

ತೆಲಂಗಾಣ: ಆಕಸ್ಮಿಕವಾಗಿ ಎರಡನೇ ಮಹಡಿಯಿಂದ ಗರ್ಭಿಣಿಯೊಬ್ಬಳು ಬಿದ್ದು ಸಾವನ್ನಪ್ಪಿದ ಘಟನೆ ಚಂದನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಿಂಗಂಪಲ್ಲಿ ಗ್ರಾಮದ ವೆಂಕಟ್ ರೆಡ್ಡಿ ಕಾಲೋನಿಯ, ವೆಂಕಟ್ ರೆಡ್ಡಿ ಅವರು ಮೂರು ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ. ವೆಂಕಟ್ ರೆಡ್ಡಿ ಅವರ ಪುತ್ರಿ ಶ್ರೀನಿಖಾ ಅವರ ವಿವಾಹ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿತ್ತು. ಆಕೆ ಈಗ ಐದು ತಿಂಗಳ ಗರ್ಭಿಣಿ. ಎರಡು ದಿನಗಳ ಹಿಂದೆ ಕೊಂಡಾಪುರ ಏರಿಯಾ ಆಸ್ಪತ್ರೆಯಲ್ಲಿ ತಪಾಸಣೆಗೆಂದು ತಂದೆಯ ಮನೆಗೆ ಬಂದಿದ್ದಳು.
ಗುರುವಾರ ಬೆಳಗ್ಗೆ 7.10ಕ್ಕೆ ಎದ್ದ ಶ್ರೀನಿಖಾ ವಾಕಿಂಗ್‌ಗಾಗಿ ಬಾಲ್ಕನಿಗೆ ಬಂದಿದ್ದಳು. ಸ್ವಲ್ಪ ಹೊತ್ತಿನ ನಂತರ ಕಣ್ಣುಗಳು ಮಂಜಾಗುತ್ತಿದೆ ಎಂದು ಹೇಳಿ ಮನೆಯೊಳಗೆ ಹೋಗುತ್ತಿದ್ದಳು. ಅಷ್ಟರಲ್ಲಿ ಶ್ರೀನಿಖಾ ಮೇಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ತಕ್ಷಣ ಕುಟುಂಬಸ್ಥರು ಮದೀನಗುಡಾದ ಶ್ರೀಕರ ಆಸ್ಪತ್ರೆಗೆ ಧಾವಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಚಂದಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹೊಟ್ಟೆಯಲ್ಲಿರುವ ಮಗು ಮತ್ತು ತಾಯಿಯ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.