

Nigerian: 32 ವರ್ಷದ ನೈಜೀರಿಯಾ ಮೂಲದ ಮಹಿಳೆಯ ಶವ ಬೆಂಗಳೂರು ಹೊರವಲಯದ ಚಿಕ್ಕಜಾಲದಲ್ಲಿ ಪತ್ತೆಯಾಗಿದೆ.
ಬೆಟ್ಟಹಲಸೂರು ಮುಖ್ಯ ರಸ್ತೆಯ ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಆಕೆಯ ಎಡ ಹಣೆಯ ಮೇಲೆ ಗಾಯ ಹಾಗೂ ಕತ್ತು ಹಿಸುಕಿದ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಳನ್ನು ಪೊಲೀಸರು ಗುರುತಿಸಿದ್ದು, ಆಕೆ ಮೂಲತ: ಆಫ್ರಿಕಾದ ಕ್ರಾಸ್ ರಿವರ್ ರಾಜ್ಯದ ಲೋವಿತ್ ಎಂದು ಹೇಳಿದ್ದಾರೆ. ಮೃತಳ ಪಾಸ್ ಪೋರ್ಟ್ ಚಿಕ್ಕ ಮಜಾಲ ಪೊಲೀಸರಿಗೆ ಪತ್ತೆಯಾಗಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿ ನೆಲೆಸಿದ್ದಳು ಎಂದು ತಿಳಿದುಬಂದಿದೆ.
ಈ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು, ಆಕೆ ಭಾರತಕ್ಕೆ ಬಂದಿದ್ದರ ಹಿಂದಿನ ಉದ್ದೇಶವೇನು? ಕಳೆದ ರಾತ್ರಿ ಕೊಲೆಗೂ ಮುನ್ನ ಆಕೆ ಸಂಪರ್ಕದಲ್ಲಿದ್ದವರು ಯಾರು ಎನ್ನುವುದರ ಬಗ್ಗೆ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಲೋವಿತ್ಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಕೆಯ ಸಂಪರ್ಕದಲ್ಲಿದ್ದವರನ್ನು ಕರೆಸಿ ವಿಚಾರಣೆ ಮುಂದಿವರೆಸಿದ್ದು, ಕೊಲೆಗೆ ಕಾರಣವೇನು ಎಂಬುದರ ಕುರಿತು ಚಿಕ್ಕಜಾಲ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. (ಏಜೆನ್ಸೀಸ್)