ಬಾಂಬ್​ ಬೆದರಿಕೆ: ಬಾಂಬೆ ಹೈಕೋರ್ಟ್​ ಆವರಣದಿಂದ ಹೊರನಡೆಯುತ್ತಿರುವ ಸಿಬ್ಬಂದಿಗಳು, ವಿಡಿಯೋ ವೈರಲ್​!| Bombay High Court

bomb-threat
Published on

Bombay High Court : ದೆಹಲಿಯಲ್ಲಿ ಬಾಂಬ್​ ಬೆದರಿಕೆ ಬಂದ ಕೆಲವೇ ಗಂಟೆಗಳಲ್ಲಿ ಬಾಂಬೆ ಹೈಕೋರ್ಟ್​ನಲ್ಲಿ ಬಾಂಬ್​ ಸ್ಪೋಟಿಸುವುದಾಗಿ ಸುದ್ದಿ ತಿಳಿದ ಕೂಡಲೇ ಅಲ್ಲಿರುವ ಸಿಬ್ಬಂದಿಗಳು ಭಯದಿಂದ ಜೀವ ಉಳಸಿಕೊಳ್ಳಲು ಓಡಿಬರುತ್ತಿರುವಂತ ದೃಶ್ಯ ಎಲ್ಲೆಡೆ ವೈರಲ್​ ಆಗಿದೆ.

ವರದಿಗಳ ಪ್ರಕಾರ, ಬೆದರಿಕೆ ಮೇಲ್ ಕಳುಹಿಸಿದವರು ನ್ಯಾಯಾಲಯದ ಆವರಣದಲ್ಲಿ ಮೂರು ಬಾಂಬ್‌ಗಳನ್ನು ಇಡಲಾಗಿದೆ ಮಧ್ಯಾಹ್ನ 2 ಗಂಟೆಯ ನಂತರ ಅವುಗಳನ್ನು ಸ್ಫೋಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಮಾಹಿತಿ ಬಂದ ಕೂಡಲೇ, ಎಲ್ಲಾ ನ್ಯಾಯಾಂಗ ಪ್ರಕ್ರಿಯೆಗಳು ಮತ್ತು ಆಡಳಿತಾತ್ಮಕ ಕೆಲಸಗಳನ್ನು ಕೂಡಲೇ ಸ್ಥಗಿತಗೊಳಿಸಿದ್ದು, ಅಲ್ಲಿರುವ ಸಿಒಬ್ಬಂದಿಗಳು ಹಾಗೂ ಜನರನ್ನು ಅಲ್ಲಿಂದ ಹೊರತರಲಾಗಿದೆ. ಇನ್ನು ಸ್ಥಳಕ್ಕೆ ಆಗಮಿಸಿದ ಬಾಂಬ್​ ನಿಷ್ಕ್ರಿಯ ದಳ ಹಾಗೂ ಭದ್ರತಾ ತಂಡಗಳು ಬಾಂಬ್​ ಇರುವ ಸ್ಥಳವನ್ನು ಹುಡುಕಾಟ ನಡೆಸುತ್ತಿದ್ದಾರೆ.

ಬೆದರಿಕೆಯ ಮೂಲಗಳನ್ನು ಪತ್ತೆ ಹಚ್ಚುವ ಸಲುವಾಗಿ ಸೈಬರ್​ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಇನ್ನು ನ್ಯಾಯಾಧೀಶರು ಹಾಗೂ ಅಲ್ಲಿರುವ ಜನರನ್ನು ನ್ಯಾಯಾಲಯದಿಂದ ಹೊರಕರೆತಂದಿದ್ದು, ನ್ಯಾಯಾಲಯದ ಸುತ್ತಲೂ ಭಿಗಿಬಂದೋಬಸ್ತ್​ ಮಾಡಲಾಗಿದೆ.

ಇಂದು ಮುಂಜಾನೆ ಈ ವಿಚಾರ ಬೆಳಕಿಗೆ ಬಂದಿದ್ದು, ಈ ವೇಳೆ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರಿಗೆ ಕಲಾಪಗಳನ್ನು ನಿಲ್ಲಿಸಿ ಕಟ್ಟಡ ಖಾಲಿ ಮಾಡುವಂತೆ ಸೂಚನೆ ನೀಡಲಾಯಿತು. ಈ ವೇಳೆ ಬಾಂಬ್​ ನಿಷ್ಕ್ರಿಯ ದಳ ಹಾಗೂ ಭದ್ರತಾ ತಂಡಗಳು ಸ್ಥಳಕ್ಕೆ ಆಗಮಿಸಿದ್ದು, ನ್ಯಾಯಾಲಯದ ಸಂಪೂರ್ಣ ಕಟ್ಟಡವನ್ನು ಸುತ್ತುವರೆದು ಶೋಧ ಕಾರ್ಯವನ್ನು ನಡೆಸುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net