More

    ಜಮೀರ್ ಅಹಮದ್ ಖಾನ್​ಗೆ ಹುಟ್ಟುಹಬ್ಬದ ಪ್ರಯುಕ್ತ ಬೆಳ್ಳಿ ಖಡ್ಗ ನೀಡಿದ ಅಭಿಮಾನಿಗಳು

    ಬೆಂಗಳೂರು: ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಹುಟ್ಟುಹಬ್ಬದ ಪ್ರಯುಕ್ತ ಸ್ವಕ್ಷೇತ್ರ ಚಾಮರಾಜಪೇಟೆಯಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.

    ಮಂಗಳವಾರ ಗೋರಿ ಪಾಳ್ಯದ ಡಾ. ರಾಜ್ ಕುಮಾರ್ ಪ್ರತಿಮೆ ಯಿಂದ ಮುಖಂಡ ಬಿ. ಕೆ. ಅಲ್ತಾಫ್ ಖಾನ್ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಮುಖಂಡರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

    ಸುಮಾರು ಐದು ಕಿ. ಮೀ. ವರೆಗೆ ದಾರಿಯುದ್ದಕ್ಕೂ ಕೇಕ್ ಕತ್ತರಿಸಿ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಿದರು. ಜಮೀರ್ ಅಹಮದ್ ಖಾನ್ ಹುಟ್ಟುಹಬ್ಬದ ಪ್ರಯುಕ್ತ ಮುಖಂಡ ಅಲ್ತಾಫ್ ಖಾನ್ ಐದು ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದರು.

    Zameer ahmed khan

    ಇದನ್ನೂ ಓದಿ: VIDEO| ಹರಿಯಾಣದಲ್ಲಿ ವಿಹಿಂಪ ರ್‍ಯಾಲಿ ವೇಳೆ ಘರ್ಷಣೆ; ಮೃತರ ಸಂಖ್ಯೆ 5ಕ್ಕೆ ಏರಿಕೆ

    ಇಡೀ ದಿನ ಕ್ಷೇತ್ರ ದಲ್ಲಿದ್ದು ಜಮೀರ್ ಅಹಮದ್ ಖಾನ್​ ತಮ್ಮ ಹುಟ್ಟುಹಬ್ಬ ಪಕ್ಷದ ಕಾರ್ಯಕರ್ತರು ಮುಖಂಡರ ಜತೆ ಆಚರಿಸಿಕೊಂಡರು. ಹಿರಿಯ ಮುಖಂಡರು ಉಪಸ್ಥಿತರಿದ್ದರು.

    ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಗೃಹ ಮಂಡಳಿ ಆಯುಕ್ತರಾದ ಕವಿತಾ ಮನ್ನಿಕೇರಿ, ಪ್ರಧಾನ ಅಭಿಯಂತರ ಶರಣಪ್ಪ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ವೆಂಕಟೇಶ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕ ಜಿಲಾನಿ ಸೇರಿದಂತೆ ಅಧಿಕಾರಿಗಳು ಸಚಿವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts