರಸ್ಟ್ ನಿರ್ದೇಶಕ ರಮೇಶ್ಚಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net