ರೈಲ್ವೆಯ ತತ್ಕಾಲ್ ಟಿಕೆಟ್ ಅಥವಾ ಇ-ಟಿಕೆಟ್​ ಬುಕ್ಕಿಂಗ್ ವಂಚನೆಗೆ ಒಳಗಾಗಿದ್ದೀರಾ...

IRCTC
Published on

ನವದೆಹಲಿ: ಹೌದು, ತತ್ಕಾಲ್​ ಮತ್ತು ಇ-ಟಿಕೆಟ್​ ಬುಕಿಂಗ್ ವೇಳೆ ನಡೆಯುತ್ತಿರುವ ಮೋಸ ಮತ್ತು ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕಲು ಐಆರ್​ಸಿಟಿಸಿ ಮುಂದಾಗಿದೆ. ಈ ಕುರಿತು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ರೈಲ್ವೆ ಸಚಿವ ಪಿಯೂಶ್ ಗೊಯೆಲ್ ತತ್ಕಾಲ್ ಮತ್ತು ಇ-ಟಿಕೆಟ್ ಬುಕಿಂಗ್ ವೇಳೆ ಮಧ್ಯವರ್ತಿಗಳ ವಂಚನೆ ಹಾಗೂ ಇನ್ನಿತರ ಅಕ್ರಮಗಳ ನಿಯಂತ್ರಣಕ್ಕೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಆನ್​ಲೈನ್​ನಲ್ಲಿ ಒಬ್ಬ ಯೂಸರ್​ಗೆ ಕೇವಲ ಎರಡು ತತ್ಕಾಲ್ ಟಿಕೆಟ್ ಬುಕ್ ಮಾಡಬಹುದು. ಇದಕ್ಕೆ 10 ರಿಂದ 12 ಗಂಟೆಗಳ ಒಳಗೆ ಮಾತ್ರ ಬುಕಿಂಗ್​ಗೆ ರೈಲ್ವೆ ಇಲಾಖೆ ಮಿತಿ ನಿಗದಿ ಪಡಿಸಿದೆ. ರಿಸರ್ವೇಶನ್ ಟಿಕೆಟ್ ಬುಕಿಂಗ್ ವೇಳೆ ಹಲವು ಬಗೆಯ ಅವ್ಯವಹಾರಗಳು ಕಂಡು ಬಂದ ಹಿನ್ನೆಲೆಯಲ್ಲಿ ಐಆರ್​ಸಿಟಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇ-ಟಿಕೆಟ್ ಮತ್ತು ತತ್ಕಾಲ್ ಟಿಕೆಟ್ ಬುಕಿಂಗ್​ನಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳು ಈ ರೀತಿ ಇವೆ.

