

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳೆಲ್ಲ ಅಪರಾಧ ಚಟುವಟಿಕೆಗಳಲ್ಲ ತೊಡಗಿಸಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಇದೀಗ ಶಾಲೆಗೆ ಹೋಗಿ ಚೆನ್ನಾಗಿ ಕಲಿತು ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಬಾಲಕನೊಬ್ಬ ಕಳ್ಳತನ ನಡೆಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮದಲ್ಲಿ ನಡೆದಿದೆ.
ಕಾಕನೂರು ಗ್ರಾಮದ ಮಂಜುನಾಥ್ ಮತ್ತು ಪಂಚಾಕ್ಷರಪ್ಪ ಅವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ನ್ನು ಬಾಲಕ ಮೊದಲು ಕಳ್ಳತನ ನಡೆಸಿದ್ದಾನೆ. ನಂತರ ಬೈಕ್ನ್ನು ಮರಳಿ ತಂದು ನಿಲ್ಲಿಸಿ ಪಕ್ಕದಲ್ಲಿದ್ದ ಟ್ರ್ಯಾಕ್ಟರ್ ಕದ್ದೊಯ್ದಿದ್ದಾನೆ. ಬಾಲಕ ಬೈಕ್ ಮತ್ತು ಟ್ರ್ಯಾಕ್ಟರ್ ಕದ್ದು ಪರಾರಿಯಾಗುವ ದೃಶ್ಯ ಗ್ರಾಮದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿಸಿ ಟಿವಿ ದೃಶ್ಯವಾಳಿಗಳನ್ನು ಆದರಿಸಿ ಬಾಲಕನ್ನು 24 ಗಂಟೆಯಲ್ಲಿ ಬಂಧಿಸುವಲ್ಲಿ ಸಂತೇಬೆನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಲಕ ಟ್ರ್ಯಾಕ್ಟರ್ ಕದ್ದು ಪರಾರಿಯಾಗಿದ್ದ ಬಾಲಕ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಸದ್ಯ ಬಾಲಕನ ಕಳ್ಳತನ ಪ್ರಕರಣ ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬಾಲಕನ್ನು ವಿಚಾರಣೆ ನಡೆಸಿ, ತಿಳಿಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.