ಸಂಜೆಯಾದ್ರೂ ಮನೆಗೆ ಬಾರದ ಪತ್ನಿಯನ್ನು ಹುಡುಕಿಕೊಂಡು ಅಂಗನವಾಡಿಗೆ ಹೋದ ಗಂಡನಿಗೆ ಕಾದಿತ್ತು ಶಾಕ್​!

Odisha Woman
Published on

ಭುವನೇಶ್ವರ್​: ಅಂಗನವಾಡಿ ಕೇಂದ್ರದಲ್ಲೇ ಮಹಿಳಾ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದ ಬಾಲಸೋರ್​ ಜಿಲ್ಲೆಯ ಖಾಂತಪದ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಮಹಾರಾಜಪುರ್​ ಏರಿಯಾದ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ನಡೆದಿದೆ.

ಮೃತಳನ್ನು ಪ್ರಜ್ಯನಾ ಪರಿಮಿತ ದಾಸ್​ ಎಂದು ಗುರುತಿಸಲಾಗಿದೆ. ಪೊಲೀಸ್​ ಮೂಲಗಳ ಪ್ರಕಾರ ಪರಿಮಿತ ದಾಸ್​ ಎಂದಿನಂತೆ ಶುಕ್ರವಾರ ಬೆಳಗ್ಗೆ ಅಂಗನವಾಡಿ ಕೇಂದ್ರಕ್ಕೆ ತೆರಳಿದಳು. ಸಂಜೆ ಎಲ್ಲರು ಮನೆಗೆ ಹೋದರು ಆಕೆ ಮಾತ್ರ ಮನೆಗೆ ಹಿಂತಿರುಗದನ್ನು ಗಮನಿಸಿ ಆಕೆಯ ಪತಿ ಬಿಸ್ಮಿತ್​ ರಂಜನ್​ ದಾಸ್​, ಅಂಗನವಾಡಿ ಕೇಂದ್ರಕ್ಕೆ ತೆರಳಿ ನೋಡಿದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿಯನ್ನು ನೋಡಿ ಶಾಕ್​ಗೆ ಒಳಗಾಗಿದ್ದಾನೆ.

ತಕ್ಷಣ ಆಕೆಯನ್ನು ಖಾಂತಪದ ಆಸ್ಪತ್ರೆಗೆ ದಾಖಲಿಸಿದಾದರೂ ಆಕೆ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ಘೋಷಣೆ ಮಾಡಿದರು. ಕೌಟುಂಬಿಕ ಸಮಸ್ಯೆಗಳಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಆಕೆಯ ಗಂಡ ಬಿಸ್ಮಿತ್ ಮದ್ಯವ್ಯಸನಿ ಮತ್ತು ಅವನ ಹೆತ್ತವರು ಆಕೆಯನ್ನು ಹಿಂಸಿಸುತ್ತಿದ್ದರು ಹಾಗೂ ಯಾವಾಗಲೂ ಜಗಳವಾಡುತ್ತಿದ್ದರು ಎಂದು ಆರೋಪ ಮಾಡಿದ್ದಾರೆ.

ಪರಿಮಿತ ದಾಸ್​ ಆತ್ಮಹತ್ಯೆ ಮಾಡಿಕೊಳ್ಳಲು ಯಾವುದೇ ಕಾರಣವಿರಲಿಲ್ಲ. ನನ್ನ ಮಗಳು ಮಾನಸಿಕವಾಗಿ ತುಂಬಾ ಶಕ್ತಿಯುತಳಾಗಿದ್ದಳು. ಆಕೆಯ ಪತಿ ಮದ್ಯವ್ಯಸನಿ ಮತ್ತು ಆಕೆಯ ಅತ್ತೆ ದುಷ್ಟ ಮಹಿಳೆ. ಅವರು ನನ್ನ ಮಗಳನ್ನು ಹಿಂಸಿಸಿ ಕೊಂದಿದ್ದಾರೆ ಎಂದು ಮೃತಳ ತಾಯಿ ಸರಸ್ವತಿ ದಾಸ್ ಆರೋಪಿಸಿದ್ದಾರೆ.

ಮೃತಳ ತಂದೆ ಬಿದ್ಯಧರ ದಾಸ್ ಮಾತನಾಡಿ, ನನ್ನ ಮಗಳು ಪ್ರೇಮ ವಿವಾಹವಾಗಿದ್ದಳು. ಆದರೆ, ನನ್ನ ಅಳಿಯ ಮದ್ಯವ್ಯಸನಿಯಾಗಿದ್ದ ಮತ್ತು ಅವನ ಕುಟುಂಬವು ನನ್ನ ಮಗಳನ್ನು ಎಂದಿಗೂ ಇಷ್ಟಪಡಲಿಲ್ಲ. ಅವರೆಲ್ಲ ಸೇರಿ ನನ್ನ ಮಗಳ ದೇಹವನ್ನು ನೇಣು ಹಾಕುವ ಮೊದಲು ಕೊಂದಿದ್ದಾರೆ ಅಥವಾ ಅವರ ಹಿಂಸೆಯ ಕಾರಣದಿಂದಾಗಿ ಅವಳೇ ನೇಣು ಹಾಕಿಕೊಂಡಿದ್ದಾಳೆ. ಏನೇ ಆಗಿದ್ದರೂ ಅದಕ್ಕೆ ಅವರೇ ಕಾರಣ. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

ಸಾವಿನ ಬಗ್ಗೆ ಮಾಹಿತಿ ಪಡೆದ ಖಾಂತಪದ ಪೊಲೀಸರು ಸ್ಥಳಕ್ಕಾಗಮಿಸಿ ಬಿಸ್ಮಿತ್ ಹಾಗೂ ಆತನ ತಾಯಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net