ಫೋನ್‌ನಲ್ಲಿ ಮಾತನಾಡುತ್ತಾ ಸಿಎಂಗೆ ಸೆಲ್ಯೂಟ್ ಮಾಡಿದ ಎಎಸ್‌ಪಿ ವರ್ಗಾವಣೆ

Cop transferred for saluting Uttarakhand Chief Minister while on phone
Published on

ಉತ್ತರಪ್ರದೇಶ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಗೆ ತಮ್ಮ ಹೆಲಿಕಾಪ್ಟರ್‌ನಿಂದ ಕೆಳಗಿಳಿಯುತ್ತಿದ್ದಂತೆ, ಕೋಟ್‌ದ್ವಾರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಶೇಖರ್ ಸುಯಲ್ ಅವರು ಫೋನ್‌ನಲ್ಲಿ ಮಾತನಾಡುತ್ತಾ ಅವರಿಗೆ ಸೆಲ್ಯೂಟ್ ಮಾಡಿದರು. ವಿಡಿಯೋ ವೈರಲ್​​ ಆಗುತ್ತಿದ್ದಂತೆ ಎಎಸ್ ಪಿ ವರ್ಗಾವಣೆ ಮಾಡಲಾಗಿದೆ.

ಈ ಘಟನೆ ಆಗಸ್ಟ್ 11 ರಂದು ಕೋಟ್ದ್ವಾರದಲ್ಲಿ ನಡೆದಿದ್ದು, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೋಟ್‌ದ್ವಾರದ ವಿಪತ್ತು ಪ್ರದೇಶಗಳಿಗೆ ಭೇಟಿ ನೀಡಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಮುಖ್ಯಮಂತ್ರಿಗಳು ಹರಿದ್ವಾರದಿಂದ ಹೆಲಿಕಾಪ್ಟರ್ ಮೂಲಕ ಗ್ರಾಸ್ತಂಗಂಜ್ ಹೆಲಿಪ್ಯಾಡ್‌ಗೆ ಆಗಮಿಸಿದಾಗ. ಅವರ ಆಗಮನದ ಮಾಹಿತಿಯ ನಂತರ ಸ್ಥಳೀಯ ಆಡಳಿತವು ಹೆಲಿಪ್ಯಾಡ್‌ನಲ್ಲಿ ಮುಖ್ಯಮಂತ್ರಿಯನ್ನು ಬರಮಾಡಿಕೊಳ್ಳಲು ಬಂದಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿ ಒಂದು ಕೈಯಿಂದ ಕಿವಿಗೆ ಫೋನ್ ಹಿಡಿದು ಇನ್ನೊಂದು ಕೈಯಿಂದ ಮುಖ್ಯಮಂತ್ರಿಗಳಿಗೆ ನಮಸ್ಕರಿಸಿದರು.

ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಇಳಿದ ನಂತರ ಎಎಸ್ಪಿ ದೂರವಾಣಿಯಲ್ಲಿ ಮಾತನಾಡುತ್ತಲೇ ನಮಸ್ಕರಿಸುತ್ತಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ಹಿರಿಯ ಅಧಿಕಾರಿಗಳು ಎಎಸ್‌ಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಕಾರ್ಯಕ್ರಮದಲ್ಲಿ ತುಂಬಾ ನಿಷ್ಕಾಳಜಿ ವಹಿಸಿದ್ದಾರೆ ಎಂದು ಎಎಸ್ಪಿ ಶೇಖರ್ ಸುಯಾಲ್ ಅವರನ್ನು ನರೇಂದ್ರನಗರದ ಪೊಲೀಸ್ ತರಬೇತಿ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ. ಶೇಖರ್ ವರ್ಗಾವಣೆಗೊಂಡ ನಂತರ ಜೈ ಬಲುನಿ ಅವರನ್ನು ಕೋಟ್‌ದ್ವಾರದ ಹೊಸ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net