More

    ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ; ಡ್ಯಾನ್ಸ್​ ಮಾಸ್ಟರ್​ ಸೇರಿದಂತೆ ಮೂವರು ಅರೆಸ್ಟ್​

    ಬೆಂಗಳೂರು: ಸಾಮಾಜಿಕ ಜಾಲತಾಣದ ಮೂಲಕ ಪರಿಚಿತಳಾದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಮೂವರು ದುರುಳರು ಆರು ತಿಂಗಳುಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರು ನಗರದ ಕೊಡಿಗೇಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಪ್ರಕರಣ ಸಂಬಂಧ ಪೊಲೀಸರು ಆ್ಯಂಡಿ ಜಾರ್ಜ್​, ಸಂತೋಷ್​ ಹಾಗೂ ಶಶಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳ ಬಳಿ ಇದ್ದ ಮೊಬೈಲ್​ ಫೋನ್​, ಲ್ಯಾಪ್​ಟಾಪ್​, ಪೆನ್​ಡ್ರೈವ್​ ಹಾಗೂ ಎಲೆಕ್ಟ್ರಾನಿಕ್​ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.

    ಪ್ರಕರಣದ ಹಿನ್ನಲೆ

    ಪ್ರಕರಣದ ಕುರಿತು ಮಾಹಿತಿ ನೀಡಿರುವ ಪೊಲೀಸ್​ ಅಧಿಕಾರಿಯೊಬ್ಬರು ಖಾಸಗಿ ಕಾಲೇಜೊಂದರಲ್ಲಿ ನೃತ್ಯ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ಆ್ಯಂಡಿ ಜಾರ್ಜ್​ ಎರಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಸಂತ್ರಸ್ತೆ ಜೊತೆ ಸ್ನೇಹ ಬೆಳೆಸಿದ್ದ. ದಿನ ಕಳೆದಂತೆ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಿದ್ದು, ಪ್ರೀತಿಸಲು ಶುರು ಮಾಡಿದ್ಧಾರೆ.

    Accused Andy George
    ಪ್ರಮುಖ ಆರೋಪಿ ಆ್ಯಂಡಿ ಜಾರ್ಜ್​

    ಇದನ್ನೇ ದುರ್ಬಳಕೆ ಮಾಡಿಕೊಂಡ ಆರೋಪಿ ಯುವತಿಯ ಖಾಸಗಿ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​ ಮಾಡುವುದಾಗಿ ಬೆದರಿಸಲು ಶುರು ಮಾಡಿದ್ದಾನೆ. ಇದರಿಂದ ಭಯಗೊಂಡ ಯುವತಿಯೂ ಆರೋಪಿಯಿಂದ ಅಂತರವನ್ನು ಕಾಯ್ದುಕೊಂಡಿದ್ದಾಳೆ. ಬಳಿಕ ತನ್ನ ಬಳಿಯಿದ್ದ ಖಾಸಗಿ ಚಿತ್ರಗಳನ್ನು ಹಂಚಿಕೊಳ್ಳುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಇದನ್ನೂ ಓದಿ: VIDEO| ಧಾರ್ಮಿಕ ಭಾವನೆಗೆ ಧಕ್ಕೆ; ಮಾನಸಿಕ ಅಸ್ವಸ್ಥೆ ಮೇಲೆ ಮನಸೋಇಚ್ಛೆ ಹಲ್ಲೆ

    ಜಾಲತಾಣದಲ್ಲಿ ಅಪ್ಲೋಡ್

    ಯುವತಿಯ ಖಾಸಗಿ ಚಿತ್ರಗಳನ್ನು ಇಟ್ಟುಕೊಂಡು ಪ್ರಕರಣದ ಪ್ರಮುಖ ಆರೋಪಿ ಆ್ಯಂಡಿ ಜಾರ್ಜ್​ನ ಇಬ್ಬರು ಸ್ನೇಹಿತರಾದ ಸಂತೋಷ್​ ಹಾಗೂ ಶಶಿ ಸಹ ಯುವತಿ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ಆರೋಪಿ ಯುವತಿಯ ಖಾಸಗಿ ಚಿತ್ರ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡಿದ ನಂತರ ಆಕೆ ನಡೆದ ಘಟನೆ ಬಗ್ಗೆ ಮನೆಯವರಿಗೆ ತಿಳಿಸಿ ದೂರು ದಾಖಲಿಸಿದ್ದಾಳೆ.

    ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ತಲೆಮಾರಿಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ಮೊಬೈಲ್​ ಫೋನ್​, ಲ್ಯಾಪ್​ಟಾಪ್​ ಹಾಗೂ ಎಲೆಕ್ಟ್ರಾನಿಕ್​ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಆ್ಯಂಡಿ ಈ ಹಿಂದೆ ಇದೇ ರೀತಿ ಹಲವು ಕೃತ್ಯಗಳನ್ನು ಎಸಗಿರುವುದಾಗಿ ಕಂಡು ಬಂದಿದ್ದು, ವಿಚಾರಣೆ ನಡೆಸಿ ಶೀಘ್ರದಲ್ಲೇ ಚಾರ್ಜ್​ಶೀಟ್​ ಸಿದ್ದಪಡಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts