ಬಾಲಿವುಡ್​ ನಟರ ಬೆನ್ನು ಹತ್ತಿದ ಕರೊನಾ : ಗೋವಿಂದ ಪಾಸಿಟೀವ್

gov
Published on

ಮುಂಬೈ : ದಿನದಿಂದ ದಿನಕ್ಕೆ ಕರೊನಾ ಸೋಂಕು ತಗುಲುತ್ತಿರುವ ಬಾಲಿವುಡ್ ನಟ-ನಟಿಯರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಮುಂಬೈನ ಜುಹೂ ನಿವಾಸಿಯಾದ ಹಿರಿಯ ನಟ ಗೋವಿಂದ ಅವರಿಗೆ ಸೋಂಕು ದೃಢಪಟ್ಟಿದೆ. ತೆಳುವಾಗಿ ರೋಗಲಕ್ಷಣಗಳು ಕಾಣಿಸಿಕೊಂಡಿದ್ದು, ಮನೆಯಲ್ಲೇ ಕ್ವಾರಂಟೈನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಗೋವಿಂದ ಅವರ ಪತ್ನಿ ಸುನೀತಾ ಅಹೂಜಾ ಅವರಿಗೆ ಇತ್ತೀಚೆಗಷ್ಟೇ ಕರೊನಾ ಸೋಂಕು ತಗುಲಿ ಗುಣಮುಖರಾಗಿದ್ದರು. ಇದೀಗ 57 ವರ್ಷದ ನಟ ಗೋವಿಂದ ಅವರಿಗೆ ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿದೆ. ನಿರಂತರ ವೈದ್ಯರ ಸಂಪರ್ಕದಲ್ಲಿದ್ದು ರೋಗಲಕ್ಷಣಗಳ ಬಗ್ಗೆ ನಿಗಾ ವಹಿಸುತ್ತಿದ್ದೇವೆ. ಕೆಲಸದವರು ಸೇರಿದಂತೆ ಮನೆಯವರೆಲ್ಲರ ಪರೀಕ್ಷೆ ಮಾಡಿಸಲಾಗಿದ್ದು, ಎಲ್ಲರಿಗೂ ನೆಗೆಟೀವ್ ಬಂದಿದೆ. ಇತ್ತೀಚೆಗೆ ಗೋವಿಂದ ಅವರ ನಿಕಟ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸುನೀತಾ ಹೇಳಿದ್ದಾರೆ.

ಇತ್ತೀಚೆಗೆ ಬಾಲಿವುಡ್​ ಸ್ಟಾರ್​ಗಳಾದ ಆಮೀರ್ ಖಾನ್, ಆರ್​.ಮಾಧವನ್, ಆಲಿಯಾ ಭಟ್ ಅವರಿಗೆ ಸೋಂಕು ತಗುಲಿದ್ದು ವರದಿಯಾಗಿತ್ತು. ಇಂದಷ್ಟೇ ನಟ ಅಕ್ಷಯ್​ಕುಮಾರ್ ಅವರಿಗೂ ಸೋಂಕು ದೃಢಪಟ್ಟಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net