

ಮುಂಬೈ: ಇತ್ತೀಚೆಗಷ್ಟೇ ಬಾಲಿವುಡ್ ಅಂಗಳದಲ್ಲಿ ಬಿಡುಗಡೆಗೊಂಡ ರೋಮ್ಯಾಂಟಿಕ್ ಜಾನರ್ 'ಸತ್ಯಪ್ರೇಮ್ ಕೀ ಕಥಾ' ಸಿನಿಮಾ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದೀಗ ಈ ಚಿತ್ರವು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ.
'ಸತ್ಯಪ್ರೇಮ್ ಕೀ ಕಥಾ' ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಜೋಡಿ ತೆರೆ ಮೇಲೆ ಮಿಂಚಿದ್ದು, ಅಭಿಮಾನಿಗಳು ಇಬ್ಬರ ನಟನೆಗೆ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದರೊಟ್ಟಿಗೆ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆಯನ್ನು ಕಂಡಿದ್ದು, ಸಿನಿಮಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ.
ಸಮೀರ್ ವಿದ್ವಾನ್ಸ್ ನಿರ್ದೇಶನದ ಸತ್ಯಪ್ರೇಮ ಕೀ ಕಥಾ ಈಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. 349 ರೂ.ಗೆ ಸ್ಟ್ರೀಮಿಂಗ್ ಲಭ್ಯವಿದೆ. ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಗಜರಾಜ್ ರಾವ್, ಸುಪ್ರಿಯಾ ಪಾಠಕ್, ಸಿದ್ಧಾರ್ಥ್ ರಾಂಡೇರಿಯಾ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ,(ಏಜೆನ್ಸೀಸ್).