ಪಕ್ಷ ಬಲವರ್ಧನೆಗಾಗಿ ಬೂತ್ ರಚನೆ

sor kumar (1)
ಸೊರಬ ತಾಲೂಕಿನ ಕೋಡಂಬಿ ಗ್ರಾಮದಲ್ಲಿ ಬಿಜೆಪಿ ನೂತನ ಬೂತ್ ರಚನೆ ಅಭಿಯಾನ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಕುಮಾರ ಬಂಗಾರಪ್ಪ ಚಾಲನೆ ನೀಡಿದರು. ಗುರುಕುಮಾರ್ ಪಾಟೀಲ್, ಧರ್ಮಣ್ಣ, ರಮೇಶ್, ಮಹೇಶ್, ಚಂದ್ರಪ್ಪ ಇತರರಿದ್ದರು.
Published on

ಸೊರಬ: ಪಕ್ಷದ ಬಲವರ್ಧನೆ ಮತ್ತು ಸಂಘಟನೆಗಾಗಿ ನೂತನ ಬೂತ್‌ಗಳನ್ನು ರಚನೆ ಮಾಡಲಾಗುತ್ತದೆ ಎಂದು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ತಾಲೂಕಿನ ಚಂದ್ರಗುತ್ತಿ ಮಹಾಶಕ್ತಿ ಕೇಂದ್ರದ ಕೋಡಂಬಿ ಗ್ರಾಮದಲ್ಲಿ ಬಿಜೆಪಿಯ ನೂತನ ಬೂತ್ ರಚನೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಎಲ್ಲ ಮಹಾಶಕ್ತಿ ಕೇಂದ್ರದಲ್ಲಿ ನೂತನವಾಗಿ ಬೂತ್ ರಚನೆ ಮಾಡಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಬಿಜೆಪಿಯ ಎಲ್ಲ ಕಾರ್ಯಕರ್ತರು, ಮುಖಂಡರು ಒಟ್ಟಾಗಿ ಪಕ್ಷ ಸಂಘಟನೆಯಲ್ಲಿ ತೊಡಗುವ ಮೂಲಕ ಪಕ್ಷದ ಬಲವರ್ಧನೆಗೆ ಮುಂದಾಗಬೇಕು. ತಾಲೂಕಿನಲ್ಲಿ ಅಭಿವೃದ್ಧಿ ಕುಂಠಿತಗೊಂಡಿದ್ದು ಜನರು ಬೇಸರಗೊಂಡಿದ್ದಾರೆ. ಮತದಾರರಿಗೆ ಈಗ ತಪ್ಪಿನ ಅರಿವಾಗಿದೆ. ಪ್ರತಿಯೊಬ್ಬರಿಗೂ ಶಾಸಕರ ಮತ್ತು ಕಾಂಗ್ರೆಸ್ ಪಕ್ಷದ ವೈಲ್ಯಗಳನ್ನು ಮನವರಿಕೆ ಮಾಡುತ್ತ ಬೂತ್ ಸಂಘಟನೆ ಮಾಡಬೇಕು. ಪಕ್ಷದ ಕಮಿಟಿಗಳ ರಚನೆ ಸೇರಿ ಸಂಘಟನೆಗೆ ಶಕ್ತಿತುಂಬುವ ನಿಟ್ಟಿನಲ್ಲಿ ಸಂಘಟನೆಯ ಯಶಸ್ಸಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಕೋಡಂಬಿ ಗ್ರಾಮದ ಕಾಂಗ್ರೆಸ್ ಯುವ ಮುಖಂಡ ಪ್ರಭಾಕರ್ ನಾಯ್ಕ ಬಿಜೆಪಿಗೆ ಸೇರ್ಪಡೆಗೊಂಡರು. ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಗುರುಕುಮಾರ್ ಪಾಟೀಲ್, ಧರ್ಮಣ್ಣ ನ್ಯಾರ್ಶಿ, ರಮೇಶ್ ಮಾವಿನಬಳ್ಳಿಕೊಪ್ಪ, ಮಹೇಶ್ ದ್ಯಾವಸ, ಚಂದ್ರಪ್ಪ ಚಂದ್ರಗುತ್ತಿ, ವಸಂತ್ ಕಮರೂರು, ಮಹಾಬಲೇಶ್ವರ ಕಮರೂರು, ಪುರಸಭೆ ಸದಸ್ಯ ಎಂ.ಡಿ.ಉಮೇಶ್, ಕೃಷ್ಣಮೂರ್ತಿ ಕೊಡಕಣಿ, ಮೂಡಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಶಿವನಗೌಡ ದ್ವಾರಳ್ಳಿ, ಮಲ್ಲಿಕಾರ್ಜುನ್ ವೃತ್ತಿಕೊಪ್ಪ, ಚಂದ್ರು ಮಾಸೂರು, ಪ್ರವೀಣ್ ನೆರಲಗಿ, ಪ್ರಕಾಶ್ ಹುಣಸವಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net