ನಟ ಗೋವಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್; ವ್ಹೀಲ್​ಚೇರ್​​​ನಲ್ಲಿ ಕಾಣಿಸಿಕೊಂಡ ಸೂಪರ್​ಸ್ಟಾರ್​ ಫ್ಯಾನ್ಸ್​ಗೆ ಹೇಳಿದಿಷ್ಟು | Bollywood​

Untitled-design-2024-10-04T153222.660-1
Published on

ಮುಂಬೈ: ಬಾಲಿವುಡ್​​​(Bollywood​) ನಟ ಗೋವಿಂದ ಅವರು ಕಾಲಿಗೆ ಗುಂಡು ಹಾರಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದು ಗೊತ್ತೆ ಇದೆ. ಮೂರು ದಿನಗಳ ಚಿಕಿತ್ಸೆ ಬಳಿಕೆ ನಟ ಗೋವಿಂದ್​ ಅವರನ್ನು ಶುಕ್ರವಾರ(ಅಕ್ಟೋಬರ್​​ 4) ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆದ ಅವರ ಮೊದಲ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಗೋವಿಂದ ಅವರನ್ನು ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.

ಆಸ್ಪತ್ರೆಯಿಂದ ವ್ಹೀಲ್​ಚೇರ್​​ನಲ್ಲಿ ಹೊರಬರುತ್ತಿದ್ದಂತೆ ಗೋವಿಂದ್​ ಅವರು ಕೈಮುಗಿದು ಎಲ್ಲರಿಗೂ ಧನ್ಯವಾದ ಹೇಳಿದರು. ಅಭಿಮಾನಿಗಳ ನಾನು ಪ್ರೀತಿಯನ್ನು ಸ್ವೀಕರಿಸಿದ್ದೇನೆ. ನನಗಾಗಿ ಮತ್ತು ನನ್ನ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದ ಜನರಿಗೆ ಧನ್ಯವಾದಗಳು. ನನ್ನನ್ನು ಪ್ರೀತಿಸುವ ಎಲ್ಲರಿಗೂ, ನನ್ನ ಅಭಿಮಾನಿಗಳಿಗೆ, ಸರ್ಕಾರ ಮತ್ತು ಪೊಲೀಸರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ ಎಂದು ಹೇಳಿದರು.

ಗೋವಿಂದ ಅವರ ಪತ್ನಿ ಸುನೀತಾ ಅಹುಜಾ ಅವರು ಮಾತನಾಡಿ, ಮನೆಯಲ್ಲಿ ವೈದ್ಯರು 6 ವಾರಗಳ ಕಾಲ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ಹೇಳಿದ್ದಾರೆ, ಹೀಗಾಗಿ ಸೋಂಕಿನ ಭಯ ಇರುವುದರಿಂದ ಯಾರನ್ನೂ ಹೆಚ್ಚು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಗೋವಿಂದ ಅವರ ವೈದ್ಯ ಡಾ.ಅಗರ್​ವಾಲ್​​​ ಮಾತನಾಡಿ, ಅವರು ಮೂರರಿಂದ ನಾಲ್ಕು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಾಗುತ್ತದೆ. ಅವರ ವ್ಯಾಯಾಮಗಳು, ಫಿಸಿಯೋಥೆರಪಿ ಮುಂದುವರಿಯುತ್ತದೆ. ಅವರು ಆ್ಯಕ್ಟಿವ್​ ಆಗಿ ಇರುವ ಕಾರಣ ಡಿಸ್ಚಾರ್ಜ್​ ಮಾಡಲಾಗಿದೆ. ಗೋವಿಂದ ಅವರ ಆಹಾರಕ್ರಮವನ್ನು ವಿಶೇಷ ಆಹಾರ ತಜ್ಞರು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

2024 ಅಕ್ಟೋಬರ್ 1ರಂದು ಗೋವಿಂದ ಅವರು ಆಕಸ್ಮಿಕವಾಗಿ ತನ್ನ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು, ಇದರಿಂದಾಗಿ ಅವನ ಕಾಲಿಗೆ ಗಾಯವಾಯಿತು. ಮುಂಜಾನೆ 4:45ರ ಸುಮಾರಿಗೆ ಕೆಲಸಕ್ಕೆ ಮೇಲೆ ಕೋಲ್ಕತ್ತಾಗೆ ತಯಾರಿ ನಡೆಸುತ್ತಿದ್ದಾರ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net