IIT ಕಾಲೇಜಿನ ವಿದ್ಯಾರ್ಥಿಗೆ ಲಕ್ಷಾಂತರ ರೂ. ವಂಚನೆ.. ನಿಮಗೂ ಇಂತಹ ಕರೆ ಬಂದರೆ ಹುಷಾರ್​..!

IIT
Published on

ಮುಂಬೈ: ಇತ್ತೀಚಿನ ದಿನಗಳಲ್ಲಿ ಡಿಜಿಟಲ್​ ಆರೆಸ್ಟ್​ನಂತಹ ಪ್ರಕರಣಗಳು ಅಧಿಕವಾಗುತ್ತಿದ್ದು, ಅಧಿಕಾರಿಗಳ ಸೋಗಿನಲ್ಲಿ ಕೆಲ ಖದೀಮರು ಮಹಿಳೆಯರು, ಉದ್ಯಮಿಗಳು ಮತ್ತು ವಿದ್ಯಾರ್ಥಿಗಳಿಗೆ ವಂಚನೆ ಮಾಡುತ್ತಿದ್ದಾರೆ. ಇದೀಗ IIT ಮುಂಬೈನ ವಿದ್ಯಾರ್ಥಿಗೆ ಲಕ್ಷಾಂತರ ರೂ. ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಸರ್ಕಾರಿ ಅಧಿಕಾರಿ ಸೋಗಿನಲ್ಲಿ ಮುಂಬೈನ IIT ಕಾಲೇಜಿನ 25 ವರ್ಷದ ವಿದ್ಯಾರ್ಥಿಗೆ ಕರೆ ಮಾಡಿದ ವಂಚಕ 7.75 ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾನೆ.

ಇದೇ ವರ್ಷದ ಜುಲೈನಲ್ಲಿ ಅಪರಿಚಿತರಿಂದ ವಿದ್ಯಾರ್ಥಿಗೆ ಕರೆ ಬಂದಿದೆ. ಟೆಲಿಕಾಂ ರೆಗ್ಯುಲೆಟರಿ ಅಥಾರಿಟಿ ಆಫ್​ ಇಂಡಿಯಾದ(ಟ್ರಾಯ್​) ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿ, ನಿನ್ನ ಮೊಬೈಲ್​ ಸಂಖ್ಯೆಯಿಂದ ಆಕ್ರಮ ಚಟುವಟಿಕೆಳು ನಡೆದಿದೆ. ಹೀಗಾಗಿ, ಸಂಖ್ಯೆಯ ವಿರುದ್ಧ 17 ದೂರುಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾನೆ.

ನಿಮ್ಮ ನಂಬರ್​ ನಿಷ್ಕ್ರಿಯಗೊಳಿಸಲು (ಡಿಲೀಟ್​) ಅಥವಾ ಇಂತಹ ನಂಬರ್​ಗಳಿಂದ ದೂರು ಬರದೇ ಇರಲು ಪೊಲೀಸರಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ತರಬೇಕು ಎಂದಿದ್ದಾರೆ. ಹೀಗಾಗಿ, ಈ ಕರೆಯನ್ನು ಸೈಬರ್​ ಕ್ರೈಂ​ ಬ್ರಾಂಚ್​ ಪೊಲೀಸರಿಗೆ ವರ್ಗಾಸಲಾಗುವುದು ಎಂದು ಹೇಳಿದ್ದಾನೆ. ಬಳಿಕ ಪೊಲೀಸ್​ ವೇಶದಲ್ಲಿ ಮತ್ತೊಮ್ಮ ಕರೆ ಮಾಡಿ ವಿದ್ಯಾರ್ಥಿಯ ಆಧಾರ್​ ಸಂಖ್ಯೆಯನ್ನು ಕೇಳಿದ್ದಾನೆ. ಈ ಕೇಸ್​ ನಿಂದ ಹೊರ ಬರಲು ಯುಪಿಐ ಮೂಲಕ 29,000 ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ.

29 ಸಾವಿರ ರೂ.ಗಳನ್ನು ವಂಚಕರು ವರ್ಗಾಯಿಸಿಕೊಂಡ ಬಳಿಕ, ವಿದ್ಯಾರ್ಥಿಗೆ ಬೆದರಿಕೆ ಹಾಕಿ ಡಿಜಿಟಲ್​ ಬಂಧನದಲ್ಲಿ ಇರಿಸಿಕೊಂಡಿದ್ದಾರೆ. ಅಲ್ಲದೇ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಪರಿಣಾಮ ಬೇರೆ ಇರುತ್ತದೆ ಎಂದು ಹೇಳಿದ್ದಾರೆ. ಮರು ದಿನ ಮತ್ತೆ ಕರೆ ಮಾಡಿ ಬ್ಯಾಂಕ್​ ಖಾತೆಯ ಮೂಲಕ 7.75 ಲಕ್ಷ ರೂಗಳನ್ನು ಹಾಕಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇಂತಹ ಪ್ರಕರಣಗಳು ಬಗ್ಗೆ ದಿನಪತ್ರಿಕೆಗಳಲ್ಲಿ ಮತ್ತು ಇತರರಿಂದ ಮಾಹಿತಿ ಪಡೆದ ನಂತರ ತಾನು ಮೋಸ ಹೋಗಿದ್ದೇನೆ ಎಂದು ಅರಿವಾಗಿದೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾನೆ. (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net