

ಬೆಂಗಳೂರು: 'ಅಗ್ನಿವೀರ್ ವಾಯು' ಹುದ್ದೆಗೆ ಭಾರತೀಯ ವಾಯುಪಡೆಯು ಆಸಕ್ತ ಅಭ್ಯರ್ಥಿಗಳಿಗೆ ಶೀಘ್ರವೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇದೀಗ ದಿನಾಂಕವನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಇಂಡಿಯನ್ ಏರ್ಫೋರ್ಸ್ ವಿಭಾಗದಲ್ಲಿ 4,165 ಅಗ್ನಿವೀರ್ ವಾಯು ಹುದ್ದೆಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 27 ರಿಂದ ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದ್ದು, ಆಗಸ್ಟ್ 17 ರಂದು ಕೊನೆಗೊಳ್ಳಲಿದೆ.
ಅಗ್ನಿವೀರ್ ವಾಯು ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುಲು ಮೂರು ಹಂತದಲ್ಲಿ ನಡೆಯಲಿರುವ ಪರೀಕ್ಷೆಯನ್ನು ಸ್ಟಾರ್ ಲೆವಲ್ ಎಕ್ಸಾಂ ಎಂದು ಕರೆಯಲಾಗುತ್ತದೆ. ಮೂರು ಹಂತಗಳು ಯಾವ ರೀತಿ ಇರಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ,
ಸ್ಟಾರ್ ಹಂತ 1: ಈ ಹಂತದಲ್ಲಿ ಆನ್ಲೈನ್ ಲಿಖಿತ ಪರೀಕ್ಷೆ ಇರಲಿದೆ. ನಿಗಡಿಪಡಿಸಿದ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ.
ಸ್ಟಾರ್ ಹಂತ 2: ದೈಹಿಕ ಸಾಮರ್ಥ್ಯ ಪರೀಕ್ಷೆ, AT-1 ಮತ್ತು AT-2 ಪರೀಕ್ಷೆ. ASC ನಲ್ಲಿ ನಡೆಯಲಿದೆ.
ಸ್ಟಾರ್ ಹಂತ 3: ವೈದ್ಯಕೀಯ ಫಿಟ್ನೆಸ್ ಪರೀಕ್ಷೆ ಇರಲಿದೆ. IAFನ ವೈದ್ಯಕೀಯ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ.
ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಲಿಂಕ್ ಕ್ಲಿಕ್ ಮಾಡಿ, ವಿವರ ತಿಳಿದುಕೊಳ್ಳಬಹುದು.