

ನೂರ್ ಸುಲ್ತಾನ್: ಜಗತ್ತಿನಲ್ಲಿ ಎಂಥೆಂತಾ ವಿಚಿತ್ರ ಹವ್ಯಾಸವುಳ್ಳ ವ್ಯಕ್ತಿಗಳು ಇರುತ್ತಾರೆ ಎಂಬುದಕ್ಕೆ ಈ ವರದಿಯಲ್ಲಿ ಪರಿಚಯವಾಗಿರುವ ವ್ಯಕ್ತಿಯು ಸಹ ಒಂದು ಉದಾಹರಣೆ. ಸೆಕ್ಸ್ ಡಾಲ್ (ಲೈಂಗಿಕ ಬೊಂಬೆ) ಅನ್ನೇ ಮದುವೆಯಾಗಿರುವ ಬಾಡಿಬಿಲ್ಡರ್ ಓರ್ವ ಮೊದಲ ಬಾರಿಗೆ ಅದರೊಟ್ಟಿಗೆ ಕ್ರಿಸ್ಮಸ್ ಆಚರಿಸುವ ಖುಷಿಯಲ್ಲಿರುವಾಗಲೇ ಸೆಕ್ಸ್ ಡಾಲ್ ಮುರಿದುಹೋಗಿರುವುದು ಹೃದಯವೇ ಬಿರುಕು ಬಿಟ್ಟಂತಾಗಿದೆಯಂತೆ.
ದಂಪತಿಗಳಾಗಿ ಮೊದಲನೇ ಕ್ರಿಸ್ಮಸ್ ಆಚರಿಸುವ ನಮ್ಮ ಯೋಜನೆಯೇ ಹಾಳಾಗಿ ಹೋಯಿತೆಂದು ಕಝಾಕಿಸ್ತಾನ್ ಮೂಲದ ಬಾಡಿಬಿಲ್ಡರ್ ಯುರಿ ತೊಲೊಚ್ಕೋ ತನ್ನ ಬಾಧೆಯನ್ನು ತೋಡಿಕೊಂಡಿದ್ದಾರೆ. ಕ್ರಿಸ್ಮಸ್ಗೂ ಮೊದಲೇ ಸೆಕ್ಸ್ ಡಾಲ್ ತುಂಡು ತುಂಡಾಗಿ ಮುರಿದುಬಿದ್ದಿದ್ದು, ಮತ್ತೆ ಎಂದಿನಂತೆ ಕಾರ್ಯನಿರ್ವಹಿಸುವ ಹಾಗೂ ಸರಿಯಾದ ರೀತಿಯಲ್ಲಿ ಜೋಡಿಸಲು ಸಾಧ್ಯವಾ ಎಂಬ ಚಿಂತೆಯಲ್ಲಿ ಮುಳುಗಿದ್ದಾರಂತೆ. ಒಂದು ವೇಳೆ ಮತ್ತೆ ಎಂದಿನಂತಾದರೆ ಇಬ್ಬರಿಗೂ ದೊರೆಯುವ ಬಹುದೊಡ್ಡ ಉಡುಗೊರೆ ಎಂದಿದ್ದಾರೆ.
ಅಂದಹಾಗೆ ಮಾರ್ಗೋ ಹೆಸರಿನ ಸೆಕ್ಸ್ ಡಾಲ್ ಅನ್ನು ಯುರಿ ಕಳೆದ ನವೆಂಬರ್ನಲ್ಲಿ ಕೆಲವೇ ಮಂದಿಯ ಅತಿಥಿಗಳ ನಡುವೆ ವರಿಸಿದ್ದಾರೆ. ಮಾರ್ಗೋಳನ್ನು ಮೊದಲ ಬಾರಿಗೆ ನೈಟ್ ಕ್ಲಬ್ ಒಂದರಲ್ಲಿ ಯುರಿ ಭೇಟಿಯಾದರಂತೆ. ಮಾರ್ಚ್ನಲ್ಲೇ ಸರಳವಾಗಿ ಮದುವೆಯು ಆಗಿದ್ದರಂತೆ. ಅದಾದ ಬೆನ್ನಲ್ಲೇ ಕರೊನಾ ವೈರಸ್ ವಕ್ಕರಿಸಿದ್ದರಿಂದ ನವೆಂಬರ್ನಲ್ಲಿ ಕೆಲವೇ ಅತಿಥಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ವರಿಸಿದ್ದು, ವೈವಾಹಿಕ ಜೀವನ ನಡೆಸುತ್ತಿದ್ದಾರೆ.
ತಮ್ಮ ಸಂಬಂಧದ ಬಗ್ಗೆ ವಿವರಣೆ ನೀಡಿರುವ ಯುರಿ, ಸಾಮಾನ್ಯವಾಗಿ, ನಾನು ಮಾರ್ಗೊ ಬಗ್ಗೆ ಅಸೂಯೆ ಪಟ್ಟಿದ್ದೇನೆ. ಮದುವೆಯ ಬಳಿಕ ಆಕೆಯನ್ನು ಹೆಚ್ಚು ಮಂದಿಗೆ ತೋರಿಸುತ್ತಿಲ್ಲ. ಅವಳನ್ನು ಇನ್ಸ್ಟಾಗ್ರಾಂನಿಂದಲೂ ನಿಷೇಧಿಸಿದ್ದೇನೆ. ಬಹುಶಃ ನಾನು ತುಂಬಾ ಸ್ವಾರ್ಥಿಯಾಗಿದ್ದೇನೆ. ಏಕೆಂದರೆ ಮಾರ್ಗೋ ಮೇಲೆ ನನಗೆ ತುಂಬಾ ಪ್ರೀತಿ ಇದೆ ಎಂದು ಹೇಳಿಕೊಂಡಿದ್ದಾರೆ.
ಕಝಾಕಿಸ್ತಾನದಲ್ಲಿ ಜನವರಿ 7ರಂದು ಕ್ರಿಸ್ಮಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಸದ್ಯ ಮುರಿದು ಹೋಗಿರುವ ಮಾರ್ಗೋಳ ದುರಸ್ಥಿಗಾಗಿ ಯುರಿ ಎದುರು ನೋಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಯುರಿ ಅವಳು ಮುರಿದುಹೋಗಿದ್ದಾಳೆ. ಈಗ ಅವಳನ್ನು ರಿಪೇರಿ ಮಾಡಲಾಗುತ್ತಿದೆ. ಹೀಗಾಗಿ ಅವಳು ಬೇರೆ ನಗರದಲ್ಲಿದ್ದಾಳೆ. ಯಾವಾಗ ಸರಿಯಾಗುತ್ತಾಳೋ ಅದು ನಮ್ಮಿಬ್ಬರಿಗೂ ದೊರೆಯುವ ಉಡುಗೊರೆ ಎಂದು ಖುಷಿ ವ್ಯಕ್ತಪಡಿಸಿದರು. (ಏಜೆನ್ಸೀಸ್)