  • ಒಬ್ಬ ಯೂಸರ್​ಗೆ ಕೇವಲ 2 ತತ್ಕಾಲ್ ಟಿಕೆಟ್ ಬುಕಿಂಗ್​​ಗೆ ಮಾತ್ರ ಅವಕಾಶ, 10 ರಿಂದ 12 ಗಂಟೆ ಒಳಗೆ ಸಮಯದ ಮಿತಿ
  • ತತ್ಕಾಲ್ ಟಿಕೆಟ್ ಬುಕಿಂಗ್​ಗೆ ಭದ್ರತಾ ಪ್ರಶ್ನೆಗಳನ್ನು ಪರಿಚಯಿಸಿದೆ
  • ಏಜೆಂಟ್​ಗಳಿಗೆ ದಿನಕ್ಕೆ ಒಂದು ರೈಲಿಗೆ ಕೇವಲ ಒಂದು ತತ್ಕಾಲ್ ಟಿಕೆಟ್​ಗೆ ನಿರ್ಬಂಧ
  •  ಒಬ್ಬ ವ್ಯಕ್ತಿ ತನ್ನ ಈ ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ನೀಡಿ ಕೇವಲ ಒಂದೇ ಐಆರ್​ಸಿಟಿಸಿ ಯೂಸರ್ ಐಡಿ ಕ್ರಿಯೇಟ್ ಮಾಡಲು ಅವಕಾಶ
  •  ಒಬ್ಬ ಯೂಸರ್​ಗೆ ತಿಂಗಳಿಗೆ ಕೇವಲ 6 ಟಿಕೆಟ್ ಬುಕಿಂಗ್ ಮಿತಿ, ಐಆರ್​ಸಿಟಿಸಿ ಯೂಸರ್ ಐಡಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿದ್ದು, ಪ್ರಯಾಣಿಕರ ಪಟ್ಟಿಯಲ್ಲಿ ಆ ಯೂಸರ್ ಇದ್ದರೆ 12 ಟಿಕೆಟ್​ಗಳವರೆಗೆ ಬುಕ್​ ಮಾಡಲು ಅವಕಾಶ
  •  ರಿಟರ್ನ್ ಹಾಗೂ ಮುಂದಿನ ಪ್ರಯಾಣದ ಅವಧಿ 8 ರಿಂದ 12 ಗಂಟೆ ಒಳಗಿದ್ದರೆ ಒಬ್ಬ ಯೂಸರ್​ಗೆ ಕೇವಲ ಒಂದೇ ಟಿಕೆಟ್​ ನಿರ್ಬಂಧವಿಲ್ಲ
  •  ಬುಕಿಂಗ್ ವೇಳೆ ನಡೆಯುವ ಮೋಸ ತಡೆಗಟ್ಟಲು ರಿಜಿಸ್ಟ್ರೇಷನ್​, ಲಾಗಿನ್, ಮತ್ತು ಬುಕಿಂಗ್ ಪೇಜ್​ನಲ್ಲಿ ಆಟೋಮೇಷನ್ ಸಾಫ್ಟ್ ವೇರ್​, ಕ್ಯಾಪ್ಚ ಸೇರಿದಂತೆ ಮೂರು ವಿವಿಧ ಭದ್ರತಾ ಕ್ರಮ ಕೈಗೊಳ್ಳಲಾಗಿದೆ
  •  ಪ್ರಯಾಣಿಕರ ವಿವರಗಳ ಪರಿಶೀಲನೆಗಾಗಿ ಐಆರ್​ಸಿಟಿಸಿಯಿಂದ ಕನಿಷ್ಠ ಸಮಯ ನಿಗದಿ, ಇ-ಟಿಕೆಟ್​ ಬುಕಿಂಗ್ ಸಮಯದಲ್ಲಿ ಕ್ಯಾಪ್ಚ ಪ್ರದರ್ಶನ
  •  ಐಆರ್​​ಸಿಟಿಸಿಯ ಅಧಿಕೃತ ಏಜೆಂಟ್​ಗಳಿಗೆ ತತ್ಕಾಲ್ ಮತ್ತು ಮುಂಗಡ ಕಾಯ್ದಿರಿಸುವಿಕೆ ಬುಕಿಂಗ್​ ಓಪನ್ ಆದ ಮೊದಲು 15 ನಿಮಿಷಗಳು ಮಾತ್ರ ಟಿಕೆಟ್ ಬುಕಿಂಗ್​ಗೆ ಅವಕಾಶ
  •  ಏಜೆಂಟ್​ ಮತ್ತು ಏಜೆನ್ಸಿಗಳು ಬುಕಿಂಗ್ ವೇಳೆ ಅನಧಿಕೃತ ಹಣದಿಂದ ಟಿಕೆಟ್​ ಸಂಗ್ರಹ ಮತ್ತು ಬೇರೆಯವರಿಗೆ ವರ್ಗಾವಣೆ ಮಾಡುವವರ ಮೇಲೆ ಆರ್​ಪಿಎಫ್​​ನಿಂದ ನಿರಂತರ ದಾಳಿ
  •  ಇ-ಟಿಕೆಟ್​ ವಂಚನೆ ಪ್ರಕರಣಗಳ ವಿರುದ್ಧ ಕ್ರಮ, ಐಆರ್​ಸಿಟಿಸಿ ಐಡಿ ಬಳಸಿ ಪ್ರಶ್ನೆ ಆಧಾರಿತ ಅರ್ಜಿಗಳ ಪರಿಶೀಲನೆ (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net