

ಕೊಡಗು: ಕೊಡವ ಕೌಟುಂಬಿಕ ಹಾಕಿ ಹಬ್ಬಕ್ಕೆ ಆಗಮಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೊಡವರ ದಟ್ಟಿ ಕುಪ್ಪಸ ಉಡುಗೆ ತೊಟ್ಟು ಮಿಂಚಿದ್ದಾರೆ. ಇದೇ ವೇಳೆ ಕಾರ್ಯಕ್ರಮದಲ್ಲಿ ಕೊಡವ ಭಾಷೆಯಲ್ಲಿ ಮಾತು ಆರಂಭಿಸಿದ್ದಾರೆ. ಸದ್ಯ ಸಿಎಂ ಬೊಮ್ಮಾಯಿ ಕೊಡವ ಶೈಲಿಯ ಉಡುಗೆ ಧರಿಸಿ ಕ್ಯಾಮರಾಗಳಿಗೆ ಫೋಸ್ ಕೊಟ್ಟಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಿಎಂ ಬೊಮ್ಮಾಯಿ ಮಾತನಾಡುತ್ತಾ, ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಕೊಡವ ಸಂಸ್ಕೃತಿ, ಹಾಕಿ ಉತ್ಸವ ಎಲ್ಲಾವೂ ವಿಶೇಷವಾಗಿದೆ. ನಶಿಸಿ ಹೋಗುವಂತಹ ಸಂಬಂಧಗಳನ್ನು ಈ ಕ್ರೀಡಾ ಕೂಟ ಗಟ್ಟಿಗೊಳಿಸುತ್ತಿದೆ. ಇಂತಹ ಒಂದು ಕ್ರೀಡಾಕೂಟ ಪ್ರಪಂಚದ ಯಾವ ಭಾಗದಲ್ಲಿಯೂ ನೋಡಿಲ್ಲ ಎಂದು ಹೇಳಿದ್ದಾರೆ.
ಕೊಡಗು ಪ್ರವಾಸದ ವೇಳೆ ಸಿಎಂ ಬೊಮ್ಮಾಯಿ ನಿಗದಿಯಾಗಿದ್ದ ಹಾಕಿ ಪಂದ್ಯಾವಳಿಗೆ ಚಾಲನೆ ನೀಡದೆ ಹೊರಟು ಹೋದ ಘಟನೆ ನಡೆದಿದೆ. ಹೆಲಿಕಾಪ್ಟರ್ ಸಮಯಾವಕಾಶದ ಕೊರತೆ ಹಿನ್ನೆಲೆ ಮೈದಾನದಿಂದ ಹೊರಹೋಗಿದ್ದಾರೆ. ಬಳಿಕ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಚಾಲನೆ ನೀಡಿದ್ದಾರೆ.