24 ವರ್ಷಗಳ ಬಳಿಕ ದೇಶಕ್ಕೆ ಮರಳಿದ ಬಾಲಿವುಡ್​ ನಟಿ.. ಇಷ್ಟು ದಿನ ಭಾರತಕ್ಕೆ ಬರದೇ ಇರಲು ಕಾರಣ ಹೀಗಿದೆ

24
Published on

ಮುಂಬೈ: ಶಾರುಖ್​​ ಖಾನ್​ ಮತ್ತು ಸಲ್ಮಾನ್​ ಖಾನ್​ರ 90ರ ದಶಕದಲ್ಲಿ ಮಿಂಚಿದ್ದ ಸ್ಟಾರ್ ಹೀರೋಹಿನ್ ಈಕೆ. ಮಾದಕದ್ರವ್ಯ ಕಳ್ಳ ಸಾಗಣಿಕೆ ಪ್ರಕರಣವೊಂದರಲ್ಲಿ ಆರೋಪ ಎದುರಿಸುತ್ತಿದ್ದ ನಟಿ ಇದೀಗ​ 24 ವರ್ಷಗಳ ಬಳಿಕ ನಮ್ಮ ದೇಶಕ್ಕೆ ಮರಳಿದ್ದಾರೆ.

90ರ ದಶಕದ ಅತ್ಯಂತ ಜನಪ್ರಿಯ ನಟಿ ಮಮತಾ ಕುಲಕರ್ಣಿ 2 ಸಾವಿರ ಕೋಟಿ ರೂ. ಮಾದಕದ್ರವ್ಯ ಕಳ್ಳಸಾಗಣಿಕೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು.  24 ವರ್ಷಗಳ ಬಳಿಕ ಮುಂಬೈಗೆ ಬಂದಿದ್ದಾರೆ. ಈ ಕುರಿತು ನಟಿ ತಮ್ಮ ಇನ್​ಸ್ಟಾಗ್ರಾಮ್​ನ ಪೇಜ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದು ಇದರಲ್ಲಿ ಭಾರತಕ್ಕೆ ಮರಳಿದ ತಮ್ಮ ಅನುಭವ ವ್ಯಕ್ತಪಡಿಸಿದ್ದಾರೆ.

''ಹಲೋ ಭಾರತದ ಗೆಳೆಯರೇ ನಾನು ಮಮತಾ ಕುಲಕರ್ಣಿ, ನಾನು 24 ವರ್ಷಗಳ ಬಳಿಕ ಭಾರತದ ಮುಂಬೈ ವಿಮಾನ ನಿಲ್ದಾದಲ್ಲಿ ಬಂದು ಇಳಿದಿರುವೆ. 2000ನೇ ಇಸ್ವಿಯಲ್ಲಿ ಭಾರತದಿಂದ ನಿರ್ಗಮಿಸಿದ್ದೆ. ಮತ್ತೆ ನನ್ನ ತಾಯ್ನಾಡಿಗೆ ಮರಳಿದ್ದು ನಾನು ಭಾವುಕನಾಗಿದ್ದೇನೆ. ನಾನು ಅದನ್ನು ಹೇಗೆ ವ್ಯಕ್ತಪಡಿಸಲಿ ಎಂದು ಸಾಧ್ಯವಾಗುತ್ತಿಲ್ಲ'' ಎಂದಿದ್ದಾರೆ.

ಏನಿದು 2 ಸಾವಿರ ಕೋಟಿ ರೂ. ಕಳ್ಳಸಾಗಣಿಕೆ ಪ್ರಕರಣ?

2016 ಏಪ್ರೀಲ್​ನಲ್ಲಿ ಮಹಾರಾಷ್ಟ್ರದ ಥಾಣೆ ಪೊಲೀಸರು 80 ಲಕ್ಷ ರೂ. ಮೌಲ್ಯದ ಎಫೇಡ್ರಿನ್ ಸಾಗಿಸುತ್ತಿದ್ದ ಎರಡು ಕಂಟೆನರ್​ಗಳನ್ನು ವಶಪಡಿಕೊಂಡಿದ್ದರು. ಈ ಕಂಟೆನರ್​ಗಳು ಮಮತಾ ಕುಲಕರ್ಣಿ ಅವರ ಪತಿ ವಿಕ್ಕಿ ಗೋಸ್ವಾಮಿ ಅವರಿಗೆ ಸಂಬಂಧಿಸಿದೆ ಎಂದು ಪೊಲೀಸರು ಧೃಢಪಡಿಸಿದ್ದರು. ಪತಿ ಗೋಸ್ವಾಮಿ ನಡೆಸುತ್ತಿದ್ದ ಕಂಪನಿಗೆ ಕುಲಕರ್ಣಿ ಅವರು ನಿರ್ದೇಶಕರಾಗಿದ್ದರು. ಅಲ್ಲದೆ, ಕಂಪನಿಯ 11 ಲಕ್ಷ ರೂ. ಷೇರುಗಳನ್ನು ಹೊಂದಿದ್ದ ಮಮತಾ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.

ಬಳಿಕ 2018ರಲ್ಲಿ ಮಮತಾ ಪರ ವಾದ ಮಂಡಿಸಿದ ವಕೀಲ, ''ಮಮತಾ ಈ ಪ್ರಕರಣಲ್ಲಿ ಭಾಗಿಯಾದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಧಾರಗಳು ಇಲ್ಲ. ಅವರು ನಿರಾಪರಾಧಿ, ಹೀಗಾಗಿ, ಇವರ ಮೇಲೆ ಹಾಕಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿವಂತೆ ಕೋರ್ಟ್​ಗೆ ಒತ್ತಾಯಿಸಿದ್ದರು''.

ವಾದ ವಿವಾದ ಆಲಿಸಿದ ಬಾಂಬೆ ಹೈ ಕೋರ್ಟ್​ ಇದೇ ವರ್ಷದ ಆರಂಭದಲ್ಲಿ ಮಮತಾ ಮೇಲಿನ ಕ್ರಿಮಿನಲ್​ ಮೊಕದ್ದಮೆಯನ್ನು ರದ್ದುಗೊಳಿಸಿತ್ತು. ನ್ಯಾಯಮೂರ್ತಿಗಳಾದ ಭಾರತಿ ಡಾಕ್ಟರ್ ಮತ್ತು ಮಂಜುಷಾ ದೇಶಪಾಂಡೆ ಅವರ ವಿಭಾಗೀಯ ಪೀಠವು ಕುಲಕರ್ಣಿ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಅವರ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿದೆ,(ಏಜೆನ್ಸೀಸ್​​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net