ಹೋಮ್‌ವರ್ಕ್‌ ಮಾಡಲ್ಲವೆಂದು ಅಮ್ಮ ಬೈತಾಳೆ..ನನ್ನ ಅನಾಥಾಶ್ರಮಕ್ಕೆ ಸೇರಿಸಿ ಎಂದು ಪೊಲೀಸರ ಮೊರೆ ಹೋದ ಬಾಲಕ

homework
Published on

ಬೀಜಿಂಗ್‌: ಹೋಮ್‌ವರ್ಕ್‌ ಮಾಡಿಲ್ಲ ಎಂದು ತನ್ನ ತಾಯಿ ಬೈಯುತ್ತಿದ್ದರಿಂದ ಕೋಪಗೊಂಡ 10 ವರ್ಷದ ಬಾಲಕನೊಬ್ಬ ಚೀನಾದ ಚಾಂಗ್‌ಕಿಂಗ್‌ನಲ್ಲಿ ಪೊಲೀಸ್ ಠಾಣೆಗೆ ಬಂದು ತನ್ನನ್ನು ಅನಾಥಾಶ್ರಮಕ್ಕೆ ಕಳುಹಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ.

ವರದಿಗಳ ಪ್ರಕಾರ, ನೊಂದ ಬಾಲಕನೊಬ್ಬ ಹುಯಿಕ್ಸಿಂಗ್ ಪೊಲೀಸ್ ಠಾಣೆಗೆ ಪ್ರವೇಶಿಸಿ ತನ್ನ ತಾಯಿಯ ವಿರುದ್ಧ ದೂರು ದಾಖಲಿಸಿ ಅನಾಥಾಶ್ರಮಕ್ಕೆ ಸೇರಿಸುವಂತೆ ಪೊಲೀಸರನ್ನು ಕೇಳಿಕೊಂಡ ಘಟನೆ ಬುಧವಾರ ನಡೆದಿದೆ.

"ನನ್ನ ಹೋಮ್‌ವರ್ಕ್‌ಗಾಗಿ ನನ್ನ ತಾಯಿ ನಿರಂತರವಾಗಿ ನನ್ನನ್ನು ಗದರಿಸುತ್ತಾಳೆ, ಅದು ನನ್ನ ಮನೆಯನ್ನು ತೊರೆಯುವಂತೆ ಮಾಡಿದೆ. ನನ್ನ ಜೀವನವನ್ನು ಅನಾಥಾಶ್ರಮದಲ್ಲಿ ಕಳೆಯಲು ನಾನು ಬಯಸುತ್ತೇನೆ. ದಯವಿಟ್ಟು ನನ್ನ ತಾಯಿ ವಿರುದ್ಧ ಕ್ರಮ ಕೈಗೊಳ್ಳಿ' ಎಂದು ಬಾಲಕ ತನ್ನ ದೂರಿನಲ್ಲಿ ತಿಳಿಸಿದ್ದಾನೆ. ಈ ಘಟನೆಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪೊಲೀಸರು ಬಾಲಕ ಈ ದೂರನ್ನು ಕೇಳಿ, ಮನವರಿಕೆ ಮಾಡಿ ಸಮಾಧಾನಪಡಿಸಿದ ಬಳಿಕ ಬಾಲಕ ಮನೆಗೆ ಮರಳಿದ್ದಾನೆ. ಆದಾಗ್ಯೂ, ಈ ಘಟನೆಯು ಚೀನೀ ಪ್ರಾಂತ್ಯದಾದ್ಯಂತ ಮಕ್ಕಳ ಮತ್ತು ಪೋಷಕರ ಸಾಮಾನ್ಯ ವರ್ತನೆಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಪೊಲೀಸ್ ಠಾಣೆಗೆ ಹೋಗಿ ಪೋಷಕರ ವಿರುದ್ಧ ದೂರು ದಾಖಲಿಸುವುದನ್ನು ನೋಡುತ್ತಿದ್ದೇವೆ. ಮೂರು ಕಿಲೋಮೀಟರ್ ನಡೆದುಕೊಂಡು ಬಂದು ‘ಅಪ್ಪ ಕುಡಿದು ಅಮ್ಮನಿಗೆ ಹೊಡೆಯುತ್ತಿದ್ದಾರೆ, ಬಂಧಿಸಿ ಸಾರ್’ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಮೂರು ವರ್ಷದ ಬಾಲಕನೊಬ್ಬ ಪೊಲೀಸರಿಗೆ ದೂರು ನೀಡಿದ್ದು, ಅಪ್ಪ ನನಗಾಗಿ ತಂದಿದ್ದ ಚಾಕಲೇಟ್ ಗಳನ್ನೆಲ್ಲಾ ಅಮ್ಮ ಬಚ್ಚಿಟ್ಟಿದ್ದಾಳೆ. ಅಂತಹ ಒಂದು ಮಗು ತನ್ನ ತಾಯಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಅನೇಕ ಪ್ರಕರಣಗಳು ನಮ್ಮ ಮುಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net