

ನವದೆಹಲಿ: ಇದೇ ವರ್ಷ ಮಾ.10ರಂದು ರಾಷ್ಟ್ರೀಯ ತಂಡಕ್ಕೆ ಆಯ್ಕೆಯ ಪ್ರಯೋಗಗಳ ಸಂದರ್ಭದಲ್ಲಿ ಮೂತ್ರದ ಮಾದರಿಯನ್ನು ನೀಡಲು ನಿರಾಕರಿಸಿದ್ದಕ್ಕಾಗಿ ರಾಷ್ಟ್ರೀಯ ಉದ್ದೀಪನ ನಿರೋಧಕ ಸಂಸ್ಥೆ(NADA)) ಟೋಕಿಯೋ ಒಲಂಪಿಕ್ಸ್ ಕಂಚಿನ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಅವರನ್ನು ನಾಲ್ಕು ವರ್ಷಗಳ ಕಾಲ ಅಮಾನತುಗೊಳಿಸಿದೆ.
ಈ ವರ್ಷದ ಏಪ್ರೀಲ್ನಲ್ಲಿ ಬಜರಂಗ್ ಪೂನಿಯಾ ಅವರನ್ನು ತಾತ್ಕಾಲಿಕವಾಗಿ NADA ಅಮಾನತು ಮಾಡಿತ್ತು. ಇದರ ಬೆನ್ನಲ್ಲೆ, ವಿಶ್ವ ಕುಸ್ತಿ ಆಡಳಿತ ಮಂಡಳಿ ಕೂಡ ಅಮಾನತು ಮಾಡಿತ್ತು. ಹೀಗಾಗಿ, ಇದರ ವಿರುದ್ಧ ಬಜರಂಗ್ ಮೇಲ್ಮನವಿಯನ್ನು ಸಲ್ಲಿಸಿದ್ದರು. ಬಳಿಕ ಇವರ ಅಮಾನತು ರದ್ದುಗೊಳಿಸಿತ್ತು. ನಾಡಾದ ಆರೋಪಗಳಿಗೆ ಬಜರಂಗ್ ಪರ ಸಲ್ಲಿಸಿದ್ದ ಅರ್ಜಿಗಳ ಪರಿಶೀಲನೆ ಮಾಡಿ, ಬಳಿಕ ಸೆ.24 ಮತ್ತು ಆ.4 ರಂದು ನಡೆದ ವಿಚಾರಣೆಗಳ ಏಪ್ರೀಲ್ 24ರ 2024 ರಿಂದ ನಾಲ್ಕು ವರ್ಷಗಳ ಅನರ್ಹತೆಯ ಅವಧಿಯನ್ನು ಜಾರಿಗೊಳಿಸಲು ಇದೀಗ ತೀರ್ಪು ನೀಡಿದೆ.
ಕಲಂ 10.3.1 ರ ಅಡಿಯಲ್ಲಿ ನಿರ್ಬಂಧಗಳಿಗೆ ಕೀಡಾಪಟು ಹೊಣೆಗಾರನಾಗಿರುತ್ತಾನೆ ಮತ್ತು 4 ವರ್ಷಗಳ ಅವಧಿಗೆ ಅನರ್ಹತೆಗೆ ಹೊಣೆಯಾಗುತ್ತಾನೆ ಎಂದು ಸಮಿತಿಯು ಹೇಳಿದೆ ಎಂದು NADA ಯ ವಿರೋಧಿ ಶಿಸ್ತಿನ ಡೋಪಿಂಗ್ ಪ್ಯಾನೆಲ್ (ADDP) ತನ್ನ ಆದೇಶದಲ್ಲಿ ಹೇಳಿದೆ.
ಬಜರಂಗ್ ಪರ ವಾದ ಮಂಡಿಸಿದ ಸದಸ್ಯರು, ಬಜರಂಗ್ ತನ್ನ ನಿರಾಕರಣೆ ಉದ್ದೇಶಪೂರ್ವಕವಾಗಿಲ್ಲ, ಆದರೆ, ನಾಡಾದ ಪ್ರಕ್ರಿಯಗಳ ಮೇಲೆ ನಂಬಿಕೆ ಕೊರತೆಯಿಂದ ಇದು ಆಗಿದೆ. ಇದು ಸಂಪೂರ್ಣ ನಿರಾಕರಣೆಯಲ್ಲ, ಅವಧಿ ಮೀರಿದ ಪರೀಕ್ಷಾ ಕಿಟ್ಗಳನ್ನು ಒದಗಿಸಿದ ನಿದರ್ಶನಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು. ಅಲ್ಲದೆ, ಭಾರತ ಕುಸ್ತಿ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರಿಂದ ಪರಿಸ್ಥಿತಿ ಇದಾಗಿದೆ ಎಂದು ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ ನಾಡಾ, ಅಥ್ಲೀಟ್ನ ಕ್ರಮಗಳು ಉದ್ದೇಶ ಪೂರ್ವಕವಾಗಿದೆ ಎಂದು ಸ್ಪಷ್ಟವಾಗಿ ಮೇಲ್ನೋಟಕ್ಕೆ ಕಾಣಿಸುತ್ತದೆ. ಅಲ್ಲದೆ, ಆ್ಯಂಟಿ ಡೋಪಿಂಗ್ ಜವಬ್ದಾರಿಗಳ ಆರ್ಟಿಕಲ್ 2021ರ ನಿಯಮಗಳಮ ಪ್ರಕಾರ 20.1 ಮತ್ತು 20.2 ನಿಯಮಗಳನ್ನು ಉಲ್ಲಂಘನೆಯಾಗಿದೆ. ಹೀಗಾಗಿ, ಅವರು ಅಮಾನತಿಗೆ ಹೊಣೆಯಾಗಬೇಕಾಗುತ್ತದೆ ಎಂದು ಹೇಳಿದೆ, (ಏಜೆನ್ಸೀಸ್).