

ಮುಂಬೈ; ಒಂದು ಕಾಲದಲ್ಲಿ ಬಾಲಿವುಡ್ ಮಾತ್ರವಲ್ಲದೆ ಭಾರತೀಯ ಚಿತ್ರರಂಗವೇ ತಿರುಗಿ ನೋಡುವ ಸಿನಿಮಾಗಳಲ್ಲಿ ನಟಿಸಿದ್ದ ನಟ ಇಂದು ಬರೊಬ್ಬರಿ 1200 ಕೋಟಿ ರೂ. ಆಸ್ತಿಯ ಒಡೆಯನಾಗುವುದರ ಮೂಲಕ ಬಾಲಿವುಡ್ ಮಂದಿಯನ್ನು ಆಶ್ಚರ್ಯಚಕಿತಗೊಳಿಸಿದ್ದಾನೆ.
ಹೌದು, ಇತ್ತೀಚಿಗೆ ಬರೊಬ್ಬರಿ 12 ಕೋಟಿ ರೂ. ಬೆಲೆ ಬಾಳುವ ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾದ ರೋಲ್ಸ್ ರಾಯಲ್ಸ್ ಕಾರು ಖರೀದಿಸಿ ಮಾಡಿ ಸುದ್ದಿಯಲ್ಲಿರುವ ನಟ ಬೇರೆ ಯಾರು ಅಲ್ಲ, ದಕ್ಷಿಣ ಭಾರತ ಸೇರಿದಂತೆ ಇತರೆ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿರುವ ವಿವೇಕ್ ಒಬೆರಾಯ್.
ಬಾಲಿವುಡ್ನಲ್ಲಿ ರೋಲ್ಸ್ ರಾಯಲ್ಸ್ ಕಾರು ಖರೀದಿಸಿರುವುದು ಇವರೊಬ್ಬರೆ ಅಲ್ಲ. ಸಾಕಷ್ಟು ಬಾಲಿವುಡ್ ಮಂದಿ ಖರೀದಿಸಿದ್ದಾರೆ. ಆದರೆ, ಇವರು ನಟಿಸಿರುವ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಹಿಟ್ ಆಗಿಯೇ ಇಲ್ಲ. ಟಾಪ್ 10 ಶ್ರೀಮಂತ ನಟರ ಪಟ್ಟಿಯಲ್ಲಿ ಕೂಡ ಇಲ್ಲ. ಆದರೂ, ನೂರಾರು ಕೋಟಿ ಸಂಭಾವನೆ ಪಡೆಯುವ ಹೀರೋಗಳು ಕೂಡ ಖರೀದಿಸದ ಕಾರು ಪರ್ಚೆಸ್ ಮಾಡಿದ್ದಾರೂ ಹೇಗೆ ಎಂದು ಬಾಲಿವುಡ್ ಮಂದಿಯನ್ನು ಆಶ್ಚರ್ಯಚಕಿತಗೊಳಿಸಿದೆ. 2002 ರಲ್ಲಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ವಿವೇಕ್ ಅವರ, ಓಂಕಾರ್, ಸಾಥಿಯಾ, ಮಸ್ತಿ ಸಿನಿಮಾಗಳು ಹಿಟ್ ಕೊಟ್ಟವು. ಬಳಿಕ ಐಶ್ವರ್ಯಾ ರೈ ಸಂಬಂಧದಿಂದ ಸಲ್ಮಾನ್ಖಾನ್ ಮತ್ತು ವಿವೇಕ್ ನಡುವೆ ಗಲಾಟೆಗಳಾದವು. ಅಲ್ಲದೆ, ಬಾಲಿವುಡ್ನ ಮತ್ತೊಬ್ಬ ಸೂಪರ್ಸ್ಟಾರ್ ವಿರುದ್ಧ ಹರಿಹಾಯ್ದಿದಕ್ಕಾಗಿ ''ಬಾಯ್ಕಾಟ್'' ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಇದೆಲ್ಲದರ ನಡುವೆ ರಕ್ತಚರಿತ್ರೆ ಸಿನಿಮಾದ ಮೂಲಕ ಎಂಟ್ರಿ ಕೊಟ್ಟು ಮತ್ತೆ ಪುಟಿದೇದ್ದು ಬಾಲಿವುಡ್ ಮಂದಿ ಹಿಂತಿರುಗುವಂತೆ ಮಾಡಿದ್ದಾರೆ.
ದಿ ಸ್ಟೇಟ್ಸ್ಮನ್ ಸೇರಿದಂತೆ ಆನೇಕ ವರದಿಗಳು ಇವರ ಒಟ್ಟು ನಿವ್ವಳ ಆಸ್ತಿ 1200 ಕೋಟಿ ರೂ, ಎಂದು ಪಟ್ಟಿ ಮಾಡಿವೆ. ದೇಶದ ಟಾಪ್ 10 ಶ್ರೀಮಂತ ನಟರಲ್ಲದಿದ್ದರೂ, ಟಾಪ್ 15 ರೊಗಳಗೆ ಬರುತ್ತಾರೆ. ಭಾರತ ಚಿತ್ರರಂಗದ ಸೂಪರ್ಸ್ಟಾರ್ಗಳಾದ ರಣಬೀರ್ ಕಪೂರ್(350 ಕೋಟಿ ರೂ.), ಅಲ್ಲು ಅರ್ಜುನ್(340 ಕೋಟಿ ರೂ.), ಪ್ರಭಾಸ್(250 ಕೋಟಿ ರೂ) ಮತ್ತು ರಜನಿಕಾಂತ್ (400 ಕೋಟಿ ರೂ.) ಅವರನ್ನು ಕೂಡ ಆಸ್ತಿಗಳಿಕೆಯಲ್ಲಿ ಮೀರಿಸಿದ್ದಾರೆ.ವಿವೇಕ್ ಅವರೇ ಹೇಳುವ ಪ್ರಕಾರ ನಾನು ಸಿನಿಮಾರಂಗಕ್ಕೆ ಕಾಲಿಡುವದ ಜತೆ ಬಿಸಿನೆಸ್ ಕ್ಷೇತ್ರಕ್ಕೂ ಕಾಲಿಟ್ಟಿದ್ದೆ. ಹಲವಾರು ಸ್ಟಾಟ್ ಅಪ್ ಕಂಪನಿಗಳಿಗೆ ಹೂಡಿಕೆ ಮಾಡಿದ್ದಾರೆ. ಅಲ್ಲದೆ, ಅಲ್ ಖೈಮಾದ ಅಲ್ ಮರ್ಜಾನ್ ದ್ವೀಪದಲ್ಲಿ 2.300 ಕೋಟಿ ರೂ. ವೆಚ್ಚದ ಅಕ್ವಾ ಆರ್ಕ್ನ ಸ್ಥಾಪಕರಾಗಿದ್ದಾರೆ. ಸ್ವರ್ನಿಮ್ ವಿಶ್ವವಿದ್ಯಾಲಯದ ಸಹ-ಸಂಸ್ಥಾಪಕರು ಆಗಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಕ್ಲಿಕ್ ಆಗದಿದ್ದರೂ ಬಿಸಿನೆಸ್ನಲ್ಲಿ ಕಿಕ್ಲ್ ಆಗುವ ಮೂಲಕ ಎಲ್ಲರ ಕಣ್ಣು ಹುಬ್ಬೆರುಸುವಂತೆ ಮಾಡಿದ್ದಾರೆ, (ಏಜೆನ್ಸೀಸ್).