ಮಾಜಿ ಪತ್ನಿ ಸೇರಿದಂತೆ ಮೂವರನ್ನೂ ಕೊಂದು ಇನ್​ಸ್ಟಾಗ್ರಾಂನಲ್ಲಿ ಲೈವ್​ಸ್ಟ್ರೀಮ್​ ಮಾಡಿದ ಬಾಡಿಬಿಲ್ಡರ್​

Body Builder
Published on

ಬೋಸ್ನಿಯಾ: ಬಾಡಿ ಬಿಲ್ಡರ್​ ಓರ್ವ ತನ್ನ ಮಾಜಿ ಪತ್ನಿ ಸೇರಿದಂತೆ ಮೂವರನ್ನೂ ಹತ್ಯೆ ಮಾಡಿ ಅದನ್ನೂ ಇನ್​ಸ್ಟಾಗ್ರಾಂನಲ್ಲಿ ಲೈವ್​ಸ್ಟ್ರೀಮ್​ ಮಾಡಿರುವ ಘಟನೆ ಆಗ್ನೇಯ ಯೂರೋಪ್​ನಲ್ಲಿರುವ ಬೋಸ್ನಿಯಾ ದೇಶದಲ್ಲಿ ನಡೆದಿದೆ.

ಆರೋಪಿ ನರ್ಮಿನ್ ಸುಲೇಜ್ಮನೋವಿಕ್​(35) ಸಂಪೂರ್ಣ ಘಟನೆಯನ್ನೂ ಚಿತ್ರೀಕರಿಸಿದ್ದು, ತನ್ನ ಮಾಜಿ ಪತ್ನಿ, ಆಕೆಯ ತಂದೆ ಹಾಗೂ ಮಗುವನ್ನು ಕೊಲೆ ಮಾಡಿದ್ದಾನೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಮೂವರನ್ನೂ ಹತ್ಯೆ ಮಾಡಿದ ಆರೋಪಿ ಇನ್​ಸ್ಟಾಗ್ರಾಂನಲ್ಲಿ ಘಟನೆಯ ಲೈವ್​ಸ್ಟ್ರೀಮ್​ ಮಾಡಿದ್ದಾನೆ. ಬಳಿಕ ಆತ ಲೈವ್​ ಬಂದಿದ್ದು, ತಾನು ಹತ್ಯೆ ಮಾಡಿದವರ ಪಟ್ಟಿಯನ್ನೂ ಹೇಳುತ್ತಾ ಹೋಗಿದ್ದಾನೆ. ಪೊಲೀಸ್​ ಅಧಿಕಾರಿ ಒಬ್ಬರ ಮೇಲೂ ಗುಂಡು ಹಾರಿಸಿರುವುದಾಗಿ ಲೈವ್​ನಲ್ಲಿ ಹೇಳಿರುವುದು ಎಲ್ಲೆಡೆ ವೈರಲ್​ ಆಗಿದೆ.

Body Builder

ಬಳಿಕ ತಾನೂ ಶರಣಾಗುವುದಕ್ಕೆ ಸಿದ್ದನಾಗಿದ್ದು, ಪೊಲೀಸರಿಗೆ ತನ್ನ ಬಳಿ ಇರುವ ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ತಯಾರಿರುವುದಾಗಿ ಹೇಳಿದ್ದಾನೆ. ಆರೋಪಿಯ ಜಾಡು ಹಿಡಿದು ಆತನನ್ನು ಬಂಧಿಸಲು ಪೊಲೀಸರು ಸ್ಥಳಕ್ಕೆ ತೆರಳಿದಾಗ ಆತ ತನ್ನ ಬಳಿ ಇದ್ದ ಬಂದೂಕಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸ್​ ಅಧಿಕಾರಿಯೊಬ್ಬರು ಆರೋಪಿ ನರ್ಮಿನ್ ಸುಲೇಜ್ಮನೋವಿಕ್ ವೃತ್ತಿಯಲ್ಲಿ ಬಾಡಿಬಿಲ್ಡರ್ ಆಗಿದ್ದು, ಕೆಲವು ವರ್ಷಗಳ ಹಿಂದೆ ಪತ್ನಿ ಈತನಿಗೆ ವಿಚ್ಚೇದನ ನೀಡಿದ್ದಳು. ಹಳೇ ವೈಷಮ್ಯದಿಂದ ಆರೋಪಿ ಕೃತ್ಯ ಎಸಗಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಆತನ ನೆಟ್​ವರ್ಕ್​ ಟ್ರೇಸ್​ ಮಾಡಿ ಬಂಧಿಸಲು ತೆರಳಿದಾಗ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ಪೊಲೀಸ್​ ಅಧಿಕಾರಿಯೊಬ್ಬರು ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net