ಈಜಲು ಹೋಗಿ ನೀರು ಪಾಲಾದ ಬಾಲಕ; ಆತನನ್ನು ನೋಡಿ ಸ್ಥಳದಲ್ಲೇ ಪ್ರಾಣಬಿಟ್ಟ ಮಹಿಳೆ

Albin Sebastian
Published on

ಕಾಸರಗೋಡು: ಆಘಾತಕಾರಿ ಪ್ರಕರಣ ಒಂದರಲ್ಲಿ ಬಾಲಕನೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದನ್ನು ನೋಡಿದ ಮಹಿಳೆಯೊಬ್ಬರು ಹೃದಯಾಘಾತದಿಂದ ಪ್ರಾಣಬಿಟ್ಟಿರುವ ಘಟನೆ ಕೇರಳದ ಕಾಸರಗೋಡಿನ ಬಂಗಾಳಂ ಹಾಲಿನ ಸೊಸೈಟಿ ಎದುರಿಗಿರುವ ಜಮಾತ್​ ವಸತಿ ಸಮುಚ್ಚಯದಲ್ಲಿ ನಡೆದಿದೆ.

ಮೃತ ದುರ್ದೈವಿಗಳನ್ನು ಆಲ್ಬಿನ್​ ಸೆಬಾಸ್ಟಿಯನ್​(17) ಹಾಗೂ ವಿಲಾಸಿನಿ(65) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ನೀಲೇಶ್ವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯೂ ಬೆಳಗಿನ ಜಾವ 5 ಘಂಟೆ ಸುಮಾರಿಗೆ ಸಂಭವಿಸಿದ್ದು, ಸೆಬಾಸ್ಟಿಯನ್​ ಅವರ ಪುತ್ರ ಆಲ್ಬಿನ್​ ಮನೆ ಪಕ್ಕದಲ್ಲೇ ಇರುವ ಕೆರೆಗೆ ಈಜಲು ತೆರಳಿದ್ದಾರೆ. ಈ ವೇಳೆ ಅವನ ತಾಯಿ, ಸಂಬಂಧಿಕರು ಹಾಗೂ ನೆರೆ ಹೊರೆಯವರು ಅಲ್ಲೇ ಉಪಸ್ಥಿತರಿದ್ದರು.

ನೀರಿಗೆ ಇಳಿದು ಕೆಲ ಹೊತ್ತು ಕಳೆದ ಬಳಿಕ ಆಲ್ಬಿನ್​ ಆಯತಪ್ಪಿ ಕಾಣೆಯಾಗಿದ್ಧರು. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಆತನ ಮೃತದೇಹವನ್ನು ಮೇಲಕ್ಕೆ ಎತ್ತಲಾಯಿತು. ಅಲ್ಲೇ ಇದ್ದ ನೆರೆಮನೆಯ ವಿಲಾಸಿನಿ ಬಾಲಕನ ಮೃತದೇಹ ನೋಡುತ್ತಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಅಷ್ಟರಲ್ಲಾಗಲ್ಲೇ ಅವರು ಮೃತಪಟ್ಟಿದ್ದರು. ಸ್ಥಳಕ್ಕೆ ಭೇಟಿ ನೀಡಿದ ನೀಲೇಶ್ವರ ಪೊಲೀಸರು ಸ್ತಳ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net