

ನೂರ್ ಸುಲ್ತಾನ್: ಜಗತ್ತಿನಲ್ಲಿ ಎಂಥೆಂತಾ ವಿಚಿತ್ರ ಹವ್ಯಾಸವುಳ್ಳ ವ್ಯಕ್ತಿಗಳು ಇರುತ್ತಾರೆ ಎಂಬುದಕ್ಕೆ ಈ ವರದಿಯಲ್ಲಿ ಪರಿಚಯವಾಗಿರುವ ವ್ಯಕ್ತಿಯು ಸಹ ಒಂದು ಉದಾಹರಣೆ. ಸೆಕ್ಸ್ ಡಾಲ್ (ಲೈಂಗಿಕ ಬೊಂಬೆ) ಅನ್ನೇ ಮದುವೆಯಾಗಿರುವ ಬಾಡಿಬಿಲ್ಡರ್, ಮೊದಲ ಬಾರಿಗೆ ಅದರೊಟ್ಟಿಗೆ ಕ್ರಿಸ್ಮಸ್ ಆಚರಿಸುವ ಖುಷಿಯಲ್ಲಿರುವಾಗಲೇ ಸೆಕ್ಸ್ ಡಾಲ್ ಮುರಿದುಹೋಗಿ ಆಘಾತ ಎದುರಿಸಿದ್ದ. ಇದೀಗ ಆತ ನೆಟ್ಟಿಗನೊಬ್ಬ ಕೇಳಿದ ಪ್ರಶ್ನೆಗೆ ಹುಬ್ಬೇರುವಂತಹ ಉತ್ತರ ನೀಡಿದ್ದಾನೆ.
ವಿವರಣೆಗೆ ಬರುವುದಾದರೆ, ಕಝಾಕಿಸ್ತಾನ್ ಮೂಲದ ಬಾಡಿಬಿಲ್ಡರ್ ಯುರಿ ತೊಲೊಚ್ಕೋ ಕಳೆದ ವರ್ಷ ನವೆಂಬರ್ನಲ್ಲಿ ಮಾರ್ಗೋ ಹೆಸರಿನ ಸೆಕ್ಸ್ ಡಾಲ್ ಅನ್ನು ಮದುವೆಯಾಗಿದ್ದ. ಕ್ರಿಸ್ಮಸ್ಗೂ ಮೊದಲೇ ಸೆಕ್ಸ್ ಡಾಲ್ ತುಂಡು ತುಂಡಾಗಿ ಮುರಿದುಬಿದ್ದು, ಮತ್ತೆ ಎಂದಿನಂತೆ ಕಾರ್ಯನಿರ್ವಹಿಸುವ ಹಾಗೂ ಸರಿಯಾದ ರೀತಿಯಲ್ಲಿ ಜೋಡಿಸಲು ರಿಪೇರಿಗೆ ನೀಡಿರುವುದಾಗಿ ಕ್ರಿಸ್ಮಸ್ಗೂ ಒಂದು ವಾರದ ಮುಂಚೆ ಬಹಿರಂಗಪಡಿಸಿದ್ದ.
ಇದೀಗ ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದುನ್ನು ಪೋಸ್ಟ್ ಮಾಡಿರುವ ಯುರಿ ತೊಲೊಚ್ಕೋ, ಕೇವಲ ಒಳಉಡುಪಿನಲ್ಲಿ ಹಾಸಿಗೆ ಮೇಲೆ ಮಲಗಿ ಸಣ್ಣ ರೇಖೆಗಳಿರುವ ಸಿಲ್ವರ್ ವಸ್ತುವನ್ನು ಸ್ಪರ್ಶಿಸುತ್ತಿರುವ ದೃಶ್ಯವಿದೆ. ಸುಮಾರು 99 ಸಾವಿರ ಫಾಲೋವರ್ಸ್ ಹೊಂದಿರುವ ಯುರಿ, ನಾನು ಹೊಸ ಉತ್ಸಾಹವನ್ನು ಹೊಂದಿದ್ದೇನೆ ಎಂದು ತೋರುತ್ತಿದೆ ಎಂದು ಬರೆದುಕೊಂಡಿದ್ದಾನೆ.
ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗನೊಬ್ಬ ನೀವು ನಿಮ್ಮ ಪತ್ನಿಗೆ ಮೋಸ ಮಾಡುತ್ತೀದ್ದೀರಾ? ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ಯುರಿ, ಇರಬಹುದು, ಅವಳು ಆಸ್ಪತ್ರೆಯಲ್ಲಿ ಇರುವಾಗ ನನಗೆ ಸುಮ್ಮನೆ ಇರಲು ಆಗುವುದಿಲ್ಲ ಎಂದಿದ್ದಾನೆ. ಅಲ್ಲದೆ, ಇದಕ್ಕೂ ನಿಜಕ್ಕೂ ಅದ್ಭುತ ಎಂದು ತನ್ನ ಫಾಲೋವರ್ಸ್ಗೆ ಹೇಳಿದ್ದಾನೆ.
ಅಂದಹಾಗೆ ಮಾರ್ಗೋ ಹೆಸರಿನ ಸೆಕ್ಸ್ ಡಾಲ್ ಅನ್ನು ಯುರಿ ಕಳೆದ ನವೆಂಬರ್ನಲ್ಲಿ ಕೆಲವೇ ಮಂದಿಯ ಅತಿಥಿಗಳ ನಡುವೆ ವರಿಸಿದ್ದಾನೆ. ಮಾರ್ಗೋಳನ್ನು ಮೊದಲ ಬಾರಿಗೆ ನೈಟ್ ಕ್ಲಬ್ ಒಂದರಲ್ಲಿ ಯುರಿ ಭೇಟಿಯಾದರಂತೆ. ಮಾರ್ಚ್ನಲ್ಲೇ ಸರಳವಾಗಿ ಮದುವೆಯು ಆಗಿದ್ದರಂತೆ. ಅದಾದ ಬೆನ್ನಲ್ಲೇ ಕರೊನಾ ವೈರಸ್ ವಕ್ಕರಿಸಿದ್ದರಿಂದ ನವೆಂಬರ್ನಲ್ಲಿ ಕೆಲವೇ ಅತಿಥಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ವರಿಸಿದ್ದು, ವೈವಾಹಿಕ ಜೀವನ ನಡೆಸುತ್ತಿದ್ದಾರೆ.
ತಮ್ಮ ಸಂಬಂಧದ ಬಗ್ಗೆ ವಿವರಣೆ ನೀಡಿರುವ ಯುರಿ, ಸಾಮಾನ್ಯವಾಗಿ, ನಾನು ಮಾರ್ಗೊ ಬಗ್ಗೆ ಅಸೂಯೆ ಪಟ್ಟಿದ್ದೇನೆ. ಮದುವೆಯ ಬಳಿಕ ಆಕೆಯನ್ನು ಹೆಚ್ಚು ಮಂದಿಗೆ ತೋರಿಸುತ್ತಿಲ್ಲ. ಅವಳನ್ನು ಇನ್ಸ್ಟಾಗ್ರಾಂನಿಂದಲೂ ನಿಷೇಧಿಸಿದ್ದೇನೆ. ಬಹುಶಃ ನಾನು ತುಂಬಾ ಸ್ವಾರ್ಥಿಯಾಗಿದ್ದೇನೆ. ಏಕೆಂದರೆ ಮಾರ್ಗೋ ಮೇಲೆ ನನಗೆ ತುಂಬಾ ಪ್ರೀತಿ ಇದೆ ಎಂದು ಹೇಳಿಕೊಂಡಿದ್ದಾನೆ. (ಏಜೆನ್ಸೀಸ್)