ಕ್ಲಾಸ್​​ರೂಮ್​ನಲ್ಲಿ ವಿಭಿನ್ನವಾಗಿ ಲವ್​ ಪ್ರಪೋಸ್​ ಮಾಡಲು ಹೋದ ಹುಡುಗನಿಗೆ ಹೀಗಾಗಬಾರದಿತ್ತು…

Love propose
Published on

ನವದೆಹಲಿ: ನೆನಪಿನಲ್ಲಿ ಉಳಿಯುವಂತೆ ವಿಶೇಷವಾಗಿ ಪ್ರೇಮ ನಿವೇದನೆ ಮಾಡಿಕೊಳ್ಳುವ ಆಸೆಯಿಂದ ಹುಡುಗಿಯ ಬಳಿ ಹೋದ ಹುಡುಗನೊಬ್ಬ ಕೆನ್ನೆಗೆ ಬಿಸಿ ಏಟು ತಿಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೈರಲ್ ವಿಡಿಯೋದಲ್ಲಿ ಶಾಲಾ ಸಮವಸ್ತ್ರದಲ್ಲಿರುವ ಹುಡುಗ ಹೂವು ಹಿಡಿದು ಸಂತೋಷದಿಂದ ತರಗತಿಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು. ಎದುರಿಗೆ ಕುಳಿತಿರುವ ಹುಡುಗಿಯ ಬಳಿ ಹೋಗುವ ಹುಡುಗ ಕುಳಿತುಕೊಳ್ಳುತ್ತಾನೆ. ನಂತರ ಹೂ ನೀಡಿ ಪ್ರೇಮ ನಿವೇದನೆ ಮಾಡಬೇಕೆನ್ನುವಷ್ಟರಲ್ಲಿ ಹುಡುಗಿ ಆತನ ಕೆನ್ನೆಗೆ ಬಾರಿಸುತ್ತಾಳೆ. ಈ ವೇಳೆ ತರಗತಿಯಲ್ಲಿದ್ದ ಇತರೆ ವಿದ್ಯಾರ್ಥಿಗಳು ನಗಾಡುತ್ತಾರೆ.

ಆದಾಗ್ಯೂ ಈ ಘಟನೆಯು ನಿಜವಾಗಿ ಸಂಭವಿಸಿದೆಯೇ ಅಥವಾ ಇದು ಸಾಮಾಜಿಕ ಜಾಲತಾಣಕ್ಕಾಗಿ ಮಾಡಿರುವ ರೀಲ್ಸ್​ ಭಾಗವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ನಾಟಿ ಫ್ಯಾಮಿಲಿ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ವಿಡಿಯೋ ಅಪ್​ಲೋಡ್​ ಮಾಡಲಾಗಿದೆ. ಈಗಾಗಲೇ ವಿಡಿಯೋವನ್ನು 72 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, 5 ಸಾವಿರಕ್ಕೂ ಅಧಿಕ ಲೈಕ್ಸ್​ ಬಂದಿವೆ.

ಕೆಲ ನೆಟ್ಟಿಗರು ಹುಡುಗಿಯ ನಡೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇದು ರೀಲ್ಸ್​ನ ಭಾಗವಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